ಪುಟ:ಕಥಾಸಂಗ್ರಹ ಸಂಪುಟ ೨.djvu/೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ರಾವಣನ ದಿಗ್ವಿಜಯವು ಮಿಗಿಲಾದ ಭಾಗ್ಯವುಳ್ಳವನೆಂಬ ಪ್ರಖ್ಯಾತಿಯನ್ನು ಹೊಂದುವೆನು ಎಂಬುದಾಗಿ ಹೇಳಿ ಸಹೋದರರೊಡನೆ ಹೊರಟು ಪಡುವಣ ಕಡಲ ದಡದಲ್ಲಿರುವ ಗೋಕರ್ಣವೆಂಬ ಮಹಾ ಪುಣ್ಯಕ್ಷೇತ್ರಕ್ಕೆ ಬಂದನು. ಆ ಪ್ರದೇಶದಲ್ಲಿ ತಪೋಯೋಗ್ಯವಾದ ಆಶ್ರಮ ವನ್ನು ಮಾಡಿಕೊಂಡು ಅಲ್ಲಿ ಶಾಸ್ಪೋಕ್ತವಾದ ವಿಧಿವಿಧಾನಗಳಿಂದಲೂ ನೇಮನಿಷ್ಠೆ ಗ ಳಿಂದಲೂ ಕೂಡಿದವರಾದ ಮರು ಮಂದಿ ಸಹೋದರರೂ ನಿಶ ಲಚಿತರಾಗಿಯೂ ತ್ವಕ್ಕು ಚಕ್ಕುಸ್ತು ಪ್ರೋತ್ರ ಜಿಹ್ವಾ ಘಾಣಗಳೆಂಬ ಪಂಚೇಂದ್ರಿಯಗಳಿಗೆ ಸ್ಪರ್ಶ ರೂಪ ಶಬ್ದ ರಸ ಗಂಧಗಳೆಂಬ ವಿಷಯಗಳೊಡನೆ ಸಂಬಂಧವಿಲ್ಲದವರಾಗಿಯೂ ನಿರಾ ಹಾರಿಗಳಾಗಿಯೂ ಇದ್ದುಕೊಂಡು ಚಿತ್ತೈಕಾಗ್ರತೆಯನ್ನು ಹೊಂದಿ ಅತ್ಯುಗ್ರವಾದ ತಪಸ್ಸನ್ನು ಮಾಡಲಾರಂಭಿಸಿದರು. ಅವರೊಳಗೆ ಮೊದಲನೆಯವನಾದ ದಶಮುಖನು ಮಳೆ ಚಳಿಗಾಲಗಳಲ್ಲಿ ಬೆಟ್ಟದ ತಪ್ಪಲುಗಳಲ್ಲಿರುವ ಹೊಳೆಗಳಲ್ಲಿಯೂ ಬೇಸಿಗೆಯ ಕಾಲ ದಲ್ಲಿ ಪಂಚಾಗ್ನಿಗಳ ಮಧ್ಯದಲ್ಲಿಯೇ ನಿಂತು ಘೋರವಾದ ತಪಸ್ಸನ್ನು ಮಾಡುತ್ತಿ ದ್ದನು. ಕುಂಭಕರ್ಣನು ಒಂದೇ ಕಾಲಿನಿಂದ ನಿಂತು ತಪಸ್ಸನ್ನು ಮಾಡುತ್ತಿದ್ದನು. ವಿಭೀಷಣನು, ಊರ್ಧ್ವಮುಖಿಯಾಗಿ ನಿಂತು ಸೂರ್ಯನನ್ನು ನೋಡುತ್ತಾ ತಪಸ್ಸನ್ನು ಮಾಡುತ್ತಿದ್ದನು. ಹೀಗಿರಲ) ದಶಮುಖನು ತನ್ನ ತಪಸ್ಸಿನಲ್ಲಿ ಕಳೆದುಹೋಗುತ್ತಿರುವ ಪ್ರತಿಸಂವ ತೃರದ ಕಡೆಯ ದಿನದಲ್ಲಿ ಕ್ರಮವಾಗಿ ತನ್ನ ದೊಂದೊಂದು ತಲೆಯನ್ನು ಕಡಿದು