ಪುಟ:ಕಥಾಸಂಗ್ರಹ ಸಂಪುಟ ೨.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ದಿಗ್ವಿಜಯವು ಕೊಟ್ಟಿದ್ದ ವಿಮಾನವನ್ನೇರಿ ಹೊರಟು ಆ ಲಂಕಾ ನಗರವನ್ನು ಸೇರಿ ಅಲ್ಲಿ ಪ್ರಭುತ್ವ ವನ್ನು ಮಾಡಿಕೊಂಡು ಸುಖದಿಂದಿರುತ್ತಿದ್ದನು.

  • ಹೀಗಿರಲು ಮೊದಲು ಹೋಗಿ ರಸಾತಲದಲ್ಲಿ ಅವಿತುಕೊಂಡಿದ್ದ ಮಾಲಿ ಸುಮಾಲಿ ಮಾಲ್ಯವಂತರೆಂಬ ಮರುಮಂದಿ ರಕ್ಕಸರಲ್ಲಿ ಒಬ್ಬನಾದ ಸುಮಾಲಿ ಎಂಬ ವನು ಭೂಲೋಕದಲ್ಲಿ ಸಂಚರಿಸಬೇಕೆಂಬ ಅಭಿಪ್ರಾಯದಿಂದ ತನ್ನ ಮಗಳಾದ ಕೈಕಸೆ ಯನ್ನು ಕರೆದುಕೊಂಡು ರಸಾತಲದಿಂದ ಹೊರಟು ಬಂದು ಭೂಲೋಕದಲ್ಲಿ ಸಂಚರಿ ಸುತ್ತಿರಲು ಒಂದಾನೊಂದು ದಿನ ವೈಶ್ರವಣನು ಪಿತೃದರ್ಶನಾಸಕ್ತನಾಗಿ ವಿಮಾನ ದಲ್ಲಿ ಕುಳಿತು ಹೊರಟು ಗಗನಮಾರ್ಗದಲ್ಲಿ ದ್ವಿತೀಯ ಸೂರ್ಯನಂತೆ ಪ್ರಕಾಶಿಸುತ್ತ ತಂದೆಯ ಬಳಿಗೆ ಬಂದು ಆತನಿಗೆ ವಂದಿಸಿ ತಿರಿಗಿ ಲಂಕಾಪಟ್ಟಣವನ್ನು ಕುರಿತು ತೆರಳಿ ದುದನ್ನು ನೋಡಿ ಅಸೂಯಾಭರಿತನಾಗಿ-ನಮ್ಮ ಲಂಕಾನಗರವನ್ನು ಇವನಿಂದ ಕಿತ್ತು ಕೊಂಡು ನಮ್ಮ ನಿವಾಸಯೋಗ್ಯವಾಗಿ ಮಾಡಿಕೊಳ್ಳುವುದಕ್ಕೆ ಏನು ಉಪಾಯವನ್ನು ಮಾಡಬೇಕೆಂದು ಸ್ವಲ್ಪ ಕಾಲದ ವರೆಗೂ ಯೋಚಿಸಿ ಸಮೀಪವರ್ತಿನಿಯಾಗಿರುವ ತನ್ನ ಮಗಳಾದ ಕೈಕಸೆಯನ್ನು ನೋಡಿ-ಎಲೈ ಪುತ್ರಿಯೇ ! ನೀನು ಈ ಆಶ್ರಮದಲ್ಲಿರುವ ವಿಶ್ರವಸ್ಸೆಂಬ ಮಹಾಮುನಿಯ ಬಳಿಗೆ ಹೋಗಿ ಆತನನ್ನು ವರಿಸಿ ಆ ಮಹಾತ್ಮನಿಂದ ಮಕ್ಕಳನ್ನು ಪಡೆದರೆ ಆ ಮಕ್ಕಳ ಸಹಾಯದಿಂದ ನಾವು ಲಂಕಾಪಟ್ಟಣವನ್ನು ಪುನಃ ಹೊಂದಬಹುದು ಎಂದು ಹೇಳಿ ಆಕೆಯನ್ನು ಆ ಮುನಿಯ ಬಳಿಗೆ ಕಳುಹಿಸಿದನು.

- ಆಗ ಸರ್ವಾ೦ಗಸುಂದರಿಯ ಕೋಮಲೆಯ ಆದ ಆ ಕೈಕಸೆಯು ಸಾಯಂ ಸಂಧ್ಯಾ ಸಮಯದಲ್ಲಿ ಆ ಮುನಿಪತಿಯ ಸವಿಾಪವನ್ನೆ ಮೈ ನಮಾನನೆಯಾಗಿ ನಿಂತು ತನ್ನ ಪಾದಾಂಗುಷ್ಠ ದಿಂದ ಭೂಮಿಯನ್ನು ಗೀರುತ್ತ ಇರಲು ಆತನು ತನ್ನ ಜ್ಞಾನ ದೃಷ್ಟಿಯಿಂದ ಈಕೆಯ ಮನೋಗತವನ್ನು ತಿಳಿದು ಈಕೆಯನ್ನು ಕುರಿತು ಎಲೆ ಕಾಂತಾಮಣಿಯೇ ! ನೀನು ಬಂದುದಕ್ಕೆ ಕಾರಣವು ತಿಳಿಯಿತು. ರಾಕ್ಷಸ ಸಂಚಾ ರಕ್ಕೆ ಯೋಗ್ಯವಾದ ಈ ಮುಚ೦ದೆಯ ಹೊತ್ತಿನಲ್ಲಿ ನೀನು ಪುತ್ರಾಪೇಕ್ಷಿಣಿಯಾಗಿ ನನ್ನ ಬಳಿಗೆ ಬಂದುದರಿಂದ ಲೋಕಕಂಟಕರೂ ಭಯಂಕರಾಕಾರರೂ ಆದ ಇಬ್ಬರು ಮಕ್ಕಳೂ ಒಬ್ಬಳು ಮಗಳೂ ನಿನ್ನ ಗರ್ಭದಲ್ಲಿ ಹುಟ್ಟುವರು ಎಂದು ಹೇಳಲು ಆಕೆಯು ಅಪಾರ ದುಃಖದಿಂದ ಆ ಮುನಿಯನ್ನು ನೋಡಿ ಧಾರಾರೂಪವಾಗಿ ಕಣ್ಣೀ ರನ್ನು ಸುರಿಸಲು ಆಗಲಾ ಯತಿಯು ದಯಾವಂತನಾಗಿ-ಎಲೈ ಸುಂದರಿಯೇ ! ಧರ್ಮಿಷ್ಟನಾಗಿಯೂ ನಮ್ಮ ಕುಲಕ್ಕೆ ಭೂಷಣನಾಗಿಯೂ ಮತ್ತು ಸಚ್ಚನನಾಗಿಯ ಇರುವ ಇನ್ನೊಬ್ಬ ಮಗನು ಹುಟ್ಟು ವನು. ಹೋಗು ಎಂದು ತಿರಿಗಿ ಅಪ್ಪಣೆಯನ್ನು ಕೊಟ್ಟು ದರಿಂದ ಆ ಕೈಕಸೆಯು ಆತನಿಗೆ ನಮಸ್ಕಾರವನ್ನು ಮಾಡಿ ಹಿಂದಿರುಗಿ ತಂದೆಯ ಬಳಿಗೆ ಬಂದು ನಡೆದ ವರ್ತಮಾನವನ್ನೆಲ್ಲಾ ಹೇಳಿದಳು. ಆಗ ಸುಮಾಲಿಯು ಸಂತೋಷಿಸಿ ಮೊಮ್ಮಕ್ಕಳ ಉದಯವನ್ನು ನಿರೀಕ್ಷಿಸುತ್ತ ಆ ಮುನಿವನದಲ್ಲಿಯೇ ಇರುತ್ತಿದ್ದನು. ಅನಂತರದಲ್ಲಿ ಕೆಲವು ದಿನಗಳು ಕಳೆದುಹೋದ ಮೇಲೆ ಕೈಕಸೆಯು ಹತ್ತು ತಲೆಗಳೂ ಇಪ್ಪತ್ತು ತೋಳುಗಳೂ ಉಳ್ಳ ಒಂದು ಪುರುಷ ಶಿಶುವನ್ನು ಪಡೆದಳು.