ಪುಟ:ಕಥಾಸಂಗ್ರಹ ಸಂಪುಟ ೨.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

186 ಕಥಾಸಂಗ್ರಹ-೪ ನೆಯ ಭಾಗ ಪಾಪಿಷ ನಾದ ನಾನು ಮಾತ್ರ ಉಳಿದೆನು ಎಂದು ಅನೇಕ ವಿಧವಾಗಿ ಹಂಬಲಿಸಿ ದುಃಖಿಸಿ ಮೈಮರೆತು ಮೈತಿಳಿದೆದ್ದು ಕುಳಿತು-ದೈವಯತ್ನವನ್ನು ಮಾರುವವ ರಾರು ಎಂದು ನಿರ್ಧರಿಸಿ ಮಂಡೋದರಿಯೇ ಮೊದಲಾದ ಅಂತಃಪುರ ಜನರನ್ನು ಬಹುವಿಧ ವಿವೇಕ ವಚನಗಳನ್ನು ಹೇಳಿ ಸಮಾಧಾನಪಡಿಸಿ ವೀರಕುಲತಿಲಕನಾದ ರಾವ ಣನ ಶವವನ್ನು ಪಾಲಕಿಯಲ್ಲಿಟ್ಟು ಕೊಂಡು ವಿವಿಧ ವಾದ್ಯಗಳೊಡನೆ ಕೂಡಿ ಮಸಾ ಣಕ್ಕೆ ತೆಗೆದು ಕೊಂಡು ಹೋಗಿ ಅಲ್ಲಿ ಮೃತದೇಹೋ ಚಿತಸಂಸ್ಕಾರಕೃತ್ಯಗಳನ್ನು ವಿಧಿವ ತಾಗಿ ಮಾಡಿ ತಿಲತರ್ಪಣವನ್ನು ಕೊಟ್ಟು ಅನಂತರದಲ್ಲಿ ಯುದ್ಧ ರಂದಲ್ಲಿ ಸತ್ತಿದ್ದ ಭಾತಪತ್ರಮಿತ್ರಬಾಂಧವಾದಿಗಳಿಗೆಲ್ಲಾ ವಿಧಿವತ್ರರ್ಮಪೂರ್ವಕವಾಗಿ ತರ್ಪಣೋದ ಕವನ್ನು ಕೊಟ್ಟು ಮಂಡೋದರ್ಯಾದಿ ಮಾನಿನೀ ಜನರನ್ನು ಅಂತಃಪುರಕ್ಕೆ ಕಳುಹಿಸಿ ತಾನು ಸ್ನಾನವನ್ನು ಮಾಡಿ ಶುಚಿರ್ಭೂತನಾಗಿ ಪಾಳಯದಲ್ಲಿ ಸುಗ್ರೀವಾದಿ ಕಪಿಸೇ ನಾಸಮೇತನಾಗಿ ಕುಳಿತಿರುವ ಶ್ರೀರಾಮನ ಸನ್ನಿಧಿಗೆ ಬಂದು ಸಾಷ್ಟಾಂಗ ಪ್ರಣತ ನಾಗಿ ಎದ್ದು ನಿಂತು ಕೊಂಡಿದ್ದನು. ಆಗ ಶ್ರೀರಾಮನು ಸುಗ್ರೀವನನ್ನು ನೋಡಿಎಲೆ ಕಪಿಚಕ್ರವರ್ತಿಯೇ ! ನೀನು ಈ ಲಕ್ಷಣನನ್ನು ಕರೆದು ಕೊಂಡು ಕಪಿಬಲಸ ಮೇತನಾಗಿ ವಿಭೀಷಣನೊಡನೆ ಲಂಕಾನಗರಕ್ಕೆ ಹೋಗಿ ದಿವ್ಯವಾದ ರಾವಣನ ಸಿಂಹಾ ಸನದ ಮೇಲೆ ಕುಳ್ಳಿರಿಸಿ ಲಂಕಾ ರಾಜ್ಯಾಭಿಷೇಕವನ್ನು ಮಾಡಿ ಈ ರಾಕ್ಷಸರಾಜ ನಾದ ವಿಭೀಷಣನು ಅಪ್ಪಣೆಯನ್ನು ಕೊಟ್ಟರೆ ಮಂಗಳಸ್ನಾನಾದಿಗಳನ್ನು ಮಾಡಿಸಿ ಸೀತೆಯನ್ನು ಕರೆದು ಕೊಂಡು ಬಾ ಎಂದು ಹೇಳಿದನು. ಆಗ ಸುಗ್ರೀವನು ರಾಮಾನು ಜನೊಡನೆ ಹೊರಟು ಸಮಸ್ಯವಾನರ ಸೇನೆಯನ್ನು ಕರೆದು ಕೊಂಡು ಲಂಕಾನಗರಕ್ಕೆ ಹೋಗಿ ವಿಭೀಷಣನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿ ವಿಧಿವತ್ತಾದ ಕರ್ಮಗಳಿಂದ ರಾಕ್ಷಸರಾಜ್ಯಾಭಿಷೇಕವನ್ನು ಮಾಡಿಸಿದನು. ಅನಂತರದಲ್ಲಿ ಕೃತಜ್ಞನಾದ ವಿಭೀಷ ಣನು ಲಕ್ಷ್ಮಣನನ್ನೂ ಸುಗ್ರೀವಾ೦ಗದಾದಿ ಕಪಿನಾಯಕರನ್ನೂ ಅಸದೃಶವಾದ ಸತ್ಕಾರಗಳಿಂದಲೂ ಸನ್ಮಾನಗಳಿಂದಲೂ ದಣಿಸಿದನು. ಕೂಡಲೆ ಲೋಕ ಮಾತೃವಾದ ಸೀತೆಯನ್ನು ಕರೆಸಿಕೊಂಡು ತನ್ನ ಪಟ್ಟಮಹಿಷಿಯಿಂದ ಆಕೆಗೆ ಮಂಗಳಸ್ನಾನಾದಿಗ ಳನ್ನು ಮಾಡಿಸಿ ದಿವ್ಯವನ್ನಾಭರಣಗಳಿಂದಲಂಕರಿಸಿ ನವರತ್ನ ಖಚಿತವಾದ ಪಾಲಕಿಯಲ್ಲಿ ಕುಳ್ಳಿರಿಸಿಕೊಂಡು ಆ ಪಾಲಕಿಯ ಮು೦ದೆಸೆಯಲ್ಲಿ ತಾನು ಬೆತ್ತದ ಕೋಲನ್ನು ಹಿಡಿ ದುಕೊಂಡು ಹೊರಟು ಜನಸಮುದಾಯದಲ್ಲಿ ದಾರಿಯನ್ನು ಬಿಡಿಸುತ್ತ ಕರೆದುಕೊಂಡು ಬಂದು ರಾಮನ ಸನ್ನಿಧಿಯಲ್ಲಿ ನಿಲ್ಲಿಸಿ ತಾನೂ ನಮಸ್ಕಾರವನ್ನು ಮಾಡಿ ಕೈ ಕಟ್ಟಿ ಕೊಂಡು ನಿಂತನು. ಆಗ ಬಲು ನಾಚಿಕೆಯಿಂದ ತಲೆಯನ್ನು ಬೊಗಿಸಿಕೊಂಡು ಭೂಮಿಯನ್ನು ಕಣ್ಣೀರುಗಳಿಂದ ನೆನಸುತ್ತಿರುವ ಸೀತೆಯನ್ನು ನೋಡಿ ಶ್ರೀರಾಮನು ಎಲೈ ಜಾನ ಕಿಯೇ ! ರಾಕ್ಷಸರು ಹೆಂಡತಿಯನ್ನು ಅಪಹರಿಸಿಕೊಂಡು ಹೋದರೆ ಕೂಡಲೆ ದುಷ್ಟ ರಾದ ಅವರನ್ನು ವಧಿಸಿ ಪತ್ನಿ ಯನ್ನು ತೆಗೆದುಕೊಂಡು ಬರುವುದಕ್ಕೆ ಕೈಯಲ್ಲಿ ಹರಿ ಯದೆ ಬಿಟ್ಟು ಬಿಟ್ಟನು ಎಂದು ಲೋಕದ ಜನರು ನನ್ನನ್ನು ಹೀಯಾಳಿಸುವರು ಎಂಬ