ಪುಟ:ಕಥಾಸಂಗ್ರಹ ಸಂಪುಟ ೨.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೇತುಬಂಧನದ ಕಥೆ 115 ಎಂದು ಅಪ್ಪಣೆಯನ್ನು ಕೊಡಲು ಆಗ ಸುಗ್ರೀವನು ನಳನನ್ನು ಕರಿಸಿ ಅವನಿಗೆ ಶ್ರೀರಾ ಮನ ಆಜ್ಞೆಯನ್ನು ಹೇಳಲು ಆತನು ಸಂತೋಷದಿಂದ ರಾಮನ ಚರಣಾರವಿಂದ ಗಳಿಗೆ ನಮಸ್ಕರಿಸಿ ಮೊದಲು ಹನುಮಂತನು ನಿಂತು ಲಂಕಾನಗರಕ್ಕೆ ಹಾರಿದ ಸ್ಥಳ ವಾದ ಮಹೇಂದ್ರಾದಿಯನ್ನು ಸಮಲವಾಗಿ ಕಿತ್ತು ಅಂಬುಧಿಯ ಬಡಗಣ ದಿಕ್ಕಿನ ಮೊದಲಿನಲ್ಲಿಟ್ಟು ಸೇತುವನ್ನು ಕಟ್ಟುವುದಕ್ಕೆ ಪ್ರಾರಂಭಿಸಿದನು. ಆಗ ಆಕಾಶದಲ್ಲಿ ಬಿಡುಗಣ್ಣರು ಆತನ ಸಾಹಸವನ್ನು ನೋಡಿ ಮೆಚ್ಚಿ ಶಹಬಾಸು ! ಶಹಬಾಸು ಎಂದು ಹೊಗಳಿದರು. ಶ್ರೀರಾಮನು ನಸುನಕ್ಕು ನಲಿದನು. ಆಗ ಶತಬಲಿಯೆಂಬ ಕಪಿವೀರನು ಈ ನಳನು ಕಿತ್ತು ತಂದ ಮಹೇಂದ್ರಗಿರಿಯು ಬಲು ದೊಡ್ಡದೋ ಎಂದು ಶೀಘ್ರವಾಗಿ ಹೋಗಿ ದಶಯೋಜನ ವಿಸ್ತಾರವಾದ ಒಂದು ಮಹಾಭೂಧರವನ್ನು ಕಿತ್ತು ಕೊಂಡು ಬಂದು ನಳನ ಹಸ್ತಕ್ಕೆ ಕೊಟ್ಟನು. ಆಗ ಅವನದನ್ನು ಮಹೇಂದ್ರನಗರದ ಒತ್ತಿನಲ್ಲಿಟ್ಟನು. ತತ್ಕ್ಷಣದಲ್ಲೇ ಗಜಗವಯಾದಿ ವಾನರನಾಯಕರೆಲ್ಲರೂ ಹುರುಡಿಂದ ಹೋಗಿ ಮಹಾಪರ್ವತಗಳನ್ನು ತಂದು ತಂದು ನಳನ ಕೈಗೆ ಕೊಡುತ್ತಿದ್ದರು. ಆ ನಳನ ಸಾಮ ರ್ಥ್ಯವಿನ್ನೆ ಷೋ ? ಅಸಂಖ್ಯಾತರಾದ ಕಪಿಸೇನಾನಾಯಕರೆಲ್ಲರೂ ವಿರಾಮವಿಲ್ಲದೆ ತಂದು ತಂದು ಕೊಡುವ ತೋರವಾದ ಬೆಟ್ಟಗಳನ್ನು ಲಕ್ಷ್ಯವಿಲ್ಲದೆ ತನ್ನ ಕೈಯಲ್ಲಿ ತೆಗೆದುಕೊಂಡು ಎಸೆಯುತ್ತಿರಲು ಆ ಪರ್ವತಗಳು ಸೂತ್ರಿಸಿದ ಪ್ರಕಾರವಾಗಿ ಓರೆ ಕೋರೆಯಾಗದೆ ಸಾಗರದಲ್ಲಿ ಬೀಳುತ್ತಿದ್ದು ವು. ಆಗ ಮಹಾಗಿರಿಗಳು ಬೀಳುತ್ತಿರುವ ಮಹಾಘಾತದಿಂದಲೂ ಮಾನೊಸಳೆ ನೀರಾನೆಯಾಮೆಗಳೇ ಮೊದಲಾದ ಮಹಾ ಜಲಜಂತುಗಳು ಭಯದಿಂದ ಆ ಸೇತು ಬಂಧನಸ್ಥಾನವನ್ನು ಬಿಟ್ಟು ಮತ್ತೊಂದು ಕಡೆಗೆ ಓಡಿಹೋಗುತ್ತಿರುವ ವೇಗದಿಂದಲೂ ಆ ಸಮುದ್ರದ ಅಗಾಧತೆಯು ಕದಲಿ ಬಲ್ವೆರೆಗುಳುಂಟಾಗಿ ಅಂಬರದ ತುದಿಯ ವರೆಗೂ ಹಾರುತ್ತಿದ್ದುದರಿಂದ ಅಕಾಲಪ್ರಳಯವುಂಟಾಗುತ್ತಿರುವುದೋ ಎಂಬ ಭಯದಿಂದ ಬಾಧಿಸಲ್ಪಟ್ಟು ಜೀವಿಜಾಲವು ಕಂಪಿಸುತ್ತಿದ್ದಿತು. ನಳನ ಸೇತುನಿರ್ಮಾಣ ಕಾರ್ಯಕ್ಕೆ ಉಪಯೋಗಿಸಲ್ಪಟ್ಟು ಅಂಗ ವಂಗ ಕಳಿಂಗ ಕೇರಳ ಕಾಶ್ಮೀರ ಪಾರಶೀಕ ಗೌಳ ಮಾಳವ ಗೂರ್ಜರ ಗಾಂಧಾರ ಪಾಂಚಾಳ ಸೇವಣ ಸಿಂಧು ಕಾಂಭೋಜ ಆಂಧ್ರ ಕರೂಷ ಕುರು ಹಮೂಾರಾದಿ ದೇಶಗಳ ದೊಡ್ಡ ದೊಡ್ಡ ಬೆಟ್ಟ ಗಳೆಲ್ಲಾ ತೀರಿ ಹೋದುವು. ಇಷ್ಟಾ ದಾಗ ಸೇತುವು ಬೆಳೆದು ಸ್ವಲ್ಪವಾದರೂ ಮುಂದಕ್ಕೆ ಸಾಗದಿರಲು ಪುನಃ ಕಪಿ ನಾಯಕರು ಹೋಗಿ ಕಿನ್ನರ ಕಿಂಪುರುಷ ಗುಹ್ಯಕ ಯಕ್ಷ ವಿದ್ಯಾಧರ ಖಚರ ಗರುಡ ಗಂಧರ್ವಾದಿಗಳ ನಾನಾ ವಿಧವಾದ ಭೂಮಿಗಳಲ್ಲಿರುವ ದೊಡ್ಡ ದೊಡ್ಡ ಬೆಟ್ಟಗಳನ್ನು ಕಿತ್ತು ತಂದು ನಳನ ಕೈಯಲ್ಲಿ ಕೊಡಲು ಅವನು ತೆಗೆದು ಕೊಂಡು ಸಮುದ್ರದಲ್ಲಿ ಅಡಕುತ್ತಿದ್ದನು. ಈ ರೀತಿಯಾಗಿ ಕಪಿಸೇನಾನಾಯಕರೆಲ್ಲರೂ ತಂದುತಂದಿಡುತ್ತಿರುವ ಮಹಾ ಗಿರಿಗಳನ್ನು ನಳನು ತೆಗೆತೆಗೆದೊಟ್ಟಿ ಮೆಟ್ಟಿ ಗಿರಿಗಿರಿಗೆ ಜೋಡಿಸಿ ಸಣ್ಣ ಗುಡ್ಡಗಳನ್ನು ಸಂದುಗಳಲ್ಲಿಟ್ಟು ತುಳಿದು ದೊಡ್ಡ ಗಿರಿಗಳನ್ನು ತೆಗೆದುಕೊಂಡು ಕಟ್ಟೆಯಲ್ಲಿಟ್ಟು