ಪುಟ:ಕಥಾಸಂಗ್ರಹ ಸಂಪುಟ ೨.djvu/೨೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ರಾಮನ ಪಟ್ಟಾಭಿಷೇಕವು 199 ರನ್ನು ನಂಬಿರುವುದೆಂತು ? ಅವರು ವಸುಬಲವಿದ್ದರೆ ಪುರುಷ ತಾರತಮ್ಯಾನುಸಾರ ವಾಗಿ ನಡೆದುಕೊಳ್ಳುವರು. ಶ್ರೀರಾಮನ ಕೀರ್ತಿಕಾಂತೆಯು ತ್ರಿಲೋಕಪ್ರಖ್ಯಾತವಾದ ತನ್ನ ಕಾಂತಿಮಂಡಲವನ್ನು ತಿರಸ್ಕರಿಸುತ್ತಿರುವ ತಮಸ್ತತಿಯನ್ನು ನೋಡಿ ನಕ್ಕುದ ರಿಂದ ಆ ನಗೆಯ ಕಾಂತಿಯು ತಮಸ್ಸನ್ನು ಅಪ್ಪಳಿಸಿ ವಿರಾಜಿಸುತ್ತಿರುವುದೋ ಎಂಬಂತೆ ಸತ್ವದಿಕ್ಕದೇಶಗಳಲ್ಲೂ ಬೆಳದಿಂಗಳು ಪ್ರಕಾಶಿಸುತ್ತಿದ್ದಿತು. ಶ್ರೀರಾಮದರ್ಶ ನದಿಂದ ಸಂತುಷ್ಪಾಂತರಂಗರಾದ ಅಯೋಧ್ಯಾ ನಿವಾಸಿಗಳಂತೆ ಜೊನ್ನವಗಳು ಬಲಿತು ಬೆಳದಿಂಗಳನ್ನು ಕುಡಿದು ಕುಡಿದು ತೃಪ್ತಿ ಹೊಂದಿ ನಲಿದಾಡಿದುವು. ನೀಲೋತ್ಪಲಗಳು ನಿಜಕಾಂತನ ಕರಸ್ಪರ್ಶದಿಂದ ಎಚ್ಚೆತ್ತು ವೋ ಎಂಬಹಾಗೆ ಚಂದ್ರೋದಯದಿಂದ ವಿಕಸಿ ತಗಳಾಗಿ ಮನೋಹರತೆಯಿಂದ ಒಪ್ಪುತ್ತಿದ್ದು ವು. ಮತ್ತೆ ಗುರುಪತ್ನಿಯೊಡನೆ ಕೂಡಿ ಕಳ೦ಕಿಯಾಗಿ ದೋಪಾಕರನಾದ ಈ ಚಂದ್ರನನ್ನು ಕಣ್ಣುಗಳಿಂದ ನೋಡಲೇ ಬಾರದೆ ದು ಮೊಗಗಳನ್ನು ಮುಚ್ಚಿಕೊಂಡು ವೋ ಎಂಬ ಹಾಗೆ ಶೀತಕರಕರ ಜಡೀಭೂತಗಳಾದ ಪದ್ಮನಿಗಳು ಮುಚ್ಚಿಕೊಂಡುವು. ಲೋಕದಲ್ಲಿ ಮಹನೀಯರು ತಮಗೆ ಎಂಥ ಕಷ್ಟಕಾ ಲವು ಸಂಪ್ರಾಪ್ತವಾದಾಗ್ಯೂ ಆಶ್ರಿತರನ್ನು ಬಿಡುವುದಿಲ್ಲ ಎಂಬುದಕ್ಕೆ ಸಾಕ್ಷಿಯನ್ನು ತೋರಿಸುತ್ತಿವೆಯೋ ಎಂಬಂತೆ ಪದ್ಮನಿಗಳು ಹಗಲೆಲ್ಲಾ ತಮ್ಮಲ್ಲಿದ್ದು ಜೀವಿಸಿಕೊಳ್ಳುತ್ತಿದ್ದ ಭ್ರಮರಗಳನ್ನು ತಮ್ಮ ಸಂಕೋಚಾವಸ್ಥೆಯಲ್ಲೂ ಕೂಡ ತಮ್ಮಲ್ಲೇ ಸೇರಿಸಿಕೊಂಡು ಕಾಪಾಡುತ್ತಿರುವುವು. ಕನ್ನೆ ದಿಲೆಗಳು ಮುಗಿಯುತ್ತಿರುವ ಪದ್ಧಿ ನಿಗಳನ್ನು ನೋಡಿ-ಈ ಕಮಲಗಳು ದಿನಪತಿಯನ್ನು ನಿಜಪತಿಯನ್ನಾಗಿ ಮಾಡಿಸಿಕೊಂಡು ತೆರೆಮರೆಯಿಲ್ಲದೆ ಹಗಲೆಲ್ಲಾ ಆತನೊಡನಿದ್ದು ದೂ ಸಾಲದೆ ಹಗಲಿರುಳುಗಳಲ್ಲಿ ಮದ್ಯ ಪಾಯಿಗಳೊಡನೆ ಸೇರಿಕೊಂಡಿರುವ ಭಯಾವಹವಾದ ತಮ್ಮ ದೋಷವನ್ನು ಮರೆತು ಇತರರ ದೋಷವನ್ನು ಮಾತ್ರ ನೆನಸಿಕೊಂಡು ಕಣ್ಮುಚ್ಚಿ ಕೊಳ್ಳುತ್ತಿರುವ ಅವುಗಳ ಅವಿಚಾರಸ್ಥಿತಿಗೋಸ್ಕರವಾಗಿ ನಗುತ್ತಿರುವುವೋ ಎಂಬಂತೆ ವಿಕಸವನ್ನು ಹೊಂದಿ ಪರಿ ಶೋಭಿಸುತ್ತಿದ್ದುವು. ನಿಜಪತಿಗಳನ್ನು ಕಾಣದೆ ಮಹಾ ವಿರಹವ್ಯಥೆಯಿಂದ ಕೂಗಿ ಕೂಗಿ ಕೊರಗುತ್ತಿರುವ ಚಕ್ರವಾಕಿಗಳು ನಿರಂತರವೂ ನಿಜಕಾಂತರ ಅಗಲುವಿಕೆಯಿಂದ ವ್ಯಧಿತರಾಗಿ ಅವರನ್ನು ಕರೆದು ಹಂಬಲಿಸಿ ದುಃಖಿಸುತ್ತ ಮರಗುತ್ತಿರುವ ಶ್ರೀರಾಮ ವಿರೋಧಿಗಳ ಕಾಂತಿಯರನ್ನು ಅನುಕರಿಸುತ್ತಿದ್ದುವು. ಜಗತ್ತೆಲ್ಲವೂ ಕ್ಷೀರಸಮುದ್ರ ದಿಂದ ವ್ಯಾಪ್ತವಾಯಿತೋ ಎಂಬಂತೆ ಎಲ್ಲಿ ನೋಡಿದರೂ ಶಾಂತತೆಯಿಂದಲೂ ಧಾವಳ್ಯ ದಿಂದಲೂ ಯುಕ್ತವಾದ ಚ೦ದ್ರಿಕೆಯು ಚೆನ್ನಾಗಿದ್ದಿತು. ಆಗ ಮಹಾತ್ಮನಾದ ಶ್ರೀ ರಾಮಚಂದ್ರನು ಇಷ್ಟಬಂಧು ಜನಗಳೊಡನೆ ದಿವ್ಯಭೋಜನಾದಿಗಳನ್ನು ಮಾಡಿ ಗಂಧ ಪುಷ್ಪ ತಾಂಬೂಲಾದಿಗಳನ್ನು ಸ್ವೀಕರಿಸಿ ಸಂತೋಷದಿಂದಿರುತ್ತಿದ್ದು ಸರ್ವರನ್ನೂ ಅವರ ವರ ಶಯ್ಯಾಗೃಹಗಳಿಗೆ ಕಳುಹಿಸಿ ತಾನು ಅತ್ಯುತ್ತಮವಾದ ಸೆಜ್ಜೆ ಮನೆಗೆ ಬಂದು ಅಲ್ಲಿ ದಿವ್ಯ ಶಯ್ಯಾದಿ ಶಯನಸಾಮಗ್ರಿಗಳಿಂದ ಕೂಡಿರುವ ಮಂಚದ ಮೇಲೆ ಜಗದಾನಂದಿನಿ ಯಾದ ಜನಕನಂದಿನಿಯೊಡನೆ ಕೂಡಿ ಸಂತೋಷದಿಂದ ಪವಡಿಸಿದನು.