ಪುಟ:ಕಥಾಸಂಗ್ರಹ ಸಂಪುಟ ೨.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

178 ಕಥಾಸಂಗ್ರಹ-೪ ನೆಯ ಭಾಗ ಗಳು ತೇಲಿದುವು. ಇಂದ್ರಿಯಗಳೆಲ್ಲಾ ವಿಷಯವ್ಯಾಪ್ತಿಯನ್ನು ಬಿಟ್ಟು ಶಾಂತಸ್ಥಿತಿಯನ್ನು , ಹೊಂದಿದುವು. ಕೂಡಲೆ ರಾಮದೂತನು ಮೈಮರೆತು ನೆಲದಲ್ಲಿ ಮಲಗಿದನು. ಆಗ ರಾವಣನು ಭಯಾಶ್ಚರ್ಯಭಾವಗ್ರಸ್ತನಾಗಿ ಈ ನಮ್ಮ ಮುಷ್ಟಿ ಘಾತಗಳಿಂದ ಮೇರು ಮಂದರಾದಿ ಕುಲಾಚಲಗಳೂ ಕೂಡ ಪುಡಿಪುಡಿಯಾಗಿ ಹೋಗಬೇಕು. ಅಂಥಾ ದರಲ್ಲಿ ಅಪ್ರತಿಮಮಲ್ಲನಾದ ಈ ಆಂಜನೇಯನು ಮರ್ಧೆಯನ್ನು ಮಾತ್ರ ಹೊಂದಿ ದನಲ್ಲಾ ! ಇವನು ಪುನಃ ಎಚ್ಚೆತ್ತು ಬಂದು ಕೋಪದಿಂದ ಗುದ್ದುವನಾದರೆ ಆ ಗುದ್ದಿ ನಿಂದಲೇ ನಮ್ಮ ಆಯುಃಕಾಲವು ಪರಿಪೂರ್ತಿಯನ್ನು ಹೊಂದುವುದು ಎಂದು ಯೋಚಿಸಿ ಸಾರಥಿಯನ್ನು ಕುರಿತು-ಇದೇ ಸಮಯದಲ್ಲಿ ಬೇಗ ಬೇಗ ರಥವನ್ನು ನಡೆಸಿ ಕೊಂಡು ಹೋಗಿ ರಾಮನೆದುರಿನಲ್ಲಿ ನಿಲ್ಲಿಸು ಎಂದು ಹೇಳಲು ಆಗ ಸಾರಥಿಯು ಕುದುರೆಗಳನ್ನು ತೀವ್ರಗೊಳಿಸಿ ಅದೇ ಪ್ರಕಾರ ಮಾಡಲು ತನ್ನೆ ದುರಿಗೆ ಅತಿ ಶೀಘ್ರ ತೆಯಿಂದ ಬರುತ್ತಿರುವ ರಥವನ್ನು ಕಂಡು ಶ್ರೀರಾಮನು ಅಷ್ಟರಲ್ಲಿ ಮೂರ್ಛ ತಿಳಿ ದೆದ್ದು ಬಂದಿದ್ದ ಸುಗ್ರೀವನನ್ನು ನೋಡಿ ಎಲ್ಲೆ ಪ್ರಿಯನಾದ ಕಪಿರಾಜನೇ ! ಇನ್ನು ಮೇಲೆ ಈ ರಾವಣನೊಡನೆ ಯುದ್ಧಕ್ಕೆ ನಿಲ್ಲ ತಕ್ಕವನು ನಾನೇ ಇವನು ನಮ್ಮ ಬಾಣ ಹತಿಯಿ೦ದಲೇ ಸಾಯತಕ್ಕವನು. ಅದು ಕಾರಣ ಈ ಕಪಿನಾಯಕರನ್ನು ವ್ಯರ್ಥವಾಗಿ ದಣಿಸಬೇಡ. ನೀವೆಲ್ಲರೂ ನಮ್ಮ ಯುದ್ಧ ವನ್ನು ನೋಡುತ್ತಿರಿ. ಈ ರಾವಣನು ಅಪ್ರತಿಮ ಪರಾಕ್ರಮವಿಜೃಂಭಿತನಾದುದರಿಂದ ಲೋಕ ವಿಖ್ಯಾತವೀರನೆಂದು