ಪುಟ:ಕಥಾಸಂಗ್ರಹ ಸಂಪುಟ ೨.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ಮರಣವು 171 ಭಯದಿಂದ ಓಡಿಹೋಗಿದ್ದ ಕಪಿಗಳೆಲ್ಲಾ ಒಟ್ಟುಗೂಡಿ ಆರ್ಭಟವನ್ನು ಮಾಡುತ್ತ ಬಿದ್ದಿರುವ ರಾವಣನ ಬಳಿಗೆ ಬಂದು ನಾತಿದೂರದಲ್ಲಿ ಮುಂಗೈಗಳನ್ನು ನೆಲಕ್ಕೂರಿ ಗದ್ದವನ್ನು ನೆಲದ ಮಟ್ಟಿಗೂ ಬಗ್ಗಿಸಿ ಪಲ್ಲಿ ರಿದು ಖೋ ಎಂದು ಕೂಗುತ್ತ ಕೂಡಲೆ ಹಿಂದಕ್ಕೆ ಹಾರುತ್ತ ಸಂತೋಷದಿಂದ ನೆಗೆದಾಡಿದು ವು. ಅನಂತರದಲ್ಲಿ ಅತಿ ವೀರನಾದ ಸುಗ್ರೀವನು ಅಹಹ ! ಮೋಸವಾಯಿತೇ ! ಈ ಖಳನು ರಾಘವನ ಬಾಣಕ್ಕೆ ಆಹಾರ ವಾಗತಕ್ಕವನು ಅದು ಕಾರಣ ನಾನು ಇವನನ್ನು ಕೊಲ್ಲಬಾರದಾಗಿದ್ದಿತು. ರಾಮನು ಈ ಸಂಗತಿಯನ್ನು ಕೇಳಿ ಹೇಗಾದರೂ ವೈರಿನಾಶವು ಕ್ಷೇಮಕರವಾದುದು ಎನ್ನು ವನೋ ? ಅಥವಾ ನೀನು ನನ್ನ ಕೀರ್ತಿಯನ್ನು ಅಪಹರಿಸಿಕೊಂಡಿ ಎಂದು ಹೇಳು ವನೋ ಎಂಬ ಶಂಕಾತಂಕಿತ ಮನಸ್ಕನಾಗಿದ್ದನು. ಅಷ್ಟರಲ್ಲಿ ರಾವಣನ ಸಾರಥಿಯು ಅತಿಶೀಘ್ರವಾಗಿ ಬಂದು ಅವನ ಶರೀರದಲ್ಲಿ ಜೀವಚಿಹ್ನೆ ಗಳನ್ನಾ ರೈು ಮೂಗಿನ ರಂಧ್ರದಲ್ಲಿ ಉಸಿರು ಹೊರಡುತ್ತಿರುವುದನ್ನು ತಿಳಿದು ತಡಮಾಡದೆ ಅತಿ ಜಾಗರೂಕತೆಯಿಂದ ಶೈತ್ಯೋಪಚಾರಗಳನ್ನು ಮಾಡಲು ಆಗ ರಾವಣನು ಉಸ್ ಎಂದು ಮೆಲ್ಲನೆದ್ದು ಸಾರಥಿಯಿ೦ದ ಹೂಜೆಯಲ್ಲಿ ನೀರನ್ನು ತರಿಸಿಕೊಂಡು ಕೈ ಕಾಲು ಮೈ ಮೊಗಗಳ ರಕ್ತಗಳನ್ನು ತೊಳೆದುಕೊಂಡು ಬಾಯು ಕುಳಿಸಿ ಮದ್ದಿನ ಗುಳಿಗೆಗಳನ್ನು ನುಂಗಿ ಸುಗಂಧವನ್ನು ಪೂಸಿ ದಿವ್ಯವಸ್ತಾ ಭರಣಗಳನ್ನು ಧರಿಸಿ ಸ್ವಲ್ಪವಾಗಿ ಆಹಾರವನ್ನು ತೆಗೆದುಕೊಂಡು ಕರ್ಪೂರ ತಾಂಬೂ ಲವನ್ನು ಸವಿದ ಕೂಡಲೆ ರಥಾರೂಢನಾಗಿ ಸುಗ್ರೀವನೆದುರಿಗೆ ಬಂದು ನಿಂತು-ಎಲೆ ಕಪಿರಾಜನೇ ! ಈ ವರೆಗೂ ನನ್ನೊಡನೆ ಯುದ್ಧ ಮಾಡಿದ ವೀರರಲ್ಲಿ ನನಗಿಂಥ ನೋವ ನ್ನು ೦ಟುಮಾಡಿದವರೊಬ್ಬರೂ ಇಲ್ಲ. ನೀನು ಮಹಾ ವೀರನಾದ ವಾಲಿಗೆ ಸರಿಯಾದ ತಮ್ಮನು, ಮತ್ತು ಸುಭಟನು. ಶಹಬಾಸ್ ಎಂದು ಕೊಂಡಾಡಿ ಧನುಸ್ಸನ್ನು ತೆಗೆದು ಕೊಂಡು ಬ್ರಹ್ಮ ದೇವತಾಕವಾದ ಮಂತ್ರದಿಂದ ಬಾಣಾಗ್ರ ಪ್ರದೇಶವನ್ನು ಮಂತ್ರಿಸಿ ಬೊಬ್ಬಿರಿದು ತೆಬ್ಬಿನ ಹೆದ್ದನಿಯನ್ನು ತೋರಿಸಿ ಬಾಣವನ್ನು ಸಂಧಾನಿಸಿ ಕಿವಿವರೆ ಗೆಳೆದು ಸುಗ್ರೀವನಿಗೆ ಗುರಿಗಟ್ಟಿ-ಇದೊ, ಈ ಬಾಣಘಾತವನ್ನು ಸಹಿಸಿಕೋ ಎಂದು ಎಚ್ಚರಿಸಿ ಹೇಳಿ ಅವನೆದೆಗೆಸೆದನು. ಆ ಬಾಣಂತಿಯಿಂದ ಸುಗ್ರೀವನು ತಿಳಿ ವಡಗಿ ಭೂಮಿ ಗೊರಗಿದನು. ಆ ಕೂಡಲೆ ಸಮಸ್ಯೆ ಕಪಿಸೇನಾಪತಿಗಳೂ ಕರ ಬೆಟ್ಟ ಗುಂಡುಗಳನ್ನು ತೆಗೆದು ಕೊಂಡು ಬಂದು ದಶದಿಕ್ಕುಗಳಲ್ಲೂ ರಾವಣನನ್ನು ಕವಿದು ಆರ್ಭಟಿಸುತ್ತ ಹೊಯ್ಯುತ್ತಿರಲು ಆಗ ಕಲ್ಲು ಗುಂಡೇ ಮೊದಲಾದುವುಗಳಿಂದ ತನ್ನ ನ್ನು ತರುಬುತ್ತಿರುವ ಕಪಿಪರಿವಾರವನ್ನೆಲ್ಲಾ ತರಿದು ಕೆಡಹಿ ತನ್ನ ರಥವನ್ನು ಮುಂದಕ್ಕೆ ಹರಿಸಿ ರಾಮನನ್ನು ಹುಡುಕುತ್ತ ಬರುತ್ತಿರಲು ಆಗ ಸರ್ವಸೇನಾಪತಿಯಾದ ನೀಲನು ವಿಲಯ ಕಾಲದ ಕಾಲನಂತೆ ಪರಭೀಕರ ಕೋಪಯುಕ್ತನಾಗಿ ಹುರಿಯ ಕಚ್ಚು ತ್ಯ ಒಂದು ದೊಡ್ಡ ಬೆಟ್ಟವನ್ನು ಕೈಯಲ್ಲಿ ತೆಗೆದುಕೊಂಡು ಸೀತಾ ಚೋರನ ಎದುರಿಗೆ ಬಂದು ನಿಂತು ಎಲ್ಲಿಗೆಲಾ, ಖಳನೇ ! ಹೋಗುತ್ತಿರುವಿ ? ನಿನ್ನ ದುರ್ಗವ್ರದ ಬಲುಮೆಯನ್ನು ಯಾರಲ್ಲಿ ನಡಿಸಬೇಕೆಂದು ಯೋಚಿಸಿರುವಿ ? ನಿಲ್ಲು ನಿಲ್ಲು. ನಾನು ಬ