ಪುಟ:ಕಥಾಸಂಗ್ರಹ ಸಂಪುಟ ೨.djvu/೨೦೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ರಾಮನ ಪಟ್ಟಾಭಿಷೇಕವು 197 ಕನೂ ಆದ ನೀನು ಈ ರಾಜ್ಯಭಾರವನ್ನು ವಹಿಸಿಕೊಂಡು ಸೂರ್ಯ ಚಂದ್ರ ನಕ್ಷತ್ರ ಗಳಿರುವ ವರೆಗೂ ಸತ್ಯದಿಂದ ಪರಿಪಾಲಿಸುತ್ತ ದಶರಥಾದಿ ಪೂರ್ವ ರಾಜರುಗಳಿಗಿo ತ, ಅಪಾರವಾಗಿ ಕೀರ್ತಿಸಂಪಾದನೆಯನ್ನು ಮಾಡಿಕೊಂಡು ಇರುವವನಾಗು ಎಂದು ಭಯಭಕ್ತಿ ಪರಸ್ಪರವಾಗಿ ಬಿನ್ನವಿಸಲು ಪರಮಾನಂದತುಂದಿಲಮನಸ್ಕನಾದ ಶ್ರೀರಾಮನು ಸತ್ಯಸಂಧನೂ ಮಹಾತ್ಮನೂ ಆದ ಭರತನ ವಿಜ್ಞಾಪನೆಗಳಿಗೆ ಹಾಗೇ ಆಗಲಿ ಎಂದು ಅನುಮತಿಯನ್ನಿತ್ತು ಸರ್ವಪರಿವಾರ ಮಧ್ಯದಲ್ಲಿ ರಾರಾಜಿಸುತ್ತಿರುವ ದಿವ್ಯ ಮಣಿಮಯಾಸನದ ಮೇಲೆ ಕೂತು ಕೊಂಡನು ಅನಂತರದಲ್ಲಿ ಅರಿಭಯಂಕರನಾದ ಶತ್ರುಘ್ನನ ಅಪ್ಪಣೆಯ ಮೇರೆಗೆ ಬುದ್ದಿ ವಂತರಾದ ಜಟಾಬಂಧವಿಸ್ತಂಸಕರು ಬಂದು ಲೋಕಾಭಿರಾಮನಾದ ಶ್ರೀರಾಮನ ಸನ್ನಿಧಿಯಲ್ಲಿ ಸಾಷ್ಟಾಂಗ ಪ್ರಣತರಾಗಿ ಎದ್ದು ಕೈಮುಗಿದು ನಿಂತರು. ಆಗ ರಾಮಾ ಜಾನುಸಾರವಾಗಿ ಮೊದಲು ಭರತನ ಜಡೆಯನೂ ಆ ಮೇಲೆ ಲಕಣನ ಜಡೆಯ ನ್ಯೂ ಅನಂತರದಲ್ಲಿ ಶತ್ರುಘ್ರನ ಜಡೆಯನ್ನೂ ಬಿಡಿಸಿ ಅವರಿಗೆ ಮಂಗಳಸ್ನಾನವನ್ನು ಮಾಡಿಸಿ ಆ ಬಳಿಕ ಶ್ರೀರಾಮಚ೦ದ್ರನು ತನ್ನ ಜಡೆಯನ್ನೂ ಬಿಡಿಸುವುದಕ್ಕೆ ಅಪ್ಪಣೆ ಕೂಡಲು ಆ ಜಡೆಯನ್ನು ಬಿಡಿಸುವವರು ನವರತ್ನ ಖಚಿತಗಳಾದ ಸಿಕ್ಕಟ್ಟಿಗೆಗಳಿಂದಲೂ ಬಾಚಣಿಗೆಗಳಿಂದಲೂ ಉಗುರುಗಳಿಂದಲೂ ಸ್ವಲ್ಪವಾದರೂ ನೋವಾಗದಂತೆ ಬಿಡಿಸಿ ಪರಿಮಳಯುಕ್ತವಾದ ತೈಲವನ್ನು ಲೇಪಿಸಿ ಚೆನ್ನಾಗಿ ಜಡಿದೆ. ಮಂಗಳಸ್ನಾನವನ್ನು ಮಾಡಿಸಿದರು. ಆ ಮೇಲೆ ಶ್ರೀರಾಮನು ರಾಜಯೋಗ್ಯವಾದ ದಿವ್ಯಾಂಬರಾಭರಣ ಭೂಷಿತನಾಗಿ ಸರ್ವಲೋಕರಮ್ಯವಾದ ತೇಜಸ್ಸಂಪನ್ನತೆಯನ್ನು ಹೊಂದಿ ಭೂದೇವೇಂ ದ್ರನಂತೆ ರಾರಾಜಿಸಿದನು. ಅನಂತರದಲ್ಲಿ ಸುಗ್ರೀವಾಂಗದಾದಿ ಕಸಿಕಟಕವೂ ವಿಭೀಷ ಣಾದಿ ರಾಕ್ಷಸರೂ ಸಂತೋಷದಿಂದ ಮಂಗಳಸ್ನಾನವನ್ನು ಮಾಡಿ ದಿವ್ಯಾಂಬರಾಭರ ಣಭೂಷಿತರಾಗಿ ರಂಜಿಸಿದರು. - ಅಷ್ಟರಲ್ಲಿಯೇ ಪಶ್ಚಿಮಾಶಾನಿತಂಬಿನಿಯು ಸರ್ವಗುರುಜನ ಮಾತೃಜನ ಭಾತ ಜನ ಪರಿವಾರಾದಿ ಜನರೊಡನೆ ದಿವ್ಯ ಪೀಠೋಪವಿಷ್ಟನಾಗಿರುವ ಶ್ರೀರಾಮಚಂದ್ರನ ಅಭ್ಯುದಯ ಸೂಚಕವಾದ ಮಂಗಳಾರತಿಯನ್ನು ಎತ್ತಿ ಹರಸುವುದಕ್ಕೋಸ್ಕರ ಕೈಗೆ ಳಿಂದ ಧರಿಸಿಕೊಂಡಿರುವ ನವರತ್ನ ಖಚಿತವಾದ ಹರಿವಾಣವೋ ಎಂಬಂತೆ ದರ್ಶನೀಯ ವಾದ ಕೆಂಬಣ್ಣದಿಂದ ಕೂಡಿದ ದಿವಾಕರಮಂಡಲವು ಅಸ್ತಗಿರಿಯ ಶಿಖರ ಪ್ರಾಂತದಲ್ಲಿ ಪರಿಶೋಭಿಸಿತು. ಧರ್ಮಸ್ವರೂಪನಾದ ಶ್ರೀರಾಮನು ಇನ್ನು ಮೇಲೆ ರಾಜ್ಯ ರಕ್ಷಣೆಗೆ ಬರುವನು. ಅದು ಕಾರಣ ನಾವೆಲ್ಲರೂ ವೃಥಾ ಪರಿಭ್ರಮಣಾಯಾಸವನ್ನು ಬಿಟ್ಟು ಸ್ವಸ್ಥತೆಯಿಂದಿರುವಣ ಎಂದು ಉಲ್ಲಾಸದಿಂದ ಕೂಡಿ ಸಕ್ಷಿಸಮೂಹವೆಲ್ಲವೂ ಸೇರಿ ಹರ್ಷದ್ರನಿಯನ್ನು ಮಾಡುತ್ತಿವೆಯೋ ಎಂಬಂತೆ ಆ ಸಂಧ್ಯಾ ವೇಳೆಯಲ್ಲಿ ತಮ್ಮ ತಮ್ಮ ಗೂಡುಗಳನ್ನು ಕುರಿತು ತೆರಳುತ್ತಿರುವ ಪಕ್ಷಿಗಳ ಬಳಗವು ಕಾಣಿಸುತ್ತಿದ್ದಿತು. ಕೂಡಲೆ ವಿಹಂಗಮಸಂಕುಲದ ಕಲಕಲವು ತಪ್ಪಿಹೋಗಲು ಆಗ ಆ ಖಗಸಂಕುಲವು ಮಾತಿನಿಂದ ಶ್ರೀರಾಮ ಯಶೋವಿಸ್ತಾರವನ್ನು ಹೊಗಳಿ ದಣಿದು ಮನಸ್ಸಿನಿಂದ