ಪುಟ:ಕಥಾಸಂಗ್ರಹ ಸಂಪುಟ ೨.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

146 ಕಥಾಸಂಗ್ರಹ-೪ ನೆಯ ಭಾಗ ಬ ನೀನು ಮುಂದಣ ಲೇಸು ಹೊಲೆಹಗಳನ್ನು ಕುರಿತು ಏನು ಯೋಚಿಸುತ್ತಿರುವಿ ಎಂದು ಕೇಳಲು ಆತನೆದ್ದು ಕೈಮುಗಿದು ನಿಂತು-ಜೇಯಾ! ನಾನು ಏನು ಹೇಳಲಿ? ಈ ದಿವಸ ಯುದ್ಧದಲ್ಲಿ ನಮಗೆ ಜಯವುಂಟಾಗುವುದೆಂದು ಹೇಳುವುದಕ್ಕಾಗುವುದಿಲ್ಲ. ನಮ್ಮ ಬಲಕ್ಕೆ ಮರಣವ ತಪ್ಪದು ಎಂದು ಹೇಳಿ ಸುಗ್ರೀವನನ್ನು ಕರೆದು ಏಕಾಂತದಲ್ಲಿಈದಿವಸ ನಮಗೆ ಅಪಜಯವೂ ಮರಣವೂ ಬಾರದೆ ಇರಲಾರದು. ಅದು ಕಾರಣ ಈ ಅಪಾಯ ನಿವಾರಣೆಗೆ ಸಾಧ್ಯವಾದ ಪ್ರಯತ್ನವನ್ನು ಮಾಡು ಎಂದು ಹೇಳಿದನು. ಸುಗ್ರಿ ವನು ಆ ಮಾತುಗಳನ್ನು ಕೇಳಿ ಯುಕ್ತವೆಂದು ಭಾವಿಸಿ ಕೂಡಲೆ ರಾಮನ ಸಮೀಪದಲ್ಲಿ ಸುಷೇಣಾ೦ಜನೇಯರನ್ನು ಇರಿಸಿ ಕಪಿಗಳ ಪಡೆಯ ಒಡ್ಡಿನ ಮಡಣ ಕಡೆಯಲ್ಲಿ ಶತಬಲಿವಿಭೀಷಣರನ್ನು ನೇಮಿಸಿ ಗವಾಕ್ಷ ಶರಭಮ್ಮೆ೦ದದ್ವಿವಿದರನ್ನು ಬಲದ ಪಶ್ಚಿಮ ಭಾಗದ ಕಾವಲಿಗೆ ನಿಲ್ಲಿಸಿ ತಾನು ಯುದ್ಧಕ್ಕೆ ಸನ್ನದ್ಧನಾಗಿ ನಿಂತು ನೀಲನನ್ನು ಕರೆ ದು-ಕಪಿವೀರ ಪರಿವಾರವೆಲ್ಲವೂ ಯುದ್ಧಕ್ಕೆ ನಡೆಯಲಿ ಎಂದು ತಿಳಿಸಲು ಆ ಕೂಡ ಲೆ ಸರ್ವಸೇನಾನಾಯಕನಾದ ನೀಲನ ಆಜ್ಞಾನುಸಾರವಾಗಿ ಕಪಿವಾಹಿನೀಪತಿಗಳು ತಮ್ಮ ತಮ್ಮ ಬಲದೊಡನೆ ಗಿರಿತರು ಶಿಲಾದ್ಯಾಯುಧಗಳನ್ನು ತೆಗೆದು ಕೊಂಡು ದಿಗ್ವಿತಿ ಗಳೊಡೆಯುವಂತೆ ಆರ್ಭಟಿಸುತ್ತ ಕಾಳೆಗದ ಕಣದಲ್ಲಿ ಬಂದು ನಿಂತರು. ಆ ಮೇಲೆ ಪ್ರಳಯ ಕಾಲದಲ್ಲಿ ಮಹಾಸಾಗರಗಳು ಬಂದು ಒಂದನ್ನೊಂದು ತಾಗಿ ಅಪ್ಪಳಿಸಿ ಬೆರೆ ಯುವಂತೆ ವಾನರ ನಿಶಾಚರ ಬಲಗಳ ಚೂಣಿಗಾಳೆಗವು ಕಂಗೊಳಿಸಿತು. ಕಪಿರಾಕ್ಷ ಸರ ಬಡಿದಾಟದಲ್ಲಿ ಎಸೆಯುವ ಗಿರಿತರುಗಳಿಂದಲೂ ಪ್ರಯೋಗಿಸುವ ಬಾಣಗಳಿಂದಲೂ ಅಂಬರತಳವು ಮುಚ್ಚಿ ಸೂರ್ಯರಶ್ಮಿಯ ಸಂಚಾರಕ್ಕೆ ತಡೆಯಾಯಿತು. ಕಪಿವೀರರು ರಾಕ್ಷಸವೀರರನ್ನು ತಿರಸ್ಕರಿಸಿ ಎಸೆದರು. ರಾಕ್ಷಸವೀರರು ಕಪಿವೀರರನ್ನು ಬೀಳ್ಳಡಿದು ಬೊಬ್ಬಿರಿದರು. ಕಡೆಗೆ ಕಪಿವಾಹಿನಿಯ ಪರಾಕ್ರ ಮಾಗ್ನಿಯು ಕಲ್ಲಾಂತ ಕಾಲಾಗ್ನಿ ಯನ್ನು ಪಳಿದು ನಿಶಾಚರವ್ಯೂಹವನ್ನು ದಹಿಸುತ್ತಿರಲು ಆಗ ವೀರರಸತರಂಗಿತತಾಂ ಮಾಕ್ಷನಾದ ಇಂದ್ರಜಿತ್ತು ಮಾಯಾಶಕ್ತಿಯನ್ನವಲಂಬಿಸಿ ವಾನರವ್ಯೂಹದೊಳಗೆ ಮೈದೋರಿ ಸಂಹಾರೋದ್ಯುಕ್ತನಾಗಲು ಆ ಮೇಲೆ ಮಾಯಾ ವಿದ್ಯಾ ಪ್ರಚಾರದಲ್ಲಿ ಪ್ರಸಿದ್ಧನಾದ ಶಂಬರನೋ, ಮಾರೀಚನೋ, ವಿದ್ಯುದ್ದೆ ಹೈನೋ, ಪ್ರಳಯ ಕಾಲದಲ್ಲಿ ಮುನಿದು ಅಖಿಲಭುವನಾವಳಿಯ ಕೊಲೆಗೆಲಸಕ್ಕೆ ನುಗ್ಗಿದ ಫಾಲಾಂಬಕನೋ ಎಂಬ ಭಾ೦ತಿಯುಂಟಾಯಿತು. ಪಾಕಶಾಸನ ವೈರಿಯು ಮಹಾಶಾಂಬರಿಯನ್ನು ಬೆಳೆಸಿ ಪುಂಖಾನು ಪುಂಖವಾಗಿ ಪ್ರಯೋಗಿಸುತ್ತಿರುವ ಬಾಣಗಳು ಕಣೆಗಳು ಗರಗಸಗಳು ಡೊಂಕಣಿಗಳು ಪರಿಘಗಳು ಪರಶುಗಳು ಮುಸು೦ಡಿಗಳು ಕು೦ತಗಳು ಖಡ್ಡ ಗಳು ಅಡಾ ಯುಧಗಳು ಗದೆಗಳು ಎಂಬ ಈ ಮೊದಲಾದ ನಾನಾ ವಿಧಾಯುಧಗಳ ರೂಪವನ್ನು ಧರಿಸಿ ಬಂದು ಕಪಿಬಲವನ್ನು ಹೊಕ್ಕು ಸಮದುವ, ಕೊಚ್ಚಿ ದುವ, ಚುಚ್ಚಿದುವು. ನುಗ್ಗಿ ದುವು ಕಡಿದುವು. ಮೇಲೆ ಬಿದ್ದು ವ್ರ, ಕೆತ್ತಿದುವು. ಕೊರೆದುವು. ಹಾರಿಸಿದುವು. ಹೋಳು ಮಾಡಿದುವು. ಬೀಳಿಸಿದುವು ಮೈಮರಿಸಿದುವು. ಮತ್ತು ಕೆಲವು ಮಹಾ ಪರ್ವತಗಳಾಗಿ ಬಿದ್ದು ವಾನರವೀರರನ್ನು ಭೂಗತ ಮಾಡಿದುವು. ಇನ್ನು