ಅಗ್ನಿ ಯಲ್ಲಿ ಹೋಮಮಾಡುತ್ತ ಬಂದು ಹತ್ತನೆಯ ಸಂವತ್ಸರದ ಕಡೆಯಲ್ಲಿ ಎಂದಿನಂತೆ ತನ್ನ ಹತ್ತನೆಯ ತಲೆಯನ್ನು ಕತ್ತರಿಸುವುದಕ್ಕೆ ಪ್ರಯತ್ನಿಸಲು ಆಗ ಬ್ರಹ್ಮದೇವನು ಅವನ ಬಳಿಗೆ ಬಂದು-ಎಲೈ ಮಗನಾದ ದಶಮುಖನೇ ! ನೀನು ಬಹಳವಾಗಿ ಬಳಲಿದೆ. ನಿನಗೆ ಬೇಕಾದ ವರಗಳನ್ನು ಕೇಳು ಕೊಡುವೆನೆನಲು ಆಗ ದಶಮುಖನು ಕಣ್ಣೆರೆದು ತನ್ನ ಮುತ್ತಜ್ಜ ನನ್ನು ನೋಡಿ ಅತಿ ಭಯಭಕ್ತಿಯಿಂದ ಆತನ ಪಾದಗಳಿಗೆ ವಂದಿಸಿ ಎದ್ದು ಕೈಮುಗಿದುಕೊಂಡು ನಿಂತು.-- ಎಲೆ ಜಗಜ್ಜನಕನಾದ ಕರುಣಾಳುವೇ ! ಸುರಾಸು ರೋರಗ ಯಕ್ಷ ರಾಕ್ಷಸ ಗರುಡ ಗಂಧರ್ವ ಸಿದ್ಧ ಸಾಧಾದಿಗಳೊಳಗೆ ಯಾರಿಂದಲೂ ಮರಣವು ಸಂಭವಿಸದಂತೆ ನನಗೆ ವರವನ್ನು ಕೊಡು. ಉಳಿದ ಮನುಷ್ಯರೂ ಮೃಗಪ * ಗಳೂ ನನಗೆ ಗಣನೆಯಿಲ್ಲ ಎಂದು ಹೇಳಲು ಚತುರ್ಮುಖನು ಹಾಗೆಯೇ ಆಗಲಿ ಎಂದು ಹರಸಿ ವರವನ್ನು ಕೊಟ್ಟು--ನೀನು ಮೊದಲು ಕಡಿದು ಹೋಮಮಾಡಿದ ತಲೆ ಗಳೆಲ್ಲಾ ತಿರುಗಿ ಹುಟ್ಟಲಿ ಇನ್ನು ಮೇಲೆ ನಿನ್ನ ತಲೆಯನ್ನು ಯಾರು ಕಡಿದಾಗ ಯಥಾವತ್ತಾಗಿ ಮಡುತ್ತಿರಲಿ ಎಂದು ಸಂತೋಷದಿಂದ ತಾನಾಗಿಯೇ ಎರಡು ವರ ಗಳನ್ನು ಕೊಟ್ಟು ಅಲ್ಲಿಂದ ಹೊರಟು ವಿಭೀಷಣನಿದ್ದ ಸ್ಥಳಕ್ಕೆ ಬಂದುಮಗನಾದ ಎಲೈ ವಿಭೀಷಣನೇ ! ತಪಸ್ಸಿನಿಂದ ಬಹಳವಾಗಿ ಬಳಲಿದೆಯಲ್ಲಾ! ಕಂದಾ ಕುಲಶಿರೋ ಮಣಿಯೇ ! ನಿನಗಿಷ್ಟವಾದ ವರಗಳನ್ನು ಬೇಡು ಎನಲು ಅವನು ತನ್ನ ಮುತ್ತಾತನಿಗೆ ಸಾಷ್ಟಾಂಗನಮಸ್ಕಾರವನ್ನು ಮಾಡಿ ಕೈಗಳನ್ನು ಜೋಡಿಸಿ ನಿಂತು ಕೊಂಡು-ಎಲೆ ಮಹಾತ್ಮನಾದ ಮುತ್ತಜ್ಜನೇ! ನಾನು ನಿನ್ನ ಪಾದಕಮಲಗಳನ್ನು ಕಂಡುದರಿಂದ ಕೃತ