ಪುಟ:ಕಥಾಸಂಗ್ರಹ ಸಂಪುಟ ೨.djvu/೧೭೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


168 ಕಥಾಸಂಗ್ರಹ-೪ ನೆಯ ಭಾಗ ಸೂರೆಮಾಡಿದರೋ ! ಈ ಸಮಸ್ತ ವೀರ ಪರಿವಾರವೆಲ್ಲವೂ ಎಲ್ಲಿ ಹೋಗಿದ್ದಿತು ? ನನ್ನ ಮರಿಯಾನೆಯ ಕತ್ತನ್ನು ಕೊಯ್ಯುತ್ತಿದ್ದಾಗ ಈ ಲಂಕಾ ದುರ್ಗವು ಉರಿದು ಹೋಗಿ ದ್ವಿತೇ ? ಒಬ್ಬರೂ ಇರಲಿಲ್ಲವೇ ? ಇಷ್ಟು ಜನರಿದ್ದು ನನ್ನ ಸಂತೋಷಲತೆಯ ಮಲ ವನ್ನು ವಿರೋಧಿಗಳಿಂದ ಕೀಳಿಸಿ ಹಾಕಿದರಲ್ಲಾ! ಈ ರಾಕ್ಷಸ ರಾಜ್ಯದ ಸಂಪತ್ತನ್ನೆಲ್ಲಾ ನನ್ನ ರಗಿಣಿಮರಿಯೊಂದೇ ಉಂಡು ಮುಗಿಸುತ್ತಿದ್ದಿತೇ ? ಮಾರಿಯ ಬಳಗದಂತೆ ತ. ಯಮನ ಕೋಣಗಳಂತೆಯ ತು೦ಬಿರುವ ಈ ರಾಕ್ಷಸ ಬಲವು ನನ್ನ ಚಿನ್ನದ ರನ್ನದ ಮುದ್ದಿನ ಬೊಂಬೆಯನ್ನು ಅರಿಗಳೆದುರಿಗೆ ನೂಕಿ ನೋಟ ನೋಡುತ್ತಿದ್ದಿತೇ ? ಬಾ, ಪಾಪಿಯಾದ ನನ್ನ ಹೃದಯವೇ ! ನಿನಗೆ ದುಃಖದ ಮುಳ್ಳು ಹೊಕ್ಕಿತು. ತಾಪದ ಶಲಾಕೆಯು ನೆಟ್ಟಿತು. ಭಯದ ಬಾಣವು ನಾಟಿತು. ವ್ಯಥೆಯ ವಿಷಲತೆಯು ಮುಚ್ಚಿ ಕೊಂಡಿತು. ಇನ್ನು ಮುಂದೆ ನಿನಗೆ ಸಂತೋಷದ ವಾರ್ತೆಯ ಕೂಡ ದುರ್ಲಭವು. ಇಂದಿಗೆ ನಾನು ಅನಾಥಳಾದೆನು. ಯಾರೂ ನನಗೆ ದಿಕ್ಕಿಲ್ಲ. ಈ ನನ್ನ ಬಂಡಬಾಳನ್ನು ಇನ್ನಾದರೂ ವಿನಾಶಮಾಡದಿರುವ ದುರ್ವಿಧಿಗೆ ಕಾಲ್ಕುರಿದು ಹೋದುವೋ ? ತಡಮಾಡುವ ಮರಣಕ್ಕೆ ಕಣ್ಣು ಹೋದುವೋ ? ಅಯ್ಯಾ, ಸಭಾಸ ದರೇ! ಅನಾಥಳಾದ ನನ್ನ ಮೊರೆಯನ್ನು ಯಾರೂ ವಿಚಾರಿಸುವುದಿಲ್ಲವೇ ? ನೀವರಸು ಗಳಲ್ಲವೇ ? ಹೀಗಿರುವುದು ನಿಮಗೆ ಮಹಾ ಪಾಪವಲ್ಲವೇ ? ಇಷ್ಟು ಕಠಿಣ ಹೃದಯ ರಾದ ನೀವೇ ನನ್ನ ಕಂದನನ್ನು