ಪುಟ:ಕಥಾಸಂಗ್ರಹ ಸಂಪುಟ ೨.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮನ ಪಟ್ಟಾಭಿಷೇಕವು 203 ರವು ಪರಿಶೋಭಿಸಿತು. ಪ್ರತಿಯೊಂದು ಮಂದಿರವೂ ವಿಚಿತ್ರಾಲಂಕಾರದಿಂದ ಕೂಡಿ, ನೋಟಕರ ಕಣ್ಣಗೆಗಳನ್ನು ಸೆಳೆಯುತ್ತ ಒಪ್ಪುತ್ತಿದ್ದಿತು. ರಾಜಾಲಯಗಳ ಮತ್ತು ದೇವಾಲಯಗಳ ಚಿತ್ರಶೃಂಗಾರ ಚಮತ್ಕೃತಿಗಳನ್ನು ಬಣ್ಣಿಸುವುದಕ್ಕೆ ಬರುವುದಿ ೬ವು. ವಿದೇಶಗತರಾಗಿದ್ದ ಜನರೆಲ್ಲರೂ ಸಂತೋಷಭಾವಭರಿತವಾದ ಹೃದಯವುಳ್ಳವ ರಾಗಿ ಅಮಲಾಂಬರಾಭರಣಗಳಿಂದ ಭೂಷಿಸಿಕೊಂಡು ಬಂದು ನೆರೆದರು. ಅನಂತರ ದಲ್ಲಿ ಶ್ರೀರಾಮ ದರ್ಶನೋತ್ಸುಕತೆಯಿಂದ ಸಮಸ್ತ ದೇಶದ ಪ್ರಜೆಗಳೂ ಬಂದು ನೆರೆ ದರು. ಮುನಿಜನಗಳೂ ಮಂತ್ರಿಗಳೂ ಸಮಸ್ತ ಪರಿವಾರದೊಡನೆ ಕೂಡಿದವರಾಗಿ ಮಂಗಳದ್ರವ್ಯಗಳನ್ನು ತೆಗೆದುಕೊಂಡು ಬಂದು ನಿಂತರು. ಕೂಡಲೆ ಶ್ರೀರಾಮದರ್ಶ ನಾರ್ಥವಾಗಿ ನಾಲ್ಕು ಸಮುದ್ರಗಳೂ ಬಂದು ನೆರೆದುವೋ ಎಂಬಂತೆ ಚತುರಂಗಬಲ ಗಳು ಬಂದು ನಿಂತುವು. ವಿವಿಧವಾದ್ಯಗಳು ದೊರೆಯುತ್ತ ದಿಂಡಲಗಳಲ್ಲಿ ಪ್ರತಿಧ್ವನಿ ಯನ್ನು ಹುಟ್ಟಿ ಸುತ್ತಿದ್ದುವು. ಆಗ ಪ್ರಮುಖರಾದ ಅಧಿಕೃತಿಗಳೂ ಪುರಜನರೂ ಶಿಲ್ಪ ಕಾರರೂ ಒಂದುಗೂಡಿ ಶ್ರೀರಾಮನ ಬರುವಿಕೆಯನ್ನು ಎದುರುನೋಡುತ್ತ ಪುಷ್ಪನ ಲಗಳನ್ನು ಹಿಡಿದು ನಿಂತರು. ಅನಂತರದಲ್ಲಿ ಶ್ರೀರಾಮಚಂದ್ರನು ಹೊರಟು ಗೋಧೂಳಿ ಲಗ್ನದಲ್ಲಿ ಆಯೋ ಧ್ಯಾನಗರವನ್ನು ಪ್ರವೇಶಿಸಿ ತನ್ನ ತಂದೆಯಾದ ದಶರಥಮಹಾರಾಜನ ಅರಮನೆಯನ್ನು ಹೊಕ್ಕು ಅಲ್ಲಿಳಿದು ಕೊಂಡು ತನ್ನ ಪ್ರಿಯ ಸಹೋದರನಾದ ಭರತನನ್ನು ನೋಡಿ ಎಲೈ ಭರತನೇ ! ನಮ್ಮ ಪ್ರಾಣಸಖನಾದ ಸುಗ್ರೀವನು ನಮಗೆ ಪರಮೋಪಕಾರವನ್ನು ಮಾಡಿದವನಾದುದರಿಂದ ಸೇನಾಸಮೇತನಾಗಿ ನೀನೇ ಹೋಗಿ ಆತನನ್ನು ವಿಭವ ಡನೆ ಕರೆದು ಕೊಂಡು ಬಂದು ನನ್ನ ಮೊದಲಿನರಮನೆಯಲ್ಲಿಳಿಸಿ ಆತನ ಉಪಚಾರ ವಿಷ ಯದಲ್ಲಿ ಯಾವ ಭಾಗದಲ್ಲೂ ಕೊರತೆಯುಂಟಾಗದಂತೆ ವಿಚಾರಿಸಿಕೊಳ್ಳುವವ ನಾಗು, ಹೋಗು ಎಂದು ಅಪ್ಪಣೆಯನ್ನು ಕೊಡಲು ಆಗ ಅನುಜ್ಞಾತನಾದ ಭರತನು ಸಂತೋಷದಿಂದ ಕೂಡಿ ಸಮಸ್ಯೆ ಪರಿವಾರಸಮೇತನಾಗಿ ಸುಗ್ರೀವನ ಬಳಿಗೆ ಬಂದು ಪ್ರೀತಿಯಿಂದ ಆತನ ಕೈಯನ್ನು ಹಿಡಿದುಕೊಂಡು ಕುಶಲಪ್ರಶ್ನೆ ಯಂಗೆಯು ಸಕಲ ಮರ್ಯಾದೆಯಿಂದ ಶ್ರೀರಾಮನ ಮೊದಲಿನರಮನೆಗೆ ಕರೆದು ಕೊಂಡು ಬಂದು ಅಲ್ಲಿಳಿಸಿ ಸುಗ್ರೀವನನ್ನು ಕುರಿತು-ಎಲೈ ಪ್ರಿಯಸಖನೇ ! ಮಹಾತ್ಮನಾದ ವಾನರಚಕ್ರೇಶ್ವರನೇ ! ನೀನು ನನಗೆ ಮಾಡಿದ ಮಹೋಪಕಾರಕ್ಕೆ ಪ್ರತಿಯಾಗಿ ನಾವು ನಿನಗೆ ಏನನ್ನು ತಾನೆ ಮಾಡಬಲ್ಲೆವು? ನಾಲ್ಕು ಜನ ಸಹೋದರರಾದ ನಮ್ಮಲ್ಲಿ ನೀನು ಐದನೆಯವನು. ಭೂಲೋಕದಲ್ಲಿ ನಿನಗೆ ಸಮಾನರಾದವರಾರುಂಟು ? ಶಾಶ್ವತವಾದ ನಿನ್ನ ಕೀರ್ತಿಗೂ ಪರಹಿತಕ್ಕೋಸ್ಕರವಾಗಿ ಉಪಯುಕ್ತವಾದ ನಿನ್ನ ಬಲಕ್ಕೂ ಮೂರು ಲೋಕಗ ಳಲ್ಲೂ ಎಣೆಯುಂಟೇ ? ಇಲ್ಲವು ಎಂದು ವಿವಿಧವಾಗಿ ಸುಗ್ರೀವನ ಸುಗುಣಕಥ ನವನ್ನು ಮಾಡಿ ನಾಳಿನ ದಿನ ನಡೆಯುವ ಶ್ರೀರಾಮಚಂದ್ರನ ಪಟ್ಟಾಭಿಷೇಕ ಮಹೋತ್ಸವಕ್ಕಾಗಿ ಚತುಸ್ಸಮುದ್ರೋದಕಗಳನ್ನೂ ಗಂಗಾದಿ ಮಹಾನದ್ಯುದಕಗ ಇನ್ನೂ ದಿವೌಷಧೀರಸಗಳನ್ನೂ ತರುವುದಕ್ಕೋಸ್ಕರವಾಗಿ ಕಪಿವೀರರಿಗೆ ಅಪ್ಪಣೆ