ಪುಟ:ಕಥಾಸಂಗ್ರಹ ಸಂಪುಟ ೨.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂದ್ರಜಿತ್ಸಂಹಾರ _153 ಚಂದ್ರನು ಸುಗ್ರೀವನನ್ನು ಸಮಾಧಾನಪಡಿಸಿ ನಿಲ್ಲಿಸಿ ತಾನೇ ಧನುರ್ಬಾಣಗಳನ್ನು ತೆಗೆದುಕೊಂಡು ಪ್ರಳಯಾಂತಕನಂತೆ ಮಹಾ ಕೋಪವುಳ್ಳವನಾಗಿ ಕಣ್ಣುಗಳಲ್ಲಿ ಕಿಡಿಗಳನ್ನು ದುರಿಸುತ್ತ ಕೋದಂಡದಲ್ಲಿ ಅಕ್ಷಯಾಸ್ತ್ರವನ್ನು ಹೂಡಿ ರಾವಣಿಯ ಮೇಲೆ ಪ್ರಯೋಗಿಸಲು ಆ ಬಾಣಗಳು ಪಾರಂಪರ್ಯವಾಗಿ ಹೋಗಿ ಅವನ ರಥ ರಥಾಶ್ವಸಾರಥಿ ಧ್ವಜ ಬಿಲ್ಲು ಬತ್ತಳಿಕೆ ಪತಾಕೆ ಇವುಗಳನ್ನೆಲ್ಲಾ ಕ್ಷಣಕಾಲದಲ್ಲಿ ತರಿ ದೊಟ್ಟಿದುವು. ಆಗ ಉಪಾಯದಲ್ಲಿ ಬಲ್ಲಿದನಾದ ಇಂದ್ರಜಿತು ರಾಮನಿರುವ ಬಡಗಣ ಬಾಗಿ ಅನ್ನು ಬಿಟ್ಟು ಶೀಘ್ರದಿಂದ ಲಂಕೆಯನ್ನು ಹೊಕ್ಕು ಹನುಮಂತನಿರುವ ಪಡುವಣ ಬಾಗಿಲಿಗೆ ಬಂದು ಅವನ ಸಹಾಯಕ್ಕಾಗಿ ಬಂದಿರುವ ವಾನರಬಲವನ್ನೆಲ್ಲಾ ಮಾಯಾ ಶಕ್ತಿಯಿಂದ ಸಂಹರಿಸಿದನು. ಉಳಿದ ಕಪಿಗಳೆಲ್ಲಾ ಅವನೊಡನೆ ಕಾಳಗಕ್ಕೆ ಆಂತು ನಿಲ್ಲಲಾರದೆ ಬೆಂಗೊಟ್ಟೋಡಿದುವು. ಆಗ ಧೀರನಾದ ಆಂಜನೇಯನೊಬ್ಬನೇ ಮಹಾ ಕೋಪದಿಂದ ಕಿಡಿಕಿಡಿಯಾಗಿ ಇಂದ್ರಜಿತ್ತಿನ ತೇರು ಬಿಟ್ಟು ಸರಳು ಕುದುರೆಗಳ ಸಪ್ಪಳ ನ್ನು ಕಿವಿಗೊಟ್ಟು ಕೇಳಿ ಜಾಡನ್ನು ಹಿಡಿದು ಹೋಗಿ ಅಟ್ಟಿ ಹೊಡೆಯುತ್ತ ಅಸಂಖ್ಯಾತರ ಳಾದ ತೇರಾನೆ ಕುದುರೆಯಾಳುಗಳನ್ನು ಸಂಹರಿಸುತ್ತಾ ಹಿಂದೆಗೆಯದೆ ಸೂರ್ಯಾಸ್ತಮಾ ನದ ವರೆಗೂ ಭಯಂಕರವಾಗಿ ಜಗಳವಾಡುತ್ತಿರಲು ಆಗ ಕಾಪಟ್ಟ ವಿದ್ಯಾನಿಪುಣನಾದ ರಾಕ್ಷ ಸಪ್ರತ್ರನು ತನ್ನ ಮಾಯಾಶಕ್ತಿಯಿಂದ ಕಪಟ ಸೀತೆಯನ್ನು ನಿರ್ಮಿಸಿ ತನ್ನ ರಥದ ಮೇಲಿಟ್ಟುಕೊಂಡು ಮೇಲೆತ್ತಿ ಹನುಮಂತನಿಗೆ ತೋರಿಸಲು ಆಗಳಾಮಾಯೆಯು ಅಂಜನಾತ್ಮ ಜನನ್ನು ನೋಡಿ ಅಯ್ಯಾ, ಸ್ವಾಮಿ ಕಾರ್ಯಧುರಂಧರನೂ ಸತ್ಯಸಂಧನೂ ಆದ ಆಂಜನೇಯನೇ ! ಅಕಟಕಟಾ ! ಈ ದಾರುಣವಾದ ಹಿಂಸೆಯನ್ನು ಹೇಗೆ ಸಹಿಸಲಿ ? ನನ್ನನ್ನು ಕಾಪಾಡುವವರಾರೂ ಇಲ್ಲವಲ್ಲಾ? ಹಾ ! ವಿಧಿಯೇ, ಅಯ್ಯೋ ! ಕೆಟ್ಟೆ ನಲ್ಲಾ ಎಂದು ಗಿಳಿಮರಿಯಂತೆ ಬಾಯ್ದಿಡುತ್ತಿದ್ದಿತು. ಆಗ ಅ೦ಜನೆಯ ಮಗನು ತಾನು ಮೊದಲು ಶಿಂಶುಪ ವೃಕ್ಷದ ಕೆಳಗೆ ನೋಡಿದ್ದ ಸೀತೆಯಂತಿರುವ ಆ ಮಾಯೆ ಯನ್ನೂ ಅದರ ಕತ್ತಿಗೆ ತಗುಲಿಸಿರುವ ಇಂದ್ರಜಿತ್ತಿನ ಕತ್ತಿಯನ್ನೂ ನೋಡಿ ಮನಸ್ಸಿ ನಲ್ಲಿ ಮಹಾತಂಕಯುಕ್ತನಾಗಿ ದುಃಖದಿಂದ ಕಣ್ಣೀರುಗಳನ್ನು ಸುರಿಸುತ್ತಿರಲು ತಿರಿಗಿ ಆ ಮಾಯೆಯು ಮಾರುತಿಯನ್ನು ನೋಡಿ-ಅಯಾ, ಮಗನೇ ! ಮಾರು ತಿಯೇ ! ನಾನು ನಿನ್ನೊಡೆಯನಾದ ಶ್ರೀರಾಮನ ಪ್ರಾಣಪ್ರಿಯೆಯಲ್ಲವೇ ? ಅನಾಥ ಳಾಗಿ ಈ ಪಾಪಿಯ ಕೈಗತ್ತಿಗೆ ತನುವನ್ನು ತೆತ್ತಿರುವ ನನ್ನಲ್ಲಿ ಕರುಣವನ್ನಿಡಬಾರದೇ ? ಹಾ, ಸತ್ಯವೇ ! ನಿನಗೆ ದಿಕ್ಕಿಲ್ಲವೇ ! ಎಲೈ ನೀತಿದೇವತೆಯೇ ! ನೀನು ಅನಾಥೆಯಾ ದೆಯಾ ಎಂದು ದುಃಖಿಸುತ್ತ- ಅಪ್ಪಾ, ಮಗನೇ ! ಈ ಪಾಪಕಾರಿಣಿಯಾದ ನನಗೋಸ್ಕರ ಅನ್ಯಾಯವಾಗಿ ನೀನೇಕೆ ಕಷ್ಟ ವನ್ನನುಭವಿಸುತ್ತಿರುವಿ ? ಈ ಹಾಳಾದ ರಾಜಕಾರ್ಯಸ್ಥಿತಿಯನ್ನು ಶ್ರೀರಾಮನಿಗೆ ತಿಳಿಸು. ಹೋಗು. ಕ್ಷಣಕಾಲವೂ ಸಾವ ಕಾಶಮಾಡಬೇಡ. ಇನ್ನು ಶ್ರೀರಾಮಚಂದ್ರನು ಯಾರಿಗಾಗಿ ಯುದ್ಧ ಮಾಡಬೇಕು ? ನೀವೆಲ್ಲರೂ ಏತಕ್ಕೆ ವೃಥಾಶ್ರಮಪಡಬೇಕು ? ಈ ಪಾಪಾತ್ಮಳಾದ ನಾನು ಶ್ರೀರಾ