ಪುಟ:ಕಥಾಸಂಗ್ರಹ ಸಂಪುಟ ೨.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೇತುಬಂಧನದ ಕಥೆ 111 ಈ ಗೋದಕಗಳನ್ನು ಸುರಿದರು. ನಾರದನು ಸಂತೋಷದಿಂದ ದಿವ್ಯ ವೀಣಾ ಗಾನವನ್ನು ಮಾಡಿದನು. ಅಪ್ಪರಸ್ತ್ರೀಯರು ಮನೋಲ್ಲಾಸದಿಂದ ನರ್ತನವನ್ನು ಮಾಡಿದರು. ಅನಂ ತರದಲ್ಲಿ ವಿಭೀಷಣನು ಶರತ್ಕಾಲದ ಪೂರ್ಣಿಮಾ ಚಂದ್ರನಂತಿರುವ ಮುಖವುಳ್ಳವನಾಗಿ ಬಂದು ರಾಮನ ಪಾದಕಮಲಗಳಿಗೆ ಭಕ್ತಿಯಿಂದ ನಮಸ್ಕರಿಸಲು ಆಗ ಶ್ರೀರಾಮ ಚಂದ್ರನು ಆತನನ್ನು ತೆಗೆದು ಆಲಿಂಗಿಸಿಕೊಂಡು ತನ್ನ ತೊಡೆಯೆಂಬ ಸಿಂಹಾಸನದ ಮೇಲೆ ಕುಳ್ಳಿರಿಸಿ ತನ್ನ ನೇತ್ರಗಳೆಂಬ ಪೊಂಗೊಡಗಳಲ್ಲಿ ತುಂಬಿದ ಆನಂದಬಾಷ್ಪಗ. ಳೆಂಬ ಪನ್ನೀರುಗಳಿಂದ ತಾನೂ ಆತನಿಗೆ ಅಂಕಾರಾಜ್ಯಾಭಿಷೇಕವನ್ನು ಮಾಡಿ-ಚಿರಂ, `ಜೀವಿಯಾಗಿದ್ದು ಕೊಂಡು ಈಗಿರುವ ಬ್ರಹ್ಮ ಕಲ್ಪದ ಪರ್ಯ೦ತರವೂ ಈ ಅಂಕಾರಾಜ್ಯ ವನ್ನು ಅನುಭವಿಸಿಕೊಂಡಿರು ಎಂದು ತಲೆಯ ಮೇಲೆ ಕೈಗಳನ್ನಿಟ್ಟು ಆಶೀರ್ವಾದ ವನ್ನು ಮಾಡಿ - ಎಲೈ ಪ್ರಿಯನಾದ ವಿಭೀಷಣನೇ ! ಈಗ ನಾವು ರಾವಣನ ಮೇಲೆ ಮಾಡಬೇಕಾಗಿರುವ ರಾಜಕಾರ್ಯಕ್ಕೆ ಸಮುದ್ರರಾಜನು ತಡೆಯಾಗಿರುವನಲ್ಲ ! ಈ ಶತಯೋಜನ ವಿಸ್ತಾರವಾದ ಸಮುದ್ರವನ್ನು ನಾವೂ ನಮ್ಮ ಸೇನೆಗಳೂ ನಿರಾಯಾಸ ವಾಗಿ ದಾಟಿ ಲಂಕೆಯನ್ನು ಸೇರುವುದಕ್ಕೆ ಯಾವ ಉಪಾಯವನ್ನು ಮಾಡಬೇಕು ? ಈ ವಿಷಯದಲ್ಲಿ ನಿನ್ನ ಬುದ್ದಿಗೆ ಏನು ತೋಚುತ್ತದೆ ಎಂದು ಕೇಳಿದನು. ಅದಕ್ಕೆ ವಿಭೀಷಣನು ಕೈಮುಗಿದು ನಿಂತುಕೊಂಡು ಸ್ವಾಮಿ ಸರ್ವಜ್ಞನೇ ! ಭಕ್ತರಾದ ಸರ್ವ ಜನರನ್ನೂ ಅಪಾರವಾದ ಸಂಸಾರಸಾಗರದಿಂದ ಸುಲಭವಾಗಿ ದಾಟಿಸುವ ಮಹಾತ್ಮನಾದ ನಿನಗೆ ನಿನ್ನಿಂದ ಸೃಷ್ಟಿಸಲ್ಪಟ್ಟ ಈ ಬ್ರಂಹಾಂಡದಲ್ಲಿ ಸ್ವಲ್ಪ ಮಾತ್ರವಾ ಗಿರುವ ನೂರು ಯೋಜನ ವಿಸ್ತೀರ್ಣ ಸಮುದ್ರವನ್ನು ದಾಟುವದು ಅಸಾಧ್ಯ ಕಾ ರ್ಯವೇ ? ಆದರೂ ಧರ್ಮಸಂಸ್ಥಾಪನಾರ್ಥವಾಗಿ ನರರೂಪವನ್ನು ಧರಿಸಿ ಲೋಕದವ ರಂತೆ ನಟಿಸುತ್ತಿರುವ ಪರಮ ಪುರುಷನಾದ ನಿನ್ನ ಲೀಲಾನಾಟಕಕ್ಕೆ ಅನುಸಾರವಾಗಿ ಈ ಸಮುದ್ರರಾಜನನ್ನು ಕುರಿತು ತಪಸ್ಸನ್ನು ಮಾಡಿ ಆತನು ಪ್ರಸನ್ನ ನಾಗುವಂತೆ ಮಾಡಿಕೊಳ್ಳಬೇಕೆಂದು ನನ್ನ ಬುದ್ದಿಗೆ ತೋಚುತ್ತದೆಂದು ಅರಿಕೆಮಾಡಿಕೊಂಡನು. ಆ ಮಾತುಗಳನ್ನು ಕೇಳಿ ಶ್ರೀರಾಮಚಂದ್ರನು ತನ್ನ ಮನೋಗತವಾದ ಅಭಿ ಪ್ರಾಯವನ್ನೇ ಭಕ್ತನಾದ ವಿಭೀಷಣನೂ ಹೇಳಿದನೆಂದು ಭಾವಿಸಿ ಆತನ ಬುದ್ದಿ ಕೌಶ ಲ್ಯಕ್ಕೆ ಬಹಳವಾಗಿ ಸಂತೋಷಿಸಿ ಆಕ್ಷಣದಲ್ಲಿಯೇ ಕೈ ಕಾಲೋಗಗಳನ್ನು ತೊಳೆದು ಕೊಂಡು ಶುದ್ಧಾಚಮನವನ್ನು ಮಾಡಿ ಕಡಲ್ಲಡದಲ್ಲಿ ದರ್ಭೆಯನ್ನು ಹಾಕಿ ಕುಳಿತು ಕೊಂಡು ಸಮುದ್ರರಾಜನನ್ನು ಕುರಿತು- ಎಲೈ ಸರ್ವಪ್ರಾಣಿಗಳಿಗೂ ಆಧಾರಭೂತ ನಾದ ರತ್ನಾಕರನೇ ! ಮಹಾ ಗಾಂಭೀರ್ಯಸಂಪನ್ನನೇ ! ನಿನ್ನ ಶರಣಾಗತನಾದ ನಾನು ಸೇನೆಯೊಡನೆ ಸುಖವಾಗಿ ಲಂಕೆಗೆ ಹೋಗುವುದಕ್ಕೆ ದಾರಿಯನ್ನು ಕೊಟ್ಟು ನನ್ನನ್ನು ಕಾಪಾಡುವವನಾಗಬೇಕು. ನೀನು ಹಾಗೆ ಮಾಡದಿದ್ದರೆ ನಾನು ನಿರಾಹಾರಿಯಾಗಿ ನಿನ್ನ ಸನ್ನಿಧಾನದಲ್ಲೇ ಪ್ರಾಣಗಳನ್ನು ಬಿಡುವೆನು ಎಂದು ನಿರಶನವ್ರತವನ್ನು ಕೈಕೊಂಡು ದರ್ಭಶಯ್ಕೆಯಲ್ಲಿ ಮಲಗಿಕೊಂಡನು. ಶ್ರೀರಾಮನು ಹೀಗೆ ಮೂರು ದಿನಗಳ ಪರ್ಯ೦ತರವೂ ಶುದ್ಧ ಮನಸ್ಸಿನಿಂದ ಪ್ರಾರ್ಥನೆ ಮಾಡುತ್ತ ಮಲಗಿಕೊಂಡಿ