ಪುಟ:ಕಥಾಸಂಗ್ರಹ ಸಂಪುಟ ೨.djvu/೨೦೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


192 ಕಥಾಸಂಗ್ರಹ-೪ ನೆಯ ಭಾಗ ಸೇನಾಪತಿಗಳೂ ತಮ್ಮ ತಮ್ಮ ಸೇನೆಗಳೊಡನೆ ಪುಷ್ಪಕವನ್ನು ಹತ್ತಿದರು. ಆ ವಿಮಾ ನವು ಇಷ್ಟು ಪರಿವಾರಪರಿಪೂರಿತವಾಗಿದ್ದರೂ ಅದರಲ್ಲಿ ಸ್ಥಳವು ಇನ್ನೂ ತೆರಪಾಗಿಯೇ ಇದ್ದಿತು. ಆ ಮೇಲೆ ದೇವತೆಗಳು ದೇವದುಂದುಭಿಗಳನ್ನು ಬಾರಿಸಿ ಪುಷ್ಪವೃಷ್ಟಿಯನ್ನು ಸುರಿಸಿದರು ಅನಂತರದಲ್ಲಿ ಆ ವಿಮಾನವು ಶ್ರೀರಾಮನ ಆಜ್ಞಾನುಸಾರವಾಗಿ ಆಕಾಶ ಮಾರ್ಗಕ್ಕೆ ಏರಿ ಹೊರಟು ಕಪಿರಾಜಧಾನಿಯಾದ ಕಿಂಧಾಪಟ್ಟಣದ ಬಳಿಗೆ ಬರಲು ಆಗ ಸೀತೆಯು ರಾಮನನ್ನು ನೋಡಿ ಮಾತಾಡುವಷ್ಟರಲ್ಲಿಯೇ ರುಮೆತಾರೆಯರೇ ಮೊದ ಲಾದ ವಾನರ ನಾರಿಯರು ಮೊದಲಿದ್ದ ತಮ್ಮ ವಾನರಾಕಾರಗಳನ್ನು ಬಿಟ್ಟು ಮನೋ ಜ್ಞ ಮನುಷ್ಯ ಸ್ತ್ರೀ ರೂಪಗಳನ್ನು ಧರಿಸಿ ಸರ್ವಾಲಂಕಾರಶೋಭಿತೆಯರಾಗಿ ಅತ್ಯುತ್ತಮ ವಾದ ಪುಷ ಫಲಾದಿಗಳನ್ನು ತೆಗೆದು ಕೊಂಡು ಎದುರಾಗಿ ಬಂದು ಸೀತೆಗೆ ಕೈಗಾ ಣಿಕೆಯನ್ನು ಒಪ್ಪಿಸಿ ಮೊದಲು ರಾವಣನು ತೆಗೆದು ಕೊಂಡು ಹೋಗುವಾಗ ಸೀತೆಯು ಬಿಸಾಡಿದ್ದ ಆಭರಣಗಳನ್ನು ಆಕೆಗೆ ಧರಿಸಿ ಶೃಂಗರಿಸಿದರು. ಆಗ ಸೀತಾದೇವಿಯು ಪರ ಮಸಂತೋಷದಿಂದ ಕೂಡಿದವಳಾಗಿ ತಾರಾ ರುಮಾದಿ ವಾನರ ನಾರಿಯರನ್ನು ಆಲಿಂ ಗಿಸಿ ಮನ್ನಿಸಿದಳು. ಆ ಬಳಿಕ ಸುಗ್ರೀವನೆದ್ದು ರಾಮನಿಗೆ ಸಾಷ್ಟಾಂಗಪ್ರಣತನಾಗಿ ಜೇಯಾ ಮಹಾತ್ಮನೇ ! ಈ ರಾತ್ರಿಯಲ್ಲಿ ನಮ್ಮ ಪಟ್ಟಣದಲ್ಲಿದ್ದು ಸೇವಕನಾದ ನನ್ನ ಪೂಜೆಯನ್ನು ಕೃಪೆಯಿಂದ ಸ್ವೀಕರಿಸಿ ನಮ್ಮೆಲ್ಲರನ್ನೂ ಕೃತಾರ್ಥರನ್ನು