ಪುಟ:ಕಥಾಸಂಗ್ರಹ ಸಂಪುಟ ೨.djvu/೧೭೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಇಂದ್ರಜಿತ್ಸಂಹಾರ 159 ತಲೆಗಳನ್ನು ನೆಲಕ್ಕುರುಳಿಸುತ್ತ ಒತ್ತಿ ಬಂದ ನಿಶಾಚರ ಪತಾಕಿನಿಯನ್ನು ಬರಿಗೈಯುತ್ತ ವಿಭೀಷಣನ ಹಿಂದೆಯೇ ನಡೆದನು. ಆಗ ಲೋಕಾದು ತ ಬಲಗರ್ವಿತನಾದ ಆಂಜನೇಯನು ಲಕ್ಷಣನ ಹಿಂಗಡ ಯಲ್ಲಿ ಹೊರಟುಬರುತ್ತ ಆತನ ಮೇಲೆ ಬೀಳುವುದಕ್ಕೆ ಬರುತ್ತಿರುವ ರಾಕ್ಷಸರನ್ನು ಬಡಿದೆಸೆಯುತ್ತ ಬಂದನು. ' ಆಂಜನೇಯನು ಒಂದು ಸಾರಿ ಅನೇಕ ರಾಕ್ಷಸರ ಗುಂಪನ್ನು ತನ್ನ ನಿಡುದೋಳು ಗಳಿ೦ದ ಬಾಚಿ ತಬ್ಬಿ ಬಿಸುಡಲು ಅವರೆಲ್ಲರೂ ಪುಣ್ಯ ಕ್ಷಯವಾಗಿ ಸ್ವರ್ಗದಿಂದ ಬೀಳುತ್ತಿರುವ ಮೃತದೇಹಗಳೋ ಎಂಬಂತೆ ಆಕಾಶದಿಂದ ಸರ್ವದಿಕ್ಕುಗಳಲ್ಲೂ ಬಿದ್ದು ಸಾಯುತ್ತಿದ್ದರು. ಈ ರೀತಿಯಾಗಿ ಮೂವರೂ ಕ್ಷಣಕಾ ಲದಲ್ಲಿ ಇಂದ್ರಜಿತ್ತಿನ ಬಳಿಗೆ ಒಂದು ನಿಂತರು. ಆಗ ವಿಭೀಷಣನು ಲಕ್ಷ್ಮಣನನ್ನು ಕುರಿತು--ಇಗೋ, ಇವನೇ ಮಾಯಾ ಸೀತೆಯನ್ನು ನಿರ್ಮಿಸಿ ಕಡಿದುರುಳಿಸಿ ನಮ್ಮೆ ಲ್ಲರನ್ನೂ ಅಂಜಿಸಿದ ಮಹಾಪಾಪಿಯು, ಇತ್ಯ ನೋಡು ! ಆಕಾಶಮಾರ್ಗದಿಂದ ಅಕ್ಷ ಯವಾದ ಬತ್ತಳಿಕೆಯ ಅಮೋಘವಾದ ಧನುನ್ಸೂ ಅತಿ ವೇಗಶಾಲಿಗಳಾದ ಅಶ್ವ ಗಳೂ ಅಭೇದ್ಯವಾದ ಮಹಾರಥವೂ ಇಳಿದುಬರುತ್ತಿವೆ. ಇವು ಇವನ ಕೈ ಸೇರಿದ ಕ್ಷಣದಲ್ಲೇ ನಮ್ಮೆಲ್ಲರಿಗೂ ಅಂತ್ಯಕಾಲವು ಸಂಭವಿಸಿತೆಂದು ತಿಳಿದುಕೊ, ಅದುಕಾ ರಣ ಅತಿ ಶೀಘ್ರವಾಗಿ ಸಾಹಸವನ್ನು ಮಾಡು ಎನ್ನಲು ಆಗ ಅಪಾರಶಕ್ತಿ ಸಂಪನ್ನ ನೂ ವೈರಿಗಳ ಗರ್ವವೆಂಬ ಗಿರಿಗೆ ಕುಲಿಶಸಮಾನನೂ ಆದ ಮಾರುತಿಯು ನೆಗೆದುಹೋಗಿ ಯಾಗದೀಕ್ಷಿತನಾಗಿದ್ದ ಇಂದ್ರಜಿತ್ತನ್ನು ಕಾಲಿಂದ ಒದೆದುರುಳಿಸಿ ಅವನ ಯಜ್ಞದ ಸಮಸ್ತ ಸಾಮಗ್ರಿಗಳನ್ನೂ ತುಳಿದು ದಿಕ್ಕು ದಿಕ್ಕುಗಳಿಗೆಸೆದು ಯಾಗಾಗ್ನಿಗೆ ನೀರು ಗಳನ್ನು ಸುರಿದು ಆರಿಸಿ ಹಾಳುಮಾಡಿದನು. ಆ ಕ್ಷಣದಲ್ಲಿಯೇ ಸರೋಜಸಂಭವನಿಂದ ಕಳುಹಿಸಲ್ಪಟ್ಟು ಬರುತ್ತಿದ್ದ ಮಹಾ ರಥವು ಅಶಾದಿಗಳೊಡನೆ ಮಧ್ಯ ಮಾರ್ಗದಿಂದ ಹಿಂದಿರುಗಿ ಹೋಯಿತು. ಆಗ ಇಂದ್ರ ಜಿತ್ತು ಕಣ್ಣೆರೆದು ಮಹಾ ರೋಷದಿಂದ ನೋಡಲು ಆಗ ಧೀರನಾದ ಮಾರುತಿಯು ಎಲಾ ದೇವದೋಹಿಯೇ ! ನೀಚನೇ ! ಸುಜನನಿಂದಕನೇ ! ಸನ್ಮಾರ್ಗವಿರೋಧಿಯೇ ! ತ್ವರಿತದಿಂದ ಯುದ್ಧಕ್ಕೆ ಬಾರೆಲಾ ! ನಿನಗೆ ಅಂತ್ಯ ಕಾಲವು ಸವಿಾಪಿಸಿದೆ. ನಿಷ್ಪಲವಾದ ಈ ಕಾರ್ಯಕಲಾಪದಿಂದ ನಿನಗೇನಾಗುವುದು ? ಎಪದ್ದತನಾದ ನಿನಗೆ ಸತ್ಕರ್ಮವೂ ಕೂಡ ವಿಪರೀತ ಫಲವನ್ನು ಕೊಡದಿರುವುದೇ ? ವೃಥಾ ಸಾವಕಾಶವೇಕೆ ? ಕಾಳೆಗವನ್ನು ಕೊಡು. ಎದುರಿಗೆ ನಿಲ್ಲು ಬಾ, ನಿಜಾಯುಧವನ್ನು ಹಿಡಿ. ನಿನ್ನ ಕಾಪಟ್ಯವನ್ನು ಗಂಟು ಕಟ್ಟಿ ಮೂಲೆಗೆ ಬಿಸುಡು. ಇನ್ನೇಳು ಎನ್ನುತ್ತ ಮತ್ತೆ ಹತ್ತಿರಕ್ಕೆ ಬಂದು ಹಲ್ಲುದುರುವಂತೆ ಅವನ ಕಟವಾಯಿನ ಮೇಲೆ ಫಠೀರೆಂದು ಬಡಿದನು. ಆಗ ರಾವ ಣಿಯು ನೆಟ್ಟು ಹುಲ್ಲಿನ ಬಣವೆಗೆ ಕಾಡಿಚ್ಚು ಹತ್ತಿದ ಹಾಗಾಗಿ ಬಾಯಣಗುಗಳಲ್ಲಿ ಕೋಪಾಗ್ನಿ ಜ್ವಾಲೆಯು ಹೊರಡುತ್ತಿರಲು ಕ್ಷಣಮಾತ್ರದಲ್ಲಿ ಧನುರ್ಬಾಣಗಳನ್ನು ತೆಗೆದುಕೊಂಡು ರಥಾರೂಢನಾಗಿ ಬಂದು ಲಕ್ಷ್ಮಣನೆದುರಿಗೆ ನಿಂತು ಎಲೋ, ಮೂಢನಾದ ಲಕ್ಷ್ಮಣಾ ! ಈ ವಿಭೀಷಣನೆಂಬ ಸೋ೦ಬರಕ್ಕಸನು ನಿನ್ನನ್ನು ಕರೆದು