ಪುಟ:ಕಥಾಸಂಗ್ರಹ ಸಂಪುಟ ೨.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

176 ಕಥಾಸಂಗ್ರಹ-೪ ನೆಯ ಭಾಗ ಉಳಿಸಿಕೊಂಡ ಗಟ್ಟಿಗನಲ್ಲ ವೇ ನೀನು ? ಆದರೇನಾಯಿತು ? ಆಗ ನೀನು ಜೀವವನ್ನು ಉಳಿಸಿಕೊಂಡುದರಿಂದ ಈಗ ನನಗೂ ನಿನಗೂ ದ್ವಂದ್ವಯುದ್ದವು ಸಂಭವಿಸಿತು. ಆಗಲೇ ನೀನು ಮಡಿದುಹೋಗಿದ್ದರೆ ನಿನ್ನನ್ನು ಕೇಳುತ್ತಿದ್ದವರಾರು ? ಈಗ ನನ್ನೆ ಬಾಹುಯುದ್ಧಕ್ಕೆ ಶೀಘ್ರತೆಯಿಂದ ಸನ್ನದ್ದನಾಗು ಕಾದಾಡಿ ನೋಡುವಣ. ಈ ಯುದ್ಧರಂಗಸ್ಥಳವು ನಮ್ಮಿಬ್ಬರ ಪರಾಕ್ರಮವನ್ನು ತೂಗುವ ತಕ್ಕಡಿಯಂತಿದೆ ಎಂದು ಹೇಳಿ ಮುಂಬೈ ತಂದು ರಾವಣನ ಹೆಗ್ಗತ್ತನ್ನು ಹಿಡಿದೆತ್ತಿ ಮೊಗಮೇಲಾಗಿ ಬೀಳುವಂತೆ ನೆಲಕ್ಕೊಗೆದನು, ಮತ್ತು ಅವನ ಸಾರಥಿಯನ್ನು ನೋಡಿ-ಎಲವೋ, ಬಂಡನ ಬಂಡಿ ಝಳೇ! ನಮ್ಮ ಮಲ್ಲ ಯುದ್ದದಲ್ಲಿ ನಿನ್ನೊಡೆಯನು ಬದುಕಿ ಬಂದರೆ ನೀನು ಅವನಿಗೆ ಇವುಗಳನ್ನು ಕೊಡು ಎಂದು ರಾವಣನ ಕೈಗಳಲ್ಲಿದ್ದ ಧನುರಾದ್ಯಾಯುಧಗಳನ್ನೆಲ್ಲಾ ಸೆಳೆದುಕೊಂಡು ಅವನ ಬಳಿಗೆ ಬಿಸುಟನು. ಆನಂತರದಲ್ಲಿ ನಿರಾಯುಧನಾದ ರಾವಣ ನನ್ನು ಕುರಿತು-ಎಲೋ, ಹತ್ತು ತಲೆಗಳ ವಿಕಾರರೂಪಿಯೇ ! ಕೈದುಗಳನ್ನು ಕಿತ್ತು ಬಿಸುಟನೆಂದು ಭಯಪಟ್ಟು ಬಲಹೀನನಾಗಬೇಡ. ನಿನಗೆ ಮುಷ್ಟಿ ಯುದ್ಧವನ್ನು ಮಾಡು ವುದಕ್ಕೆ ಬಲವಿದೆಯೋ ಇಲ್ಲವೋ ? ತಡಮಾಡದೆ ಹೇಳು. ನಮ್ಮಿರ್ವರ ಮಲ್ಲ ಯು ದ ದ ವಿಚಿತ್ರ ಕ್ರಮವನ್ನು ಉಭಯ ಕಟಕದವರೂ ಗಗನಮಂಡಲದಲ್ಲಿ ದೇವಸಮ ಹವೂ ನೋಡಿ ಸಂತೋಷಿಸಲಿ ಎಂದು ನಿಶಾಚರ ಪತಾಕಿನಿಯು ಬೆದರಿ ಬೀಳುವಂತೆ ಗರ್ಜಿಸಿದನು. - ಆಗ ನಿಶಾಚರ ಚಕ್ರೇಶ್ವರನು-ಎಲಾ ದುಷ್ಟ ಮರ್ಕಟವೇ ! ಎಳೆಯದಾದ ಬಳ್ಳಿಯ ಕುಡಿಯನ್ನು ಚಿವುಟುವುದಕ್ಕೆ ಉಕ್ಕಿನ ದೊಡ್ಡ ಕೊಡಲಿಯನ್ನು ತೊಳಿಸಿ ಕೊಂಡು ಬರಬೇಕೇ ? ಮಾರಿಯ ಪೂಜೆಗೆ ಅಶ್ವಮೇಧಯಾಗದ ಸಾಮಾಗ್ರಿಗಳನ್ನು ಒದಗಿಸಬೇಕೇ ? ಕೋಳಿ ಪಿಳ್ಳೆಯನ್ನು ಕೊಲ್ಲುವುದಕ್ಕೆ ಚತುರಂಗಬಲವನ್ನು ತರ ಬೇಕೇ ? ನಾನು ನಿನ್ನೊಡನೆ ಕಾದುವದಕೈ ಮಹಾಸ್ಯೆ ಪರ್ಯ೦ತರವೂ ಯೋಚಿ ಸಬೇಕೇ ? ಶಸ್ಯವಿಲ್ಲದಿರುವ ನಿನಗೆ ನನ್ನ ಕರತಲದ ಪೆಟ್ಟೆ ಮಹಾಸ್ಯಹತಿಯಲ್ಲವೇ ಎಂದು ಹೇಳಲು ಆಗ ಮರುನ್ನಂದನನು ಗಹಗಹಿಸಿ ನಕ್ಕು ರಾವಣನನ್ನು ಕುರಿತು ಎಲಾ ! ಖಳರಲ್ಲಿ ನೀನು ಗಟ್ಟಿಗನೇ ಸರಿ. ನಿನ್ನ ಕೊಬ್ಬಿನ ಮಾತುಗಳನ್ನು ನಾನು ಚೆನ್ನಾಗಿ ಮೆಚ್ಚಿದೆನು. ನಿನ್ನನ್ನು ಬಿಟ್ಟು ಹುಡುಕಿದರೆ ಮೂಢರು ಎಲ್ಲಿ ಸಿಕ್ಕುವರು ? ಹಾಗೇ ಆಗಲಿ. ನಾವಿಬ್ಬರೂ ಮತ್ಯಾವುದರಿಂದಲೂ ಯುದ್ದ ಕೈ ತೊಡಗಬಾರದು. ಒಬ್ಬೊಬ್ಬರು ಒಂದೊಂದು ಗುದ್ದನ್ನು ಹೊಡೆಯುತ್ತ ಹೀಗೆ ಮರು ಗುದ್ದುಗಳಾಗು ವುದರಲ್ಲಿ ಮೊದಲು ಯಾರು ಸಾಯುವರೋ ? ಯಾರು ಬದುಕುವರೋ ? ನೋಡೋಣ ಎನ್ನಲು ಆಗ ರಾವಣನು ಒಪ್ಪಿ. ಆದರೆಲವೋ, ಕಪಿಯೇ ! ಮೊದಲು ನೀನು ನನ್ನನ್ನು ಗುದ್ದು, ನಿನ್ನೆಟಿನಿಂದ ನಾನು ಸಾಯದೆ ಬದುಕಿದರೆ ಆ ಮೇಲೆ ನಿನ್ನನ್ನು ಗುದ್ದು ವೆನು ಎಂದು ಹಾಸ್ಯ ಮಾಡಿ ನುಡಿಯಲು ಆಗ ಮಾರುತಿಯು ಗರ್ಜಿಸುತ್ತ ಕೋಪೋದ್ರೇಕದಿಂದ ಕಣ್ಣಿಡಿಗೆದರಿ ತನ್ನ ಬಾಹುವನ್ನು ಅತ್ಯುನ್ನತವಾಗಿ ಎತ್ತಿ ಎಲಾ ಖಳನೇ ! ಈ ಘಾತವನ್ನು ಎಚ್ಚರಿಕೆಯಿಂದ ಆತುಕೋ. ಏಕೆಂದರೆ ನೀನು