ಪುಟ:ಕಥಾಸಂಗ್ರಹ ಸಂಪುಟ ೨.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುಂಭಕರ್ಣಸಂಹಾರ 131 ನೋ ? ಮುನ್ನೀರೆರೆಯನು ನಿನಗೆ ನೀರು ಗಳನ್ನು ಒದಗಿಸನೋ ? ಸಗ್ಗಿ ಗರೆರೆಯನು ನಿನ್ನ ಪಾದಸನ್ನಿಧಿಯಲ್ಲಿ ಎಚ್ಚರಿಕೆಯಿಂದಿರನೋ ? ಜವನು ನೀನಟ್ಟಿ ದೆಡೆಗೆ ಓಡನೋ ? ಪೊನ್ನೊಡೆಯನು ನಿನ್ನ ಬೊಕ್ಕಸದಲ್ಲಿ ಧನವು ಮುಗಿದರೆ ತತ್ ಕ್ಷಣದಲ್ಲೇ ತಂದು ಸುರಿಯನೋ ? ನಿರುತಿಯು ನಿನ್ನ ಪಾದವನ್ನು ಒರೆಸಿಕೊಳ್ಳುವ ಪಾವ್ರಡವನ್ನು ಹಿಡಿ ದು ನಿಂತಿರನೋ ? ರಂಭಾದಪ್ಪರಸ್ತ್ರೀಯರು ನಿನಗೆ ಒಲಿಯರೋ ? ಕೀಳು ಮೇಲಿನ ಲೋಕಗಳವರು ನಿನ್ನ ಆಳುಗೆಲಸದಲ್ಲಿ ಸಿದ್ದರಾಗಿ ನಿಂತಿರರೋ ? ವಿಮಾನವು ನೀನು ಹೇಳಿದಲ್ಲಿಗೆ ತೆರಳದೋ ? ನಿನ್ನ ಮುಖಕಮಲಗಳಲ್ಲಿ ಇಷ್ಟು ಉತ್ಸಾಹಶೂನ್ಯತೆಗೆ ಕಾರಣವೇನೆಂದು ಕೇಳಿದನು. ಆಗ ರಾವಣನ ತಂಗಿಯಾದ ಶೂರ್ಪನಖಿಯ ಕಿವಿಮೂಗುಗಳ ಛೇದನದಾರ ಭ್ಯ ಯುದ್ಧದಲ್ಲಿ ರಾಮನಿಂದ ತನಗಾದ ಅಭಿಮಾನಹಾನಿಯವರೆಗೂ ನಡೆದ ಸಂಗತಿಗ ಳನ್ನೆ ಲ್ಲಾ ಹೇಳಲು ಕುಂಭಕರ್ಣನು ರಾವಣನನ್ನು ಕುರಿತು ಎಲೆ, ಅಣ್ಣನೇ ! ಕೇಳು. ಪರರ ಹೆಂಡಿರ ಆಶಯಿಂದ ಇಂದ್ರಾದಿ ದೇವತೆಗಳೂ ಕೋಳುಹೋದರು. ಲೋಕದಲ್ಲಿ ಕಾಮನು ಯಾರಿಗಾದರೂ ಹಿತನೆಂದು ತಿಳಿಯಬೇಡ. ಪ್ರಪಂಚದಲ್ಲಿ ಜಾಣನಾದ ವನು ತಾನೇ ತನ್ನ ಬುದ್ಧಿಯಿಂದ ಯುಕ್ತಾಯುಕ್ತಗಳನ್ನು ಯೋಚಿಸಿ ತಿಳಿದು ಸನ್ಮಾ ರ್ಗದಲ್ಲಿ ನಡೆಯಬೇಕು. ಒಂದು ವೇಳೆಯಲ್ಲಿ ತನಗೆ ಸದಸದ್ವಿವೇಚನಾಶಕ್ತಿಯು ತೋಚದಿದ್ದರೆ ಆಪ್ತರಾದ ಬಂಧು ಮಿತ್ರರು ಮುರಿದು ಹೇಳಿದ ದಾರಿಯಲ್ಲಿ ಅಡಿಗಳ ೩ ಡಬೇಕು. ಹಾಗೆ ನಡೆಯದಿದ್ದರೆ ನಿಜವಾಗಿ ತನ್ನ ಪ್ರಾಣಗಳಿಗೆ ಅಳಿವು ಸಂಭವಿಸು ವದು. ಸದ್ಧರ್ಮವು ಆಚಾರವನ್ನು ಅನುಸರಿಸುವುದು, ಕೀರ್ತಿಯು ಧರ್ಮವನ್ನು ಹಿಂ ಬಾಲಿಸಿರುವುದು. ಸಿರಿಯು ಕೀರ್ತಿಯನ್ನು ಬೆಂಬಿಡದಿರುವುದು. ಲೋಕಗಳನ್ನು ಕಂ ಪನಗೊಳಿಸುವ ನಮ್ಮ ತಪಸ್ಫೂ ಇಂದ್ರಾದಿಗಳನ್ನು ಬಡಿಯುವ ನಮ್ಮ ಭುಜಬಲವೂ ಶಿವನನ್ನು ಮೆಚ್ಚಿಸುವ ನಮ್ಮ ಧೈರ್ಯವೂ ಕುಡಿಯೊಡೆದು ಹಬ್ಬುತ್ತಿರುವ ನಮ್ಮ ಕೀರ್ತಿಲತಾ ಸಮೂಹವೂ ಇವುಗಳೆಲ್ಲವೂ ಲೋಗರನ ಮಡದಿಗೆ ಬಗೆಯಳು ಕಿದುದ ರಿಂದ ಬಯಲಾಗುವ ಸ್ಥಿತಿಗೆ ಬಂದುವು. ಸುರರು ನಮ್ಮನ್ನು ಶಪಿಸುವರು. ತನ್ನ ಗಿರಿಯನ್ನು ಕಿತ್ಕಂದಿನಿಂದ ಐಮೊಗನ ಕೃಪೆಯು ನಮ್ಮಲ್ಲಿ ಸಾಮಾನ್ಯವಾಗಿರು ವುದು. ದಿಗೀಶರು ಭೀತಿಯಿಂದ ಕಾರ್ಯಸಾಧನೆಗಾಗಿ ನಮಗೆ ಕರಗಳನ್ನು ಮುಗಿ ಯುತ್ತಿರುವರು. ನಿನ್ನ ಅಂತಃಪುರದಲ್ಲಿ ಹದಿನಾಲ್ಕು ಲಕ್ಷ ಜನ ಸತಿಯರಿದ್ದರೂ ನಮ್ಮ ಕುಲಕ್ಕೆ ಮೃತ್ಯು ಪ್ರಾಯಳಾದ ಈ ಹೆಣ್ಣಿನ ಮೇಲಣ ಆಶೆಯು ನಿನಗುಂಟಾಯಿತು. ಈ ಸೀತೆಯು ಸಾಕಾಲ ೬ ಯು. ರಾಮನು ಸರೋಜಭವನ ತಾತನಾದ ವಿಷ್ಣು ವು. ಈತನು ನಮ್ಮ ಪಿತಾಮಹನಿಗೆ ಪಿತಾಮಹನಾದುದರಿಂದ ಈತನಲ್ಲಿ ನಿನಗೆ ಕಲಹಾವೇಕ್ಷೆ ಯು ಬೇಡ. ಈತನು ವರುಣಯಮೇಂದ್ರಾದಿಗಳ ಹಾಗಲ್ಲ. ಬಲು ಬಲ್ಲಿ ದನು. ಈವರೆಗೂ ರಣದಲ್ಲಿ ಮಡಿದುಹೋದವರು ಹೋಗಲಿ. ಉಳಿದಿರುವವರ ನ್ನಾದರೂ ಬದುಕಿಸಬೇಕೆಂಬ ಅಪೇಕ್ಷೆಯು ನಿನ್ನಲ್ಲಿದ್ದರೆ ಈ ಸೀತೆಯನ್ನು ಕರೆದು ಕೊಂಡು ಹೋಗಿ ರಾಮನಿಗೊಪ್ಪಿಸಿಬಿಡು ಎಂದು ಹೇಳಿದನು. ಅದನ್ನು ಕೇಳಿ ರಾವ d M ೧ |