ಪುಟ:ಕಥಾಸಂಗ್ರಹ ಸಂಪುಟ ೨.djvu/೧೪೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


1.38 ಕಥಾಸಂಗ್ರಹ-೪ ನೆಯ ಭಾಗ ನ್ನು ಹಿಡಿದುಕೊಂಡು–ಎಲೈ ವೀರಕುಲತಿಲಕನೇ ! ನಿಲ್ಲು ನಿಲ್ಲು. ಈ ಆಯುಧ ವನ್ನು ತಿರುಗಿ ಅವನ ಮೇಲೆ ಹಾಕಿದವನ ತಲೆಯು ಭೂಮಿಗುರುಳಲಿ ಎಂದು ವರ ವುಂಟು. ಆದುದರಿಂದ ಅವನ ಮೇಲೆ ಇದನ್ನು ಪ್ರಯೋಗಿಸಬೇಡವೆನ್ನಲು ಮಾರು ತಿಯು ತನ್ನ ಮಂಡಿಯನ್ನು ಕೊಟ್ಟು ಅದನ್ನು ತುಂಡು ತುಂಡಾಗುವಂತೆ ಮುರಿದು ಸಮುದ್ರಮಧ್ಯದಲ್ಲಿ ಬೀಳುವಂತೆ ಎಸೆದುಬಿಟ್ಟನು. ಅದನ್ನು ನೋಡಿ ಸೂರ್ಯನು ಈ ಯುದ್ದ ವಿದ್ಯಾವಿಶಾರದನಾದ ಆ೦ಜನೇಯನು ನನ್ನ ಮಗನಾದ ಸುಗ್ರೀವನನ್ನು ಕೊಂದುಹಾಕುವುದಕ್ಕೆ ಬರುತ್ತಿದ್ದ ಭಯಂಕರವಾದ ಶಕ್ಕಾ ಯುಧವನ್ನು ಮುರಿದು ಬಿಸುಟನಲ್ಲಾ ಎಂಬ ಸಂತೋಷಾತಿಶಯದಿಂದ ಅವನಿಗೆ ದಿವ್ಯರತ್ನ ಖಚಿತಗಳಾದ ಎರಡು ಕರ್ಣಕುಂಡಲಗಳನ್ನು ಕೊಟ್ಟು ಸನ್ಮಾನಿಸಿದನು. ಆಗ ಕುಂಭಕರ್ಣನು-ಆಹಾ ! ಮಹಾತ್ರಿಶೂಲಾಯುಧವು ವ್ಯರ್ಥವಾಗಿ ಮುಗಿದುಹೋಯಿತೇ ! ಕಪಿವೀರನು ಉಳಿದನೇ ! ಇನ್ನು ಮುಂದೆ ಮಾಡಬೇಕಾದ ಕೆಲಸವೇನೆಂದು ಕಣಕಾಲ ಯೋಚಿಸಿ ಕಡಲೆ ಕೋಟಿಸಂಖ್ಯಾತಗಳಾದ ಸಿಡಿಲು ಗಳ ಆರ್ಭಟಕ್ಕೆ ಮಿಗಿಲೆನ್ನುವಂತೆ ಆರ್ಭಟಿಸಿ ಕಸಿಬಲವನ್ನೆಲ್ಲಾ ಭಯದ ಸಮುದ್ರದಲ್ಲಿ ತೇಲಿಸಿ ಮುಳುಗಿಸಿ ನೆಗೆದು ಒಂದು ಸುಗ್ರೀವನನ್ನು ಹಿಡಿದು ಕೊಂಡು-ಇವನಷ್ಟೇ ಕಪಿರಾಜನು ? ಇವನ ಸಹಾಯದಿಂದಲೇ ರಾಮಲಕ್ಷ್ಮಣರು ನಮ್ಮೊಡನೆ ಕೊಳುಗು ಳಕ್ಕೆ ಬಂದರು. ಇವನನ್ನು ಕೊಲ್ಲದೆ ಸೆರೆಹಿಡಿದುಕೊಂಡು ಹೋದರೆ ಈ ನೆರೆದಿರುವ ಕೊಡಗಗಳೆಲ್ಲಾ ದೆಸೆದೆಸೆಗೋಡಿ ಹೋಗುವುವು. ಅನಂತರದಲ್ಲಿ ಉಳಿದ ಬಲಹೀನ ರಾದ ಮನುಜರಿಬ್ಬರನ್ನು ಕ್ಷಣಮಾತ್ರದಲ್ಲಿ ಜಯಿಸಿಬಿಡಬಹುದು ಎಂದು ಯೋಚಿ ಸುತ್ತ ಕಪಿರಾಜನನ್ನು ಕಂಕುಳಲ್ಲಿರು ಕಿಕೊಂಡು ಸಂತೋಷದಿಂದ ಲಂಕೆಗೆ ತಿರುಗಿ ದನು. ಆಗ ರಾಮನು ಕಳವಳಿಸಿ.ಅಹಹ ! ವಾನರ ಚಕ್ರವರ್ತಿಯು ಖಳನ ಕೈಗೆ ಸಿಕ್ಕಿದನೇ ! ಕಾರ್ಯವು ಕೆಟ್ಟಿತು ಎಂದು ಮಾರುತ ನತ್ರನ ಮುಖವನ್ನೂ ತಮ್ಮ ನಾದ ಲಕ್ಷ್ಮಣನ ಮುಖವನ್ನೂ ನೋಡಲು ಶೂರರಾದ ಅವರಿಬ್ಬರೂ ಶೀಘ್ರವಾಗಿ ಹೊರಟು ಯುದ್ಧಕ್ಕೆ ಬರುತ್ತಿರಲು ಸುಗ್ರೀವನು ಅವರನ್ನು ನೋಡಿ ಬೇರೆ ಬವರದ ಬಲುಮೆಗಳನ್ನು ತೋರಿಸದಿರಿ, ನಾನು ಈ ಖಳನಿಗೆ ಸಿಕ್ಕಿ ಹೋದೆನೆಂದು ಬಗೆಯದಿರಿ. ಅರೆಗಳಿಗೆಯಲ್ಲಿ ಇವನ ಹಗರಣವನ್ನು ನಗೆಗಾರರಿಗೆ ತೋರಿಸುವೆನು ಎಂದು ಅವರಿಗೆ ಸಮಾಧಾನವನ್ನು ಹೇಳಿ ನಿಲ್ಲಿಸಿದನು. ಆ ಮೇಲೆ ಕುಂಭಕರ್ಣನು ಇಂದಿನ ಸಮರ ದಲ್ಲಿ ನಾನು ಗೆದ್ದೆನು. ಕಪಿರಾಜನನ್ನು ಸೆರೆಹಿಡಿದೆನು. ಮುಂದಣ ಕಾರ್ಯವು ನಾಳಿ ನದು ಎಂದು ಯೋಚಿಸುತ್ತ ಹೊಳಲನ್ನು ಹೊಗಲು ಆಗ ಭೇರೀನಿಸ್ವಾಳಾದಿ ವಿವಿಧ ವಾದ್ಯಗಳು ಮೊಳಗಿದುವು. ದೈತ್ಯಾಂಗನೆಯರು ದರ್ಪಣ ಕಲಶಾಳಿಗಳನ್ನು ಹಿಡಿದು ಒಗ್ಗಿನಿಂದ ಬಂದು ಕುಂಭಕರ್ಣನನ್ನು ಎದುರುಗೊಂಡರು. ಕೆಲವರು ಮುತ್ತೆದೆ ಯರು ಆರತಿ ಎತ್ತಿದರು. ಮತ್ತೆ ಕೆಲವರು ಗಂಧೋದಕಗಳನ್ನೂ ಪನ್ನೀರುಗಳನ್ನೂ ಕುಂಭಕರ್ಣನ ಮೇಲೆ ಸುರಿದರು. ಯುದ್ಧ ಶ್ರಮನಿವಾರಣಾರ್ಥವಾಗಿ ಬಹುಮಾದಕ ಗಳಾದ ವಾರುಣಿ ಕಾದಂಬರಿಗಳೆಂಬ ಹೆಂಡಗಳನ್ನು ತಂದು ಕುಡಿಯುವುದಕ್ಕೆ