ಪುಟ:ಕಥಾಸಂಗ್ರಹ ಸಂಪುಟ ೨.djvu/೨೦೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


194 ಕಥಾಸಂಗ್ರಹ-೪ ನೆಯ ಭಾಗ ಚಾಮರಗಳಿಂದ ಬೀಸುತ್ತಿದ್ದರು. ಮತ್ತು ಶರತ್ಸಮಯದ ಹುಣ್ಣಿಮೆಯ ಚಂದ್ರನಂ ಬಿಳುಪಾಗಿಯ ಬಟುವಾಗಿಯೂ ಇರುವ ಕೊಡೆಗಳೂ ಬಾಲಸೂರ್ಯನಂತಿರುವ ಕೆಂಪು ಕೊಡೆಗಳೂ ಕಾರ್ಮುಗಿಲುಗಳಂತೆ ಕಪ್ಪಾಗಿರುವ ಕಪ್ಪು ಕೊಡೆಗಳೂ ಪಚೆ ಯಂತೆ ಹೊಳೆಯುತ್ತಿರುವ ಹಸುರು ಕೊಡೆಗಳೂ ಒಪ್ಪುತ್ತಿದ್ದುವು. ಮು೦ದುಗಡೆ ಯಲ್ಲಿ ನವರತ್ನ ಖಚಿತಗಳಾದ ತಡಿಗಳಿಂದಲೂ ವಿಚಿತ್ರ ಮಣಿಗಳಿಂದ ಅಲಂಕೃತಗಳಾಗಿ ಒಪ್ಪುತ್ತಿರುವ ಮೊಗವಾಡಗಳಿಂದಲೂ ಮುತ್ತಿನ ಕುಚ್ಚುಗಳ ಗೊಂಡೆಗಳಿಂದಲೂ ಕೆಂಪು ದಮಾಸಿನ ಎದೆಪಟ್ಟಿಗಳಿಂದಲೂ ನಾನಾ ಪ್ರಕಾರಗಳಾದ ಚಿನ್ನ ಬೆಳ್ಳಿಗಳ ಒಡವೆ ಗಳಿಂದ ಅಲಂಕೃತಗಳಾಗಿ ಪರಿಶೋಭಿಸುತ್ತಿರುವ ಹಿಡಿಗುದುರೆಗಳ ಸಾಲುಗಳು ಮೇಲಾಗಿ ಒಪ್ಪುತ್ತಿದ್ದುವು. ಮತ್ತು ದಿಗ್ಗಜಗಳು ತಾವು ನಿರಂತರವೂ ಭೂಮಿಯನ್ನು ಹೊರುವುದರಿಂದುಂಟಾಗುವ ಶ್ರಮವನ್ನು ಹೋಗಲಾಡಿಸಿಕೊಳ್ಳುವುದಕ್ಕೋಸ್ಕರ ಶ್ರೀ ರಾಮನ ಪಾದುಕೆಗಳ ಸೇವೆಯನ್ನು ಮಾಡುವುದಕ್ಕಾಗಿ ನಾನಾ ರೂಪಗಳನ್ನು ಧರಿಸಿ ಬಂದಿರುವುವೋ ಎಂಬಂತೆ ನೀರಾಜಿಯ ಗುಳಗಳಿಂದಲೂ ಚಿನ್ನದ ಕಿರುಗಂಟೆಗಳಿಂದಲೂ ಸುವರ್ಣದ ಸರಪಣಿಗಳಿಂದಲೂ ಕಾಲುಕಡಗಗಳಿಂದಲೂ ನೋಡುವವರಿಗೆ ಚಂದವನ್ನು ಬೀರ: ಕಿವಿಗಳ ಮುಂಗಡೆಯಲ್ಲಿ ಜೊಲುತ್ತಿರುವ ಬಿಳಿಯ ಚಾಮರಗಳಿಂದಲೂ ಶೃಂಗರಿಸಲ್ಪಟ್ಟು ವಗಳಾಗಿ ನವರತ್ನ ಖಚಿತಗಳಾದ ಅಂಬಾರಿಗಳನ್ನು ಧರಿಸಿಕೊಂಡು ಮದಗಜಗಳು ಮುಂದೆ ನಡೆದುವು. ಅವುಗಳ ಮುಂದೆ ಹಸುರು ಭಲ್ಲೆ ಯದವರೂ ಅವರ ಮುಂದೆ ಬೆಳ್ಳಿ ಕಟ್ಟಿನ ಈಟಿಯವರೂ ಅದರ ಮುಂದೆ ಧನುರ್ಬಾಣಗಳನ್ನು ಧರಿಸಿದ ವರೂ ಎರಡು ಕಡೆಗಳಲ್ಲೂ ಸಾಲುಸಾಲಾಗಿ ಹೋಗುತ್ತಿದ್ದರು. ಅವರ ನಡುವೆ ಓಲ ಗದವರೂ ಕೊಳಲಿನವರೂ ಕಹಳೆಯವರೂ ತಂಬೂರಿಯನ್ನೂ ವೀಣೆಯನ್ನೂ ಸಾರಂಗ ವನ್ನೂ ಸ್ವರಮಂಡಲವನ್ನೂ ಕಿನ್ನರಿಯನ್ನೂ ನುಡಿಸುವವರೂ ಭೇರಿ ಮದ್ದಲೆ ನಗಾರಿ ಹುಯು ತಂಬಟೆ ಈ ಮೊದಲಾದುವುಗಳನ್ನು ಬಾರಿಸುವವರೂ ಹೋಗುತ್ತಿದ್ದರು. ಮತ್ತು ಭರತ ಶಾಸ್ತ್ರಾಧಿದೇವತೆಗಳೊ ? ಅಪ್ಪರ ಸ್ತ್ರೀಯರ ಸಂಕುಲವೋ ಎಂಬ ಭ್ರಾಂತಿಯನ್ನು ಹುಟ್ಟಿಸುತ್ತಿರುವ ವಾರಸಿಲಾಸಿನಿಯರು ದಿವ್ಯ ವಿವಿಧ ವರ್ಣಪರಿಶೋ ಭಿಗಳಾದ ಸೀರೆಗಳನ್ನು ಟ್ಟು ಕಾಸೆಯನ್ನು ಕಟ್ಟಿ ಸೀರೆಯ ಸೆರಗನ್ನು ನಡುವಿನ ಪಟ್ಟಿ ಯಲ್ಲಿ ಸಿಕ್ಕಿಸಿ ನವರತ್ನಾಭರಣಗಳನ್ನು ಧರಿಸಿ ವಿಚಿತ್ರಾಂಬರಗಳಿಂದ ಮಾಡಲ್ಪಟ್ಟು ಮನೋಹರಗಳಾದ ಕುಪ್ಪಸಗಳನ್ನು ತೊಟ್ಟು ಕಾಲುಗಳಿಗೆ ಕಿರುಗೆಜ್ಜೆಗಳ ಸರಗಳನ್ನು ಕಟ್ಟಿಕೊಂಡು ಸಾಲುಸಾಲಾಗಿ ಎದುರೆದುರಾಗಿ ನಿಂತು ಅಭಿನಯಿಸುತ್ತ ನರ್ತಿಸುತ್ತ ಬರುತ್ತಿದ್ದರು. ಮತ್ತು ಮನೋಹರಗಳಾದ ಬಿಳಿಯ ನಿಲುವಂಗಿಗಳನ್ನು ತೊಟ್ಟು ನಾನಾವರ್ಣಗಳಿಂದ ಮನೋಜ್ಞಗಳಾದ ಪಂಗುಗಳನ್ನು ಧರಿಸಿ ಕೈಗಳಲ್ಲಿ ಚಿನ್ನದಿಂ ದಲೂ ಬೆಳ್ಳಿಯಿಂದ ಮಾಡಲ್ಪಟ್ಟ ಕೋಲುಗಳನ್ನು ಹಿಡಿದು ಕೊಂಡು ಜನರು ಒಬ್ಬರ ಮೇಲೊಬ್ಬರು ನುಗ್ಗದಂತೆ ಎಚ್ಚರವನ್ನು ಹೇಳುತ್ತ ಕಂಚುಕಿಗಳು ಬರುತ್ತಿದ್ದರು. ಮತ್ತು ಕುತ್ನಿ ಯ ಚಲ್ಲಣಗಳನ್ನು ತೊಟ್ಟು ತುಂಡಂಗಿಗಳನ್ನು ಇಟ್ಟುಕೊಂಡು ವಿವಿಧ ವಾದ ಚಿನ್ನದ ಕಂಬಿಯ ಪಾಗುಗಳನ್ನು ಧರಿಸಿ ಚಿನ್ನ ಬೆಳ್ಳಿಗಳಿಂದ ಮಾಡಲ್ಪಟ್ಟ ತೋರ