ಪ್ರಖ್ಯಾತಿ ಯನ್ನು ಹೊ೦ದಿರುವನು. ಆದುದರಿಂದ ಇವನ ಹಮ್ಮನ್ನು ಮುರಿದು ಇವನ ದೇಹ ವನ್ನು ತುಂಡು ತುಂಡಾಗಿ ಕತ್ತರಿಸಿ ಭೂತಗಣಕ್ಕೆ ಔತಣವನ್ನು ಮಾಡಿಸುವೆನು ಎಂದು ಹೇಳಿ ಕಪಿಸೇನೆಗಳನ್ನು ರಾವಣನೊಡನೆ ಯುದ್ಧಕ್ಕೆ ಹೋಗುವಂತೆ ನಿಲ್ಲಿಸಿ ತನ್ನ ಉಟ್ಟ ನಾರ್ಮಡಿಯನ್ನು ತೆಗೆದು ವೀರಪಳಿಯನ್ನು ಬಿಗಿದುಟ್ಟು ಸೊಂಟದಲ್ಲಿ ಬಾ ಕನ್ನು ಸಿಕ್ಕಿಸಿ ಅಕ್ಷ ಯಬಾಣದ ಬತ್ತಳಿಕೆಗಳನ್ನು ಬೆನ್ನಿನಲ್ಲಳವಡಿಸಿ ಕೆದರಿರುವ ಜಡೆ ಗಳನ್ನು ಒಂದುಗೂಡಿಸಿ ಸುತ್ತಿ ಬಿಗಿದು ಕರಕೋದಂಡದ ಕೊಪ್ಪನಾರೈಯ್ಯು ಶಿಂಜಿನಿ ಯನ್ನು ಕಟ್ಟಿ ಮಿಡಿದು ಝಂಕಾರಧ್ವನಿಯನ್ನು ೦ಟುಮಾಡಲು ಆ ರಭಸವನ್ನು ಕೇಳಿ ಇದು ದುಷ್ಟನಾದ ರಾವಣವಿನಾಶಸೂಚಕವಾದ ರಘುವೀರಾಗ್ರಗಣ್ಯನ ಬಿಲ್ಬ ನಿಯು ಎಂದು ತಿಳಿದು ರಾವಣನ ಭಯವನ್ನು ಬಿಟ್ಟು ಅಷ್ಟದಿಕ್ಷಾಲಕರೂ ಏಕಾದಶರುದ್ರರೂ ದ್ವಾದಶಾದಿತ್ಯರೂ ಸಪ್ತಮರುತ್ತುಗಳೂ ಬ್ರಹ್ಮ ರುದ್ರರೂ ಸನಕನಾರದಾದಿ ಮಹರ್ಷಿ ಗಳೂ ಬಂದು ಆಕಾಶದಲ್ಲಿ ಕೂಡಿ ತಮ್ಮ ತಮ್ಮ ವಿಮಾನಗಳ ಮೇಲೆ ಕುಳಿತುಕೊಂಡು ಅತ್ಯಾದರದಿಂದ ನೋಡುತ್ತಿದ್ದರು. ಆಗ ರಾವಣನ ತೇರಿನ ಕುದುರೆಗಳು ರಾಮನ ಎದುರಿನಲ್ಲಿ ನಿಂತು ನಲಿದಾಡುತ್ತಿರುವುದನ್ನೂ 'ರಾಮನು ರಥಹೀನನಾಗಿ ನೆಲದಮೇಲೆ ನಿಂತಿರುವುದನ್ನೂ ನೋಡಿ ಲಕ್ಷಣನು ಅಸಹಭಾವವುಳ್ಳವನಾಗಿ ಈ ಪಾಪಿಯಾದ ರಾವಣನ ರಥವನ್ನು ಹೊಡೆದು ಚೂರುಚೂರುಮಾಡಿಬಿಡುವೆನೆಂದು ಧನುಸ್ಸಿನಲ್ಲಿ ಬಾಣ ವನ್ನು ತೊಟ್ಟನು. ಮತ್ತು ಆಗ ತಾನೇ ಮರ್ಧೆ ತಿಳಿದೆದ್ದು ಬಂದಿದ್ದ ಆಂಜನೇಯನು ಮಹಾ ಕೋಪತಾಪಿತ ಹೃದಯನಾಗಿ-ಈ ವಂಚಕನ ತೇರನ್ನು ಹೊಯ್ತು ನುಚ್ಚು