ಪುಟ:ಕಥಾಸಂಗ್ರಹ ಸಂಪುಟ ೨.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂದ್ರಜಿತ್ಸಂಹಾರ 161 ಆ ವ್ಯಕ್ತಿ ಕೊಲ್ಲುವುದಿಲ್ಲ. ಶೀಘ್ರವಾಗಿ ಬುದ್ದಿವಂತನಾದ ' ಸಾರಥಿಯನ್ನೂ ಧನುಸ್ಸನ್ನೂ ರಥರಥಾಶ್ವಗಳನ್ನೂ ಸಿದ್ಧ ಮಾಡಿಕೊಂಡು ಯುದ್ಧಕ್ಕೆ ನಿಲ್ಲುವವನಾಗು. ಸಾವಕಾಶ ವೇಕೆ ? ನಿನ್ನ ನ್ನು ನುಂಗುವ ಮೃತ್ಯುವು ತವಕ ಪಡುತ್ತಿರುವುದು ಎಂದು ನಸುನಗುತ್ತ ಹೇಳುತ್ತಿರಲು ಆಗ ಮಹಾ ಕೋಪಕ೦ಪಿತಾಧರನಾದ ರಾವಣಕುಮಾರನು ನಿಮೇಷ ಕಾಲದಲ್ಲಿ ಸಿದ್ಧವಾದ ಮತ್ತೊಂದು ರಥವನ್ನೇರಿ ನೂತನ ಕೋದಂಡವನ್ನು ಹಿಡಿದು ಲಕ್ಷ್ಮಣನ ಮೇಲೆ ಅಸಂಖ್ಯಾತ ಬಾಣ ಪರಂಪರಾವೃಷ್ಟಿಯನ್ನು ಸುರಿಸಿ ಆತನನ್ನು ಕುರಿತು-ಎಲೈ ವಿವೇಕಹೀನನಾದ ಲಕ್ಷ್ಮಣನೇ ! ಅಹೋರಾತ್ರಿಗಳಲ್ಲೂ ನಮಗೆ ಶ್ರೇಯಸ್ಸುಂಟಾಗುವಂತೆ ಹರಸುತ್ತಿರುವ ಬ್ರಾಹ್ಮಣನೇ ಬ್ರಹ್ಮನು. ಯಮನು ನಮ್ಮ ಕಿಂಕರನು. ಶಿವನು ನಮ್ಮ ಮನೆಯ ಭಿಕ್ಕು ಕನು ಮೃತ್ಯು ಮಾರಿ ಮಸಣಿ ಇವರು ಗಳು ನಮ್ಮ ಹೆಂಡಿರ ತೊತ್ತುಗಳು. ನೀನು ಈ ವರೆಗೂ ಅಪೇಕ್ಷಿಸುತ್ತಿದ್ದಂತೆ ಇನ್ನು ಮೇಲೆ ಜಯವನ್ನು ಬಯಸದಿರು. ಈ ದಿನದ ಕದನದ ಸ್ಥಿತಿಯು ಬೇರೆ. ಅದು ಬಹು ಭಯಂಕರವಾದುದು. ಎಚ್ಚರವಾಗಿರು ಎಂದು ಬೊಬ್ಬಿರಿದನು. ಅದನ್ನು ಕೇಳಿ ಅಮಿತವಿಕ್ರಮನಾದ ರಾಮಾನುಜನು ಮಂದಹಾಸಯುಕ್ತ ನಾಗಿ ಅವನ ಬಾಣಗಳನ್ನೆಲ್ಲಾ ಕಡಿದುರುಳಿಸಿ ಅವನನ್ನು ಕುರಿತು- ಎಲಾ ಮೂರ್ಖ ಶ್ರೇಷ್ಟನೇ ! ನಿನಗೆ ಆಶೀರ್ವಾದವನ್ನು ಮಾಡಿಕೊಂಡಿರುವ ಬ್ರಹ್ಮನು ನಿನ್ನತೆಯ ಮಳಗಿವಿಯನ್ನೂ ಹರಕುಮಗನ್ನೂ ಈ ವರೆಗೂ ಏಕೆ ಬೆಳಿಸಲಿಲ್ಲ ? ಮತ್ತು ನಿನಗೆ ಕಿಂಕರನಾದ ಯಮನು ಮೃತರಾದ ನಿನ್ನ ಚಿಕ್ಕಪ್ಪ ತಮ್ಮ ಮಾವಂದಿರೇ ಮೊದಲಾದ ವರ ಪ್ರಾಣಗಳನ್ನು ಏಕೆ ತಂದು ಕೊಡಲಿಲ್ಲ ? ಹೀಗೆ ಪೂರ್ವಾಪರ ವಿಚಾರವಿಲ್ಲದೆ ಹೆಮ್ಮೆಯಿಂದ ಹುಚ್ಚನಂತೆ ಹರಟುತ್ತಿರುವ ನಿನ್ನನ್ನು ನೋಡಿ ಬಲ್ಲವರು ದೊಡ್ಡ ಹೇಸರುತ್ತೆ ಎಂದು ಹೇಳುವರು. ಹೀಗೆ ನೀನು ಶುಷ್ಕ ವಚನಗಳನ್ನು ಕೊಚ್ಚಿಕೊಳ್ಳು ವುದರಿಂದ ಪ್ರಯೋಜನವೇನು ? ನಮ್ಮ ಸರಳುಗಳ ಸಾರವನ್ನು ನೋಡು” ಎಂದು ಹೊಸಮನೆಯ ಕೂರಲಗಿನ ಬಾಣಗಳನ್ನು ಇಂದ್ರಜಿತ್ತಿನ ಮೇಲೆ ಸುರಿಸಿದನು. ಕೂಡಲೆ ಇಂದ್ರಜಿತ್ತು ಅವನ ಬಾಣಗಳನ್ನೆಲ್ಲಾ ಕಡಿದುರುಳಿಸಿ--ಎಲಾ ಅಲ್ಪನಾದ ಲಕ್ಷ್ಮಣಾ! ನೀನು ಮೊದಲೇ ದೇಶಭ್ರಷ್ಟನಾಗಿ ಕಾಡಿನಲ್ಲಿ ತಿರುಗುತ್ತಿರುವಿ. ಈಗ ನಿನಗೆ ಪ್ರಾಣ ಗಳನ್ನು ಕಳೆದುಕೊಳ್ಳುವ ದುರವಸ್ಥೆಯು ಬಂದೊದಗಿದೆ. ಇನ್ನು ಗರ್ವದಿಂದ ಹೆಚ್ಚು ಗಳಹಿದರೆ ನಿಮೇಷಮಾತ್ರದಲ್ಲಿ ನಿನ್ನ ತಲೆಯನ್ನು ತರಿದುರುಳಿಸುವೆನು, ನಿರ್ಭಾಗ್ಯ ರಾದ ನಿಮಗೊದಗಿರುವ ದುರವಸ್ಥೆಯಿಂದ ಹುಚ್ಚರಾಗಿರುವಿರಿ. ಮತ್ತು ಮುಂದರಿ ಯದ ಮಢತ್ವವು ನಿಮ್ಮನ್ನು ಕವಿದಿರುವುದು. ಈ ಕಪಟೆಯಾದ ವಿಭೀಷಣನೆಂಬ ಹೇಡಿಯನ್ನು ನಂಬಿ ನಮ್ಮ ವಿರೋಧವನ್ನು ಸಂಪಾದಿಸಿಕೊಂಡು ಕೆಟ್ಟಿರಿ. ಮೊದಲು ನಮ್ಮನ್ನು ನಿಮ್ಮ ಕೈಯಿಂದ ಕೊಲ್ಲಿಸಿ ನಿಮಗೆ ಗೆಲುವನ್ನು ತೋರಿಸಿ ಆ ಮೇಲೆ ನಿಮ್ಮನ್ನು ಕೊಂದು ನಿಮ್ಮ ಧರಣಿಯನ್ನೂ ನಮ್ಮ ಧರಣಿಯನ್ನೂ ಸೀತೆಯನ್ನೂ ತನ್ನ ಅಧೀನಮಾಡಿಕೊಳ್ಳಬೇಕೆಂಬ ಕೊನೆಮುಟ್ಟಿದ ದುರಾಲೋಚನೆಯನ್ನು ಮಾಡಿಕೊಂಡು ನಮ್ಮನ್ನು ಬಿಟ್ಟು ಬಂದು ನಿಮ್ಮನ್ನು ಸೇರಿದ್ದಾನೆ. ಲೋಕದಲ್ಲಿ ಹಸುವಿಗೂ ಹುಲಿಗೂ