ಪುಟ:ಕಥಾಸಂಗ್ರಹ ಸಂಪುಟ ೨.djvu/೨೦೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ರಾಮನ ಪಟ್ಟಾಭಿಷೇಕವು 193 ಆಗ ರಾಮನು ಪೂಜ್ಯರಾದ ಭರದ್ವಾಜ ಮಹರ್ಷಿಗಳೇ ! ತಮ್ಮ ಅಪ್ಪಣೆಯ ಮೇರೆಗೆ ನಡೆಯುವುದು ವಿಹಿತವೇ ಎಂದು ತಿಳಿದಿರುವೆನು. ಆದರೆ ನಾನು ಈ ದಿವಸ ಹೋಗಿ ಭರತನನ್ನು ಕಾಣದೇಹೋದರೆ ಆತನು ಖಂಡಿತವಾಗಿ ಯಜೇಶ್ವರನಿಗೆ ಆಹುತಿ ಯಾಗುವನು ಇದರಲ್ಲಿ ಏನೂ ಸಂದೇಹವಿಲ್ಲ. ಇದಕ್ಕೆ ಏನು ಯೋಚನೆಯನ್ನು ಮಾಡಬಹುದು. ಅಪ್ಪಣೆಯಾದಂತೆ ನಡೆದುಕೊಳ್ಳುತ್ತೇನೆ ಎಂದು ರಾಮನು ಹೇಳಿದು ದಕ್ಕೆ ಭರದ್ವಾಜ ಮಹರ್ಷಿಯು ನೀನು ಈ ದಿವಸ ಮಾತ್ರ ನಮ್ಮ ಆಶ್ರಮದಲ್ಲಿ *ರುವ ವರ್ತಮಾನವನ್ನು ತಿಳಿಸುವ ಹಾಗೆ ಹೇಳಿ ಶೀಘ್ರವಾಗಿ ಭರತನ ಬಳಿಗೆ ಹನುಮಂತ ನನ್ನು ಕಳುಹಿಸು ಎನ್ನಲು ಆಗ ಶ್ರೀರಾಮನುಆಗಲಿ, ಅದಕ್ಕೇನೆಂದು ಆಂಜನೇಯ ನನ್ನು ಕರೆದು ಹೇಳಬೇಕಾದ ಮಾತುಗಳನ್ನೆಲ್ಲಾ ಹೇಳಿ ಅವನನ್ನು ಭರತನ ಬಳಿಗೆ ಕಳುಹಿಸಿ ತಾನು ಪರಿವಾರಸಮೇತನಾಗಿ ಸುರಾಚಾರ್ಯನ ಮಗನಾದ ಭರದ್ವಾಜ ಮಹರ್ಷಿಯ ಆಶ್ರಮದಲ್ಲಿ ಪುಷ್ಪಕ ವಿಮಾನದಿಂದಿಳಿದು ಅಲ್ಲಿರುತ್ತಿದ್ದನು. ಆ ಬಳಿಕ ಭರಾಜಮಹರ್ಷಿಯು ಕಾಮಧೇನುವನ್ನು ನೆನೆಯಲು ಆ ಕೂಡಲೆ ಕಾಮಧೇನುವು ಬಂದು ದಿವ್ಯ ಭೋಜನಗಂಧಮಾಲ್ಯಾಂಬರವಿಭೂಷಣಾದಿಗಳಿ೦ದ ಸೀತಾ ರಾಮಲಕ್ಷ್ಮಣರನ್ನೂ ಕಪಿರಾಕ್ಷಸಸೇನೆಗಳನ್ನೂ ಸತ್ತರಿಸಿದ ಬಳಿಕ ಶ್ರೀರಾಮನು ಮುನಿಪತಿಯ ಅಪ್ಪಣೆಯಿಂದ ಸರ್ವಪರಿವಾರಸಮೇತನಾಗಿ ಅಲ್ಲಿಂದ ಹೊರಟು ನಂದಿ ಗ್ರಾಮಕ್ಕೆ ಬರುತ್ತಿದ್ದನು. ರಾಮನ ಅಪ್ಪಣೆಯಿಂದ ಮೊದಲೇ ಹೊರಟಿದ್ದ ಆಂಜನೇ ಯನು ನಂದಿಗ್ರಾಮಕ್ಕೆ ಬಂದು ಶ್ರೀರಾಮನು ಬರಲಿಲ್ಲವೆಂದು ಪ್ರಾಣಗಳನ್ನು ತೊರೆ ದುಕೊಳ್ಳುವುದಕ್ಕಾಗಿ ಜ್ವಾಲಾಮಾಲೆಯಿಂದ ಕೂಡಿರುವ ಅಗ್ನಿ ಯನ್ನು ಪ್ರದಕ್ಷಿಣೆ ಮಾಡುತ್ತಿರುವ ಭರತನ ಭಕ್ತಿಭಾವವನ್ನು ನೋಡಿ ಅತಿ ಜಾಗ್ರತೆಯಿಂದ ಬಂದು ಆತನ ಕೈಯನ್ನು ಹಿಡಿದುಕೊಂದು-ಎಲೈ ಸತ್ಯಸಂಧನಾದ ಭರತನೇ ! ಅಗ್ನಿ ಯನ್ನು ಪ್ರವೇಶಿಸಬೇಡ, ಇದೋ ! ಶ್ರೀರಾಮನು ಬಂದನು. 'ಕೈಲಾಸಭೂಧರದಂತೆ ಆಕಾಶ ಮಾರ್ಗದಲ್ಲಿ ಬರುತ್ತಿರುವ ಕುಬೇರನ ವಿಮಾನವನ್ನು ನೋಡು. ಅದರೆ ನಡುಗ. ಡೆಯಲ್ಲಿ ಪ್ರಕಾಶಮಾನವಾದ ಬೆಳ್ಕೊಡೆಯಿಂದಲೂ ಶ್ವೇತಚಾಮರಗಳಿಂದಲೂ ಕೂಡಿರುವ ಮಣಿಪೀಠದಲ್ಲಿ ಕುಳಿತಿರುವವನೇ ನಿನ್ನ ಪ್ರಿಯ ಭ್ರಾತೃವಾದ ಶ್ರೀ ರಾಮನು, ನನ್ನ ಹೆಸರು ಹನುಮಂತನು, ಮತ್ತು ರಾಘವನಿಂದ ಕಳುಹಿಸಲ್ಪಟ್ಟ ದೂತನು, ಇನ್ನು ಮೇಲೆ ನಿನ್ನ ಮನಸ್ಸಿನ ಸಂಶಯವನ್ನು ಬಿಟ್ಟು ತೆಂಕಣ ದಿಕ್ಕಿನ ಕಡೆಗೆ ನೋಡು ಎನ್ನಲು ಆಗ ಭರತನು ನಡೆದುಬರುತ್ತಿರುವ ಬಲ್ಕು ಗಿಲೋ ಎಂಬಂತೆ ಕಂಗೊ ಳಿಸುತ್ತ ಬರುತ್ತಿರುವ ವಿಮಾನವನ್ನು ದಿಟ್ಟಿಸಿ ನೋಡುತ್ತಿರುವಷ್ಟರಲ್ಲಿಯೇ ಆ ವಿಮಾ ನವು ನಂದಿಗ್ರಾಮದ ಬಳಿಗೆ ಬಂದಿಳಿದಿತು. ಆಗ ಭರತನು ಬಹಳವಾಗಿ ಸಂತೋಷವೆಂಬ ಸಮುದ್ರದಲ್ಲಿ ಮುಳುಗಿ ತೇಲಾ ಡುತ್ತ ತಾನು ಆ ದಿನದ ವರೆಗೂ ಭಯಭಕ್ತಿ ಪುರಸ್ಸರವಾಗಿ ಆರಾಧಿಸುತ್ತಿದ್ದ ಶ್ರೀರಾ ಮನ ರತ್ನ ಖಚಿತಗಳಾದ ಹಾವುಗೆಗಳನ್ನು ಮಂಡೆಯ ಮೇಲಿರಿಸಿಕೊಂಡು ಹೊರಟನು. ಆಗ ಆ ಭರತನ ಎರಡು ಕಡೆಗಳಲ್ಲೂ ಚಿನ್ನದ ಹಿಡಿಗಳಿಂದ ಶೋಭಿಸುತ್ತಿರುವ ಶ್ವೇತ