ಪುಟ:ಕಥಾಸಂಗ್ರಹ ಸಂಪುಟ ೨.djvu/೧೫೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಇಂದ್ರಜಿತ್ಸಂಹಾರ 145 ಮಾಡಿ ಮಡಿದುಹೋದನು. ಇದಕ್ಕೆ ನೀನು ವ್ಯಸನಪಡುವುದರಿಂದ ಪ್ರಯೋಜನ ವೇನು ? ಏನೂ ಇಲ್ಲ ವು. ಅದು ಕಾರಣ ಕುಂಭಕರ್ಣನ ವಿಷಯಕವಾದ ವ್ಯಸನವನ್ನು ಬಿಟ್ಟು ಈಗ ನಾನು ಹೇಳುವ ಮಾತುಗಳನ್ನು ಕೇಳು. ನಾನು ನಾಳಿನ ಉದಯ ಮುಖದಲ್ಲಿ ಶತ್ರುಸೈನ್ಯವನ್ನು ಪ್ರವೇಶಿಸಿ ರಾಮ ಲಕ್ಷ್ಮಣರ ಮಾಂಸಗಳಿಂದಲೂ ಸುಗ್ರೀವಾದಿ ಕಪಿಗಳ ಮಾಂಸಗಳಿಂದಲೂ ಔತನವನ್ನು ಮಾಡಿಸಿ ಭೂತಪ್ರೇತಪಿಶಾ ಚಾದಿಗಳ ಬಳಗವನ್ನು ದಣಿಸದಿದ್ದರೆ ನಿನ್ನಿಂದ ಮಂಡೋದರಿಯಲ್ಲಿ ಹುಟ್ಟಿದ ಮಗ ನಲ್ಲ. ಈ ನನ್ನ ಪ್ರತಿಜ್ಞೆಯು ಸಾಗದಿದ್ದರೆ ಮಹಾಗ್ನಿಕುಂಡದಲ್ಲಿ ಬಿದ್ದು ಪ್ರಾಣ ಗಳನ್ನು ಕಳೆದು ಕೊಳ್ಳುವೆನು. ಮನಸ್ಸಿನ ದುಗುಡವನ್ನು ಬಿಡು. ನನಗೆ ಅಪ್ಪಣೆ ಯನ್ನು ಕೊಡು ಎಂದು ಹೇಳಿ ನನ್ನ ಕದನಕ್ಕೆ ಇದೇ ಕಡೆಯೆಂದು ಭಾಷೆಯ ನ್ನಿತ್ತು ರಥಾರೂಢನಾಗಿ ರಿಪುಮಾರಣಮಂತ್ರಜ್ಞರಾದ ರಾಕ್ಷಸ ಪುರೋಹಿತರೊಡನೆ ಆ ರಾತ್ರಿಯಲ್ಲೇ ಹೊರಟು ಶೀಘ್ರವಾಗಿ ನಿಕುಂಭಿಳೆಗೆ ಬಂದು ಪ್ರಶಸ್ತ ಸ್ಥಾನದಲ್ಲಿ ಅಗ್ನಿ ಯನ್ನು ಪ್ರತಿಷ್ಠಿಸಿ ಅಸುರಹೋಮವನ್ನು ಮಾಡಲುಜ್ಜುಗಿಸಿ ಮಾಂಸದ ಚರುವನ್ನೂ ರಕ್ತದ ಆಜ್ಯಧಾರೆಗಳನ್ನೂ ನರದ ದರ್ಭೆಗಳನ್ನೂ ಬೆರಳ ಸಮಿತ್ತುಗಳನ್ನೂ ಮಂತ್ರ ಪೂರ್ವಕವಾಗಿ ಹೋಮಮಾಡಿ ಪೂರ್ಣಾಹುತಿಯನ್ನು ಕೊಡಲು ಆಗ ಸಂತುಷ್ಟ ನಾದ ಬ್ರಹ್ಮನು ಪ್ರತ್ಯಕ್ಷನಾಗಿ ಬಂದು ಇಂದ್ರಜಿತ್ತಿಗೆ ಬ್ರಹ್ಮಾಸ್ತ್ರವನ್ನು ಕೊಟ್ಟು ನಾಳಿನ ಕಾಳೆಗದಲ್ಲಿ ನಿನಗೆ ಜಯವಾಗುವುದೆಂದು ವರವನ್ನಿತ್ತು ಸತ್ಯಲೋಕವನ್ನು ಕುರಿತು ತೆರಳಿದನು. ಅನಂತರದಲ್ಲಿ ಇಂದ್ರಜಿತ್ತು ಅಗ್ನಿ ಕುಂಡದಿಂದ ಉತ್ಪನ್ನವಾದ ದಿವ್ಯರಥರಥಾಶ್ಯಧನುರ್ಬಾಣಗಳನ್ನು ತೆಗೆದುಕೊಂಡು ಸಂತೋಷಯುಕ್ತನಾಗಿ ಅಲ್ಲಿಂದ ಹೊರಟು ತಂದೆಯ ಬಳಿಗೆ ಬಂದು ನಮಸ್ಕರಿಸಿ-ಎಲೈ ಜನಕನೇ ! ಈ ವರೆಗೂ ನಿನ ಗಾಗಿರುವ ಅಪಜಯವೆಂಬ ಸಸಿಯನ್ನು ಕಿತ್ತು ರಾಮನ ಹೊಟ್ಟೆ ಎಂಬ ಗದ್ದೆಯಲ್ಲಿ ನೆಡುವೆನು, ಅದಕ್ಕೆ ಲಕ್ಷ್ಮಣನ ರಕ್ತವೆಂಬ ನೀರನ್ನು ಹೊಯ್ತು, ಬೆಳೆಸುವೆನು, ಅದರ ಫಲವನ್ನು ಸುಗ್ರೀವಾದಿ ಕಪಿಗಳಿಗೆ ತಿನ್ನಿಸುವೆನು ಮತ್ತು ಈ ವರೆಗೂ ಸತ್ತು ಹೋಗಿರುವ ಕುಂಭಕರ್ಣನೇ ಮೊದಲಾದ ಸುಭಟರನ್ನು ಬದುಕಿಸಿ ಕರೆದುಕೊಂಡು ಬಂದು ನಿನ್ನ ಓಲಗದ ಚಾವಡಿಯಲ್ಲಿ ನಿಲ್ಲಿಸುವೆನು. ಅದು ಸಾಧ್ಯವಲ್ಲದಿದ್ದರೆ ಯಮನ ಹೊಟ್ಟೆ ಯಲ್ಲಿ ಕಲ್ಕುಳ್ಳುಗಳನ್ನು ತುಂಬುವೆನು ಎಂದು ಹೇಳಿ ತಂದೆಯಾದ ರಾವಣನಿಂದ ವೀಳಯವನ್ನು ತೆಗೆದುಕೊಂಡು ಅಲ್ಲಿಂದ ಹೊರಟು ಕ್ಷಣಕಾಲದಲ್ಲಿ ಚತುರಂಗಬಲಸಮೇತನಾಗಿ ಯುದ್ಧ ಭೂಮಿಗೆ ಬಂದು ನಿಂತನು. ಆ ಕೂಡಲೆ ಕಪಿ ಸೈನ್ಯದಲ್ಲಿ ಕಪಿವೀರರ ಕಣ್ಣುಗಳು ತೂಕಡಿಕೆಯಿಂದ ಜೋಂಪಿಸಿದುವು. ಕೈಗಳಲ್ಲಿದ್ದ ಗಿರಿತರುಗಳು ಜಾರಿ ಕೆಳಗೆ ಬಿದ್ದು ವು. ಸುಗ್ರೀವಾದಿ ನಾಯಕರ ಎದೆಯು ಕಂಪಿ ಸಿತು. ರಾಮಲಕ್ಷ್ಮಣರ ವಾಮಭುಜಗಳು ನಡುಗಿದವು. ಶ್ರೀರಾಮನು ಆ ವೇಳೆಯಲ್ಲಾದ ಅಪಶಕುನಪರಂಪರೆಗಳನ್ನು ನೋಡಿ ಮನಸ್ಸಿ ನಲ್ಲಿ ವ್ಯಸನವುಳ್ಳವನಾಗಿ ಜಾಂಬವಂತನನ್ನು ಕುರಿತು-ಎಲೈ ಸೇನಾಪತಿಯೇ ! ಈ ದಿವಸದಲ್ಲಿ ಇಂಥಾ ಭಯಂಕರವಾದ ಉತ್ಪಾತಗಳು ಉಂಟಾಗುತ್ತಿವೆಯಲ್ಲಾ ! 10