ಪುಟ:ಕಥಾಸಂಗ್ರಹ ಸಂಪುಟ ೨.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

132 ಕಥಾಸಂಗ್ರಹ-೪ ನೆಯ ಭಾಗ ಣನು ಕೋಪಸಂತಾಪಯುಕ್ತನಾಗಿ ಹಗಲಿರುಳುಗಳಲ್ಲೂ ಹಗೆಯನ್ನು ಹೊಗಳಿ ಕೊಂಡು ಅವನ ಬಾಯ್ಯಂಬುಲಕ್ಕೆ ಕೈಯಾತು ಕೊಂಡಿರುವುದಕ್ಕೆ ಅಧಮನಾದ ಒಬ್ಬ ತಮ್ಮನು ಸಾಲದೆ ಮಿಕ್ಕ ರಾಗಿಯನ್ನು ಬೀಸುವುದಕ್ಕೆ ನೀನೊಬ್ಬ ತಮ್ಮನು ಬಂದಿಯಾ ? ಬಲು ಚೆನ್ನಾ ಯಿತು. ನೀನು ತಿರುಕನಂತೆ ವೈರಿಯ ಬಿರುದಾವಳಿಯನ್ನು ಹೊಗಳಿ ಕೊಂಡು ಅವನ ಪಾಳಯವನ್ನು ಕುರಿತು ಹೋಗುವವನೋ ? ಕತ್ತಿಯ ಮೊನೆಯಲ್ಲಿ ಹೋಗತಕವನೋ ? ಎದುರಾಳಿನೊಡನೆ ಕಾಳೆಗಂಜಿ ನುಸುಳುಗಂಡಿಯಲ್ಲಿ ತೂರು ವವನೋ ? ನಿನ್ನ ಬಗೆಯಾವುದು ? ಅದನ್ನು ಬೇಗೆ ತಿಳಿಸು ಅಂದನು. ಅದಕ್ಕೆ ಕುಂಭಕರ್ಣನು-ಎಲೆ ಅಣ್ಣಾ! ನಾನು ಎಂದಿಗೂ ಕಾದಲಂಜುವವ ನಲ್ಲ, ನಾನು ಕಾಳೆಗಕ್ಕೆ ಹಿಂತೆಗೆದರೆ ಕೀರ್ತಿಲತೆಯು ಬಾಡೀತು. ಮುಕ್ತಿಯ ದಾರಿಯು ಮಾಸೀತು. ನೀನು ಸೀತೆಯನ್ನು ತಂದಾಗಲೇ ನಮ್ಮ ಆಯುಷದ ಅವಧಿಯು ತೀರಿತು. ಹಗೆಯೊಡನೆ ಕಾದಿ ಗೆಲ್ಲುವುದು ಅಸಾಧ್ಯವು. ಈ ವಿಷಯವನ್ನು ನೀನೇ ನಿನ್ನಲ್ಲಿ ಯೋಚಿಸಿ ನೋಡು ಎನ್ನಲು ರಾವಣನು-ಎಲವೋ ! ನೀನು ಈ ಸಂಗ್ರಾಮ ವನ್ನು ಜಯಿಸುವಿ ಎಂದು ತಿಳಿದು ಎಬ್ಬಿಸಿದರೆ ಹೆದರಿ ಕಲಹಕ್ಕೆ ಹೋಗದೆ ನನ್ನೆದುರಿ ನಲ್ಲಿ ಶುಷ್ಕ ನೀತಿಗಳನ್ನು ಓದುತ್ತ ಕಾಲಹರಣವನ್ನು ಮಾಡುತ್ತಿರುವಿ. ಹೇಡಿಯ ನಿದ್ರಾಜಾಡ್ಯನಿಗೃಹೀತನೂ ಆದ ನಿನ್ನನ್ನು ತಿಳಿಯದೆ ಮಹಾವೀರನೆಂದು ಭಾವಿಸಿ ಎದುರಿನಲ್ಲಿ ನಿಲ್ಲಿಸಿಕೊಂಡು ನುಡಿದುದೇ ತಪ್ಪು, ಮೊದಲಂತೆಯೇ ನಿದ್ದೆಯಲ್ಲಿ ಬಿದ್ದು ಸಾಯಿ, ಹೋಗು ಎಂದು ಕೋಪದಿಂದ ನುಡಿದನು. ಆಗ ಕುಂಭಕರ್ಣನು-ಎಲಾ ಅಣ್ಣಾ! ವೀಳಯವನ್ನು ತಾ, ನನ್ನ ಕಾಳೆಗದ ಹೊಸದಾದ ಪರಿಯನ್ನು ನೋಡು. ನನ್ನೆ ದುರಿನಲ್ಲಿ ಶೂಲೆಯು ಅಡ್ಡಗಿಸಿ ಬಂದರೂ ಬಿಡದೆ ಕೊಲ್ಲುವೆನು. ಮಿಕ್ಕ ಜಾಳುಗಳ ಬಡಗೊಬ್ಬಿನ ಬಿಂಕವನ್ನು ಹೇಳದಿರು. ಲೋಕದಲ್ಲಿ ಮದನನಿಗೆ ಮನಸ್ಸನ್ನು ಮಾರಿದವರು ಬಯಲಾಗುವರು ಎಂದು ನಾನು ಹೇಳಿದರೆ ನಿನಗೆ ಇಷ್ಟು ಕೋಪವುಂಟಾಗಬಹುದೇ ಎಂದನು. ಆಗ ರಾವಣನು-ಎಲೇ ತಮ್ಮಾ! ನಾವಂತು ಕುಡುವಿಲ್ಲನ ಸರಳುರಿಗೆ ಸಿಕ್ಕಿ ಮೂರ್ಖರಾದವರು. ಆಗಲಿ. ಲೋಕವಿಖ್ಯಾತರಾದ ಶೂರರು ಮಢರಂತೆ ಮರಣ ಕ್ರಂಜಿ ಹಿಂದೆಗೆದರೆ ಜಗತ್ತಿನಲ್ಲಿರುವ ಸಮಸ್ತ ಜನರೂ ಕೈಹೊಯ್ತು ನಗದಿರುವರೇ ? ನಿಜಭುಜಾರ್ಜಿತನಾದ ನಿನ್ನ ಯಶಶ್ಚ೦ದ್ರನು ಪ್ರಸಿದ್ದ ಚಂದ್ರನನ್ನೂ ಕೂಡ ತಿರಸ್ಕರಿಸು ತಿರುವನಲ್ಲಾ! ನಿನ್ನ ಅತುಲ ಪ್ರತಾಪಾದಿತ್ಯನು ಈ ಸೂರ್ಯನನ್ನು ಅಲ್ಲಗಳೆಯುತ್ತಿರು ವನಲ್ಲ ! ಅಣುಪಾಯರಾದ ಅಲ್ಪ ಮನುಜರ ಕೊಬ್ಬನ್ನು ಗಣಿಸದೆ ನಿರ್ನಾಮ ಮಾಡ ಬಲ್ಲವನಾದ ನೀನು ವಿರೋಧಿಗೆದುರಾಗಿ ನಿಂತರೆ ಪ್ರತಿಭಟಿಸಿ ನಿಲ್ಲುವವರು ಲೋಕತ್ರ ಯದಲ್ಲುಂಟೇ ? ಇಲ್ಲ ವು. ಅದು ಕಾರಣ ಇಂಥಾ ನೀನು ಪ್ರಾಣಿಗಳ ಮೇಲಣ ಆಶೆ ಯನ್ನು ಬಿಟ್ಟು ವಿರೋಧಿವಕ್ಷಃ ಕಂಪನದಾಯಕವಾದ ಜಗಳವನ್ನು ಅಂಗೀಕರಿಸು. ಯುದ್ಧದಿಂದ ಇಹಪರಗಳಲ್ಲಿ ಕೀರ್ತಿಮುಕ್ತಿಗಳುಂಟಾಗುವುವೆಂದು ನಿಶ್ಚಯಿಸು. ನನ್ನ ದೃಢನಿಶ್ಚಯವನ್ನು ಕೇಳು, ಇಹಪರಸುಖಸಂಪಾದನೆಗೆ ಹಿಂದಿರುಗದೆ ಮಾಡುವ