ಪುಟ:ಕಥಾಸಂಗ್ರಹ ಸಂಪುಟ ೨.djvu/೧೪೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


134 ಕಥಾಸಂಗ್ರಹ-೪ ನೆಯ ಭಾಗ ವಂದಿಮಾಗಧರು- ಧೀರರೇ ! ಜೀಯಾ ! ಪಾಯವಾಧಾರೂ ! ರಕ್ಕಸರರಸಾ ! ಹಳು, ಹಳು, ನೀತಿವನಕುಠಾರ ! ಯಜ್ಞಾರಣ್ಯ ದವಾನಲಾ ! ಬಾಳು. ಬಾಳು ಎಂದು ಹೊಗಳುತ್ತ ಬರುತ್ತಿದ್ದರು. ಅವರ ಮಸೆದ ಕೈಗತ್ತಿಯ ಡಾಳವು ಸೂರ್ಯನ ಬೆಳಕನ್ನು ಬೆದರಿಸಿತು. ಅವನ ಕೋರೆದಾಡೆಗಳ ಹೊಳಪು ಕಲ್ಲಾಂತಬೈರವನ ಆಟ, ಹಾಸದ ಸಿರಿಯನ್ನು ಅಣಕಿಸಿತು. ಅವನ ಮೈಗಪ್ಪ ಮಸಗಿ ಹಗಲು ಇರುಳಾಯಿತು. ಆ ಕುಂಭಕರ್ಣನನ್ನು ನೋಡಿ ಸುಗ್ರೀವನು ಅಂಜಿದನು. ಹನುಮಲರು ಮುಂದು ಗೆಟ್ಟರು. ಜಾಂಬವತ್ತುಷೇಣಗವಾಕಾ ದಿ ಮಹಾ ಬಲಿಷರ ಮೊಗದಾವ ರೆಗಳು ಕಂದಿದುವು. ಮಿಕ್ಕ ಕಪಿವೀರರ ದುರವಸ್ಥೆಯನ್ನು ಹೇಳತಕ್ಕದೇನು ? ದೆಸೆ ದೆಸೆಗೆ ಮುರಿದೋಡುತ್ತಿರುವ ಕಪಿಗಳಲ್ಲಿ ಹಿಂದಣಿ ಕಿನೋಡಿ ಓಡುವ ಕಪಿಯೇ ಧೈರ್ಯವುಳ್ಳುದು ಎಂದು ಹೇಳಿಸಿಕೊಂಡಿತು. ಆ ಧೀರೋದಾತ್ತ ನಾಯಕನಾದ ರಾಘವನು ರಕ್ಕಸನನ್ನು ನೋಡಿದುದರಿಂದಲೇ ನೆಗೆದೋಡುತ್ತಿರುವ ಕಪಿಗಳ ಮೊಗ್ಗರ ವನ್ನು ನೋಡಿ ನಗುತ್ತ ಸವಿಾಪಸ್ಸನಾದ ವಿಭೀಷಣನನ್ನು ಕುರಿತು-ಇವನು ಯಾರು ಎಂದು ಬೆಸಗೊಳ್ಳಲು ಅವನು-ಜೀಯಾ ! ಲಾಲಿಸು. ಇವನು ದಶಕಂಠನ ತಮ್ಮನು. ನನ್ನ ಅಣ್ಣನು. ಪುಲಸ್ತ್ರನ ಮೊಮ್ಮಗನು. ವಿಶ್ರವಸ್ಸಿನ ಮಗನು. ಇವನಿಗೆ ಕುಂಭ ಕರ್ಣನೆಂದು ಹೆಸರು. ಪೂರ್ವದಲ್ಲಿ ಇವನು ಮಾಡಿದೆ ಅದ್ಭುತ ಕೃತ್ಯಗಳನ್ನು ಕೇಳಿದರೆ ನಿಜವಾಗಿಯೂ ನೀನೂ ಬೆರಗಾಗುವಿ, ಹುಟ್ಟಿದ ಏಳನೆಯ ದಿನದಲ್ಲಿ ಈ ಜಗಜೀವಿ ಗಳನ್ನು ಅಟ್ಟಿಯೋಡಿಸಿ ಹಿಡಿದು ತಿಂದನು. ಅದರಿಂದ ಬ್ರಹ್ಮನು ಇವನನ್ನು ಯಾವಾ ಗಲೂ ನಿದ್ದೆಯಲ್ಲಿರುವಂತೆ ಮಾಡಿ ಆರು ತಿಂಗಳಿಗೊಂದುಸಾರಿ ಎಷ್ಟು ಆಹಾರವನ್ನು ತೆಗೆದು ಕೊಂಡು ಪುನಃ ಬಿದ್ದು ನಿದ್ರಿಸುವಂತೆಮಾಡಿ ಲೋಕತ್ರಯವನ್ನೂ ಕಾಪಾಡಿ ದನು. ಇವನು ಧುರದಲ್ಲಿ ಮೈದೋರಿ ಮಾರ್ಮಲೆತು ನಿಂತರೆ ಪ್ರಖ್ಯಾತರಾದ ನರ ನಿರ್ಜರೋರಗ ಭಟರೊಳಗೆ ಎದುರಿನಲ್ಲಿ ನಿಲ್ಲುವವರಾರನ್ನೂ ಕಾಣೆನು. ಇವನು ಪರ `ಹರಣದ ಪಾಪದ ದೆಸೆಯಿಂದ ಸತ್ತರೆ ಸಾಯಬೇಕು. ಅದಿಲ್ಲವಾದರೆ ಇವನು ಸಾಯುವ ಕನ್ನ ವನ್ನು ಕಾಣೆನು, ಜೀಯಾ ! ನಮ್ಮ ಬಲದ ಪಲಾಯನವನ್ನು ನೋಡು, ಮೇಲೆ ಆಕಾಶಮಂಡಲವಕಿಸು. ನೆರೆದಿದ್ದ ಬಿಡುಗಣ್ಣರಲ್ಲಿ ಒಬ್ಬರಾದರೂ ಕಾಣು ವದಿಲ್ಲ, ಅವರೆಲ್ಲರೂ ಇವನ ವಿಜೃಂಭಣೆಗೆ ಬೆದರಿ ಮರೆಯಾಗಿಹೋದರು. ಇವನು ಕಾಳೆಗದ ಕಣವನ್ನು ಹೊಗುವುದಕ್ಕೆ ಮೊದಲೇ ನಮ್ಮ ಬಲಕ್ಕೆ ಈ ಅವಸ್ಥೆಯಾಯಿತು. ಮು೦ದೆ ಇವನಿರಿತದಿಂದ ನಾವೇನಾಗುವೆವೋ ತಿಳಿಯದು. ಎಲೈ ರಾಜೇಂದ್ರನೇ ! ಅವ ಧರಿಸು. ನಮ್ಮವನ ಹೆಗಲಿನಲ್ಲಿರುವ ಶೂಲಾಯುಧದ ತೋರವನ್ನು ನೋಡು. ಅದು ಹಾಗಿರಲಿ. ಅದರ ಮೊನೆಯಲ್ಲಿ ಜವನೆದೆಯ ರಕ್ತವೂ ಎಳೆದೇರನ ಕೆಳೆಯನ ಮಾಂಸವೂ ಇತರ ದಿಕ್ಷತಿಗಳ ಮಜೆ ಯ ಇವೆ. ಇವನೊಡನೆ ಈ ನೆರೆದ ಮರಗೈದುಗಳ ಮರ್ಕಟ ವೀರರು ಕಾದಿ ಮುಗಿಸಲಾರರು. ಅದು ಕಾರಣ ನೀನೇ ಇವನೊಡನೆ ಕೊಳುಗುಳಕ್ಕೆ ನಿಲ್ಲಬೇಕು ಎಂದು ಹೇಳುತ್ತಿರುವಲ್ಲಿ ಸುಗ್ರೀವನು ಹೋಗಿ ಕುಂಭಕರ್ಣನ ಎದುರಿನಲ್ಲಿ ನಿಂತನು. ಅವನ ಬೆಂಬಲಕ್ಕಾಗಿ ಹನುಮಂತ ನೀಲ ಅಂಗದ ಜಾಂಬವಂತ ಇವರೇ