ಮಾಡಿ ನಾಳಿನ ಪ್ರಾತಃಕಾಲದಲ್ಲಿ ಪ್ರಯಾಣಮಾಡಬೇಕೆಂದು ಬೇಡಿಕೊಳ್ಳಲು ಆಗ ಶ್ರೀರಾಮನು ಸುಗ್ರೀವನನ್ನು ಕುರಿತು-ಅಯ್ಯಾ ಪರಮಪ್ರಿಯನಾದ ವಾನರ ಚಕ್ರವರ್ತಿಯೇ ! ನಿನ್ನ ಹಾಗೆ ನಮಗೆ ಸತ್ಕಾರವನ್ನು ಮಾಡಿದವರು ಯಾರುಂಟು ? ಇದೇನು ಔಪಚಾರಿಕವೇ ? ಎಂದಿಗೂ ಅಲ್ಲ. ಮಹಾತ್ಯ ನಾದ ನೀನು ಮಾಡಿದ ಸಹಾಯವನ್ನು ನಾನು ಎಂದಿಗೂ ಮರೆಯಲಾರೆನು. ಮೊದಲು ಹೋಗಿದ್ದ ನನ್ನ ಅಭಿಮಾನವು ಯಾರ ದೆಸೆಯಿಂದ ಕೈ ಗೂಡಿತು ? ನಾನು ಒಂದು ನಾಲಿಗೆಯಿಂದ ಅಸದೃಶವಾದ ನಿನ್ನ ಸಹಾಯಾಧಿಕ್ಯವನ್ನು ಹೊಗಳಲಾರೆನು. ನನ್ನ ತಮ್ಮನಾದ ಭರತನು ಈ ದಿನದಲ್ಲಿ ನನ್ನನ್ನು ಕಾಣದೇಹೋ ದರೆ ಅಗ್ನಿ ಪ್ರವೇಶವನ್ನು ಮಾಡಿ ದೇಹವನ್ನು ತೊರೆದು ಕೊಳ್ಳುವನು. ಈ ರೀತಿಯಾಗಿ ಆತನು ಪ್ರಥಮದಲ್ಲೇ ನನ್ನೆದುರಿಗೆ ಪ್ರತಿಜ್ಞೆಯನ್ನು ಮಾಡಿರುವನು. ಅದು ಕಾರಣ ನಿನ್ನ ಅಂತಃಪುರ ಸ್ತ್ರೀಯರು ಸೀತೆಯೊಡನೆ ಸುಖಸಲ್ಲಾಪಗಳನ್ನು ಮಾಡುತ್ತ ಬರಲಿ ಎಂದು ಹೇಳಲು ಹಾಗೇ ಸಿದ್ದರಾದ ಅವರೆಲ್ಲ ರೊಡನೆ ಹೊರಟು ವಿಮಾನವನ್ನು ನಡಿ ಸುತ್ತ ಭರದ್ವಾಜಾಶ್ರಮದ ಸಮಕ್ಕೆ ಬರಲು ಆ ಕೂಡಲೆ ಆ ಮಹರ್ಷಿಯು ಪರಮ ಸಂತೋಷದಿಂದ ಕೂಡಿದವನಾಗಿ ಸಾವಿರಾರು ಜನ ಮುನಿಗಳೊಡನೆ ಕೂಡಿ ಬಂದು ಶ್ರೀರಾಮನನ್ನು ಎದುರ್ಗೊಂಡು ವೇದಘೋಷಗಳನ್ನು ಮಾಡುತ್ತ ರಾಮನ ಮೇಲೆ ಮಂತ್ರಾಕ್ಷತೆಗಳನ್ನು ತಳಿದು ಪುಷ್ಟಫಲಾದಿಗಳನ್ನು ಕೊಟ್ಟು-ಎಲೈ ರಘುರಾ ಜೇಂದ್ರನೇ ! ಈ ದಿವಸ ನಮ್ಮ ಆಶ್ರಮದಲ್ಲಿದ್ದು ನಾವು ಮಾಡುವ ಆತಿಥ್ಯವನ್ನು ಸ್ವೀಕರಿಸಿ ಬೆಳಗಾಗುತ್ತಲೇ ಹೊರಟು ಭರತನನ್ನು ಕಾಣಬಹುದು ಎಂದು ಹೇಳಲು