ಕೊಲೆಗೊಡ್ಡಿ ಕರಿದೆವ್ವಗಳಂತೆ ಕೂತು ಕಾಲಹರಣ ಮಾಡಿದಿರಿ, ಲೇಸು ಮಾಡಿಕೊಂಡಿರಿ. ಅನ್ನಿ ರಾಜ್ಯವನ್ನು ನೀವೇ ಪಾಲಿಸಿಕೊಳ್ಳಿರಿ ಎಂದು ದಿಕ್ಕು ದಿಕ್ಕುಗಳನ್ನು ನೋಡಿ ಮೊರೆಯಿಡುತ್ತ ಹಗೆಗಳ ಕೊಲೆಗೆ ನನ್ನ ಮಗನ ತಲೆಯನ್ನೊಡ್ಡಿ ವಿಪತ್ತನ್ನು ತಪ್ಪಿಸಿಕೊಂಡು ಕ್ಷೇಮದಿಂದ ಬಂದಿರಾ ? ರಣ ದೇವತೆಗೆ ನನ್ನ ಮುದ್ದುಗುವರನನ್ನು ಒಲಿಗೊಟ್ಟು ಸಂತೋಷದಿಂದ ಬಂದಿರಾ ? ನನ್ನ ಪುತ್ರರತ್ನ ವನ್ನು ಘೋರಮೃತ್ಯುವಿನ ಬಾಯಿಗೆ ನೂಕಿ ನಿರ್ವ್ಯಸನವಾಗಿ ಬಂದಿರಾ ? ಹಾ ! ದುರ್ವಿಧಿಯೇ ! ಪರಮಪಾಪಿನಿಯಾದ ನನ್ನೊಬ್ಬಳಿಗೇ ಕೇಡೊದಗಿತಲ್ಲಾ ! ನಿಮ್ಮನ್ನು ಕಷ್ಟ ಪಡಿಸುತ್ತಿದ್ದವನು ಹೋದನು. ಇನ್ನು ನಿಮಗೆ ನಿಷ್ಕಂಟಕವಾಯಿತು, ಸಂತೋಷದಿಂದ ಬದುಕಿರಿ. ಅಯ್ಯೋ, ನನ್ನ ಕಂದನೇ ! ಸೋದರತ್ತೆಯಾದ ಶೂರ್ಪ ನಖಿಯು ನಿನಗೆ ಮೃತ್ಯು ದೇವತೆಯಾಗಿ ಪರಿಣಮಿಸಿದಳೇ ? ' ಅವಳು ತನ್ನಣ್ಣನಿಗೆ ದುರ್ಬೋಧನೆಯನ್ನು ಬೋಧಿಸಿ ನನ್ನ ಕುಂಕಲ್ಪಲತೆಯ ಬೇರನ್ನು ಕಿತ್ತು ಬಿಸುಟಳೇ ? ಹೆತ್ತೊಡಲು ಬಿಗೆಯಿಂದ ಬೆಂದು ಬೂದಿಯಾಗುತ್ತಿರುವುದಲ್ಲಾ ! ಈ ಬೇಗೆಗೆ ಪ್ರತೀಕಾರವೇನುಂಟು ? ಮರಣವೇ ಪ್ರತೀಕಾರವೋ ? ಈ ಕ್ಷಣದಲ್ಲಿಯೇ ಅದೊದಗಿ ದರೆ ನಾನೇ ಧನ್ಯಳು. ಕೂಡಲೆ ನನ್ನ ಮಗನನ್ನು ಸೇರಿ ಬದುಕುವೆನು. ಪಾಪಿನಿ ಯಾದ ನನ್ನ ಬಸಿರು ಬೆಂಡಾಯಿತು. ನನ್ನ ಮರಿಯಂಚೆಯನ್ನು ಎತ್ತಿ ಸಾಕಿದ ತೋ ಳುಗಳು ನೆರೆಮುರಿದುವು. ಕಂಡಿರೇ ಎನ್ನುತ್ತ ಸೊಸೆಯರ ಕೊರಳುಗಳನ್ನು ತಬ್ಬಿ ಕೊಂಡು ರೋದಿಸುತ್ತ ಬಳಲಿ ಬಾಯಾರಿ ಬೆಂಡಾಗಿ ಹಾಗೇ ಮರ್ಛಹೊಂದಿ ಭೂಮಿಯಲ್ಲಿ ಬಿದ್ದಳು.