ಪುಟ:ಕಥಾಸಂಗ್ರಹ ಸಂಪುಟ ೨.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

188 ಕಥಾಸಂಗ್ರಹ-೪ ನೆಯ ಭಾಗ ನುಡಿದ ಮೇಲೆ ಕ್ಷಣಿಕವಾದ ಈ ಪ್ರಾಣಗಳೊಡನೆ ಇರಬೇಕೆಂಬ ಅಪೇಕ್ಷೆಯು ನನಗೆ ಲೇಶವಾದರೂ ಇರುವುದಿಲ್ಲ, ನಿರಪರಾಧಿನಿಯಾದ ನಾನು ನಿನ್ನ ವಾಗ್ದಾಣಗಳಿಂದ ಹತ ಳಾಗಿ ಮೃತಳಾದರೆ ನಿನಗೆ ಸ್ನೇಹತ್ಯಾದೋಷವು ಸಂಭವಿಸುವುದಿಲ್ಲ ವೆಂದು ಬಗೆದಿರು ವಿಯಾ ? ಲೋಕದಲ್ಲಿ ಮಹಾತ್ಮರಾದವರಿಗೆ ಕಠಿಣಬುದ್ದಿ ಯು ಉಂಟಾಗುವುದೇ ಇಲ್ಲ. ಒಂದು ವೇಳೆ ಉಂಟಾದರೆ ಅದು ಶ್ರೇಯಸೂಚಕವೆಂದು ಹೇಳುವುದಕ್ಕೆ ಆಗುವುದೇ ಇಲ್ಲ. ಅದು ಹೇಗಾದರೂ ಇರಲಿ, ಇಹದಲ್ಲೂ ಪರದಲ್ಲೂ ನನಗೆ ಗತಿದಾಯಕನೂ ಆಶ್ರಯನೂ ಆದ ನಿನ್ನ ಆಜ್ಞೆಯನ್ನು ತಿರಸ್ಕರಿಸದೆ ಇರುವುದೇ ನನ್ನ ನಿಜಧರ್ಮವು. ನಾನು ನಿನ್ನ ನ್ನು ಬಿಟ್ಟಿರಬೇಕೆಂಬುದೇ ನಿನ್ನ ಆಜ್ಞಾ ವಚನವು. ನಿನ್ನ ನಗಲಿದ ಮೇಲೆ ನಾನು ನನ್ನ ತಂದೆಯ ಮನೆಯಲ್ಲೂ ಇರುವುದಿಲ್ಲ. ಇನ್ನೆಲ್ಲಿಗೂ ಹೋಗುವುದಿಲ್ಲ. ನಿನ್ನ ಸನ್ನಿಧಿಯಲ್ಲೇ ಅಗ್ನಿ ಪ್ರವೇಶವನ್ನು ಮಾಡಿ ಈ ದೇಹವನ್ನು ಪರಿತ್ಯಜಿಸುವೆನು. ಲೋಕದಲ್ಲಿ ಸರ್ವಪ್ರಾಣಿಗಳ ಬಾಹ್ಯಾಭ್ಯ೦ತರವೃತ್ತಗಳನ್ನು ತಿಳಿಯುವ ದಿವಾಕರನಿ ಶಾಕರರೂ ವಾದ್ಯಗಿಗಳೂ ಆಕಾಶವೂ ಭೂಮಿಯ ನೀರೂ ಹೃದಯವೂ ಯಮನೂ ಅಹೋರಾತ್ರಿಗಳೂ ಉಭಯ ಸಂಜ್ಞೆಗಳೂ ಧರ್ಮಪುರುಷನೂ ನನ್ನ ಸರ್ವವೃತಕ ಸಾಕ್ಷಿಗಳಾಗಿದ್ದಾರೆ. ಇದರಲ್ಲಿ ಯಾವ ಸಂದೇಹವೂ ಅಣುಮಾತ್ರವೂ ಇಲ್ಲ ವು ಎಂದು ಹೇಳಿ ಮೈದುನನಾದ ಲಕ್ಷ್ಮಣನನ್ನು ನೋಡಿ ಎಲೈ ಲಕ್ಷ್ಮಣನೇ ! ಬೇಗನೆ ಚಿತಾ ಗ್ನಿ ಯನ್ನು ಸಿದ್ಧ ಮಾಡಿ ಉರಿಸು ಎನ್ನಲು ಆಗ ಲಕ್ಷಣನು ಸಂದೇಹಯುಕ್ತನಾಗಿ ಅಣ್ಣನ ಮುಖವನ್ನು ನೋಡಲು ಆತನು ಹಾಗೆ ಮಾಡಬಹುದೆಂದು ಅಪ್ಪಣೆಯನ್ನು ಕೊಟ್ಟನು. ಅನಂತರದಲ್ಲಿ ಲಕ್ಷ್ಮಣನು ಕ್ಷಣಮಾತ್ರದಲ್ಲಿ ದೊಡ್ಡವುಗಳಾದ ಒಣಗಿದ ಕೊರಡುಗಳನ್ನು ತರಿಸೊಟ್ಟಿ ಬೆಂಕಿಯನ್ನು ಹಾಕಿ ಹೊತ್ತಿಸಲು ಕೂಡಲೆ ಉರಿಯು ಆಕಾಶದ ವರೆಗೂ ವ್ಯಾಪಿಸಿತು. ಆಗ ವಿಭೀಷಣ ಸುಗ್ರೀವಾದಿಗಳು ರಾಮನ ಮನಃ ಕಾಠಿಣ್ಯವನ್ನೂ ದೃಢನಿಶ್ಚಯವನ್ನೂ ನೋಡಿ ಬೆರಗಾಗಿ ನಿರ್ಜೀವಿಗಳಾದ ಚಿತ್ರ ಪುತ್ಥಳಿಗ ಳಂತೆ ನಿಂತಿದ್ದರು. ವಾಯುಮಾರ್ಗದಲ್ಲಿ ದೇವತೆಗಳು-ಕುಸುಮ ಕೋಮಲವಾದ ಶ್ರೀರಾಮನ ಮನಸ್ಸು ಈ ರೀತಿಯಾಗಿ ವಜಕಾಠಿಣ್ಯವನ್ನು ಧರಿಸಬಹುದೇ ? ಅಯ್ಯೋ ಎಂದು ಮರುಗುತ್ತಿದ್ದರು, ಮತ್ತು ದೇವೇಂದ್ರನ ಪತ್ನಿ ಯಾದ ಶಚೀದೇವಿಯ ಇನ್ನೂ ಇತರರಾದ ದೇವಸಮೂಹವೂ ಈ ಸ್ಥಿತಿಯನ್ನೆಲ್ಲಾ ನೋಡಿ ಮಹಾ ಶಂಕಾತಂಕಿ ತಮನಸ್ಕರಾಗಿ-ಲೋಕದಲ್ಲಿ ಪುರುಷರಿಗೆ ಸಮಾನರಾದ ಕಠಿಣಹೃದಯವುಳ್ಳವರು ಯಾರೂ ಇಲ್ಲ. ಸರ್ವಜ್ಞನೂ ಲೋಕಾಭಿರಾಮನೂ ಆದ ರಾಮಚಂದ್ರನ ಮನಸ್ಸು ಇಂಥ ಮಹಾ ಪತಿವ್ರತೆಯಾದ ಸೀತೆಯಲ್ಲಿ ಇಷ್ಟು ಕಾಠಿಣ್ಯವುಳ್ಳುದಾದ ಮೇಲೆ ಸಾಧಾ ರಣರಾದ ಇತರ ಪುರುಷರನ್ನು ಮೆಚ್ಚಿಸುವುದು ಹೇಗೆ ? ಸತ್ಯದಿಂದ ಪುರುಷರನ್ನು ಮೆಚ್ಚಿ ಸುವ ಮಹಾತ್ಮಳಾದ ಸ್ತ್ರೀಯು ಲೋಕದಲ್ಲಿ ಈ ಸೀತೆಗಿಂತಲೂ ಬೇರೆ ಯಾರಿರುವರೋ ತಿಳಿಯದು. ಸ್ವಭಾವವಾಗಿ ಅಂಗದಲ್ಲಿಯ ಮನಸ್ಸಿನಲ್ಲಿಯ ಮೃದುತ್ವವುಳ್ಳವರಾದ ಅಬಲೆಯರು ಸ್ವಭಾವವಾಗಿ ಮನೋದೇಹೋಭಯ ಕಾಠಿಣ್ಯ ಯುಕರಾದ ಪುರುಷ ರನ್ನು ಅನುವರ್ತಿಸಿ ಸಹಧರ್ಮಿಣೀತ್ವದಿಂದ ಬಾಳುವುದು ಸಾಧಾರಣವಾದುದಲ್ಲ ಎಂದು ವಿವಿಧವಾಗಿ ಹೇಳಿಕೊಳ್ಳುತ್ತ ಪರಿತಾಪಮಯ ಚಿತ್ತವುಳ್ಳವರಾಗಿದ್ದರು.