ಪುಟ:ಕಥಾಸಂಗ್ರಹ ಸಂಪುಟ ೨.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮನ ಪಟ್ಟಾಭಿಷೇಕವು 205 ಚಂದ್ರನಿಗೆ ನಡೆಯುವ ಪಟ್ಟಾಭಿಷೇಕ ಮಹೋತ್ಸವವು ನಿರ್ವಿಘ್ರ ತೆಯಿಂದ ನಡೆಯು ವಂತ ದಯೆಮಾಡಿ ಅನುಗ್ರಹಿಸಬೇಕೆಂದು ಬಹು ವಿಧವಾಗಿ ಬೇಡಿಕೊಂಡು ಪುನಃ ಭಯಭಕ್ತಿ ಪುರಸ್ಸರವಾಗಿ ಬಲಗೊಂಡು ಪೊಡಮಟ್ಟು ಎದ್ದು ಇಬ್ಬರು ಕೈಗಳಲ್ಲಿ ಒನಕೆಗಳನ್ನು ತೆಗೆದುಕೊಂಡು ಸುವ್ವಹಾಡುಗಳನ್ನು ಹಾಡುತ್ತ ಅರಿಸಿನವನ್ನು ಕುಟ್ಟಿ ಆ ಬಳಿಕ ಬೀಸುವ ಕಲ್ಲುಗಳಿಗೆ ಗೋದಿಯ ಹಿಟ್ಟನ್ನು ಹಾಕಿಕೊಂಡು ಪದಗಳನ್ನು ಹೇಳುತ್ತ ಬೀಸಿ ಅನಂತರದಲ್ಲಿ ಇಬ್ಬರು ಮುತ್ತೆ ದೆಯರು ಸೀತಾ ರಾಮರಿಗೆ ಆಶೀರ್ವಾದಗಳನ್ನು ಮಾಡಿ ಚಿನ್ನದ ಬಟ್ಟಲಲ್ಲಿರುವ ಪರಿಮಳ ತೈಲ ವನ್ನು ತೆಗೆದುಕೊಂಡು ಸೀತೆಗೊಬ್ಬಳು ರಾಮನಿಗೊಬ್ಬಳು ಒತ್ತಿ ಮಂಗಳಗಳನ್ನು ಹಾಡುತ್ತ ಆರತಿಗಳನ್ನೆತ್ತಿದರು. ಅನಂತರದಲ್ಲಿ ಸಂತುಷಾ೦ತರ೦ಗಳಾದ ಕೌಸಲ್ಯಾದೇವಿಯು ಅರಸಿನ ಕುಂಕುಮ ಗಂಧ ಪುಷ್ಪ ಅಕ್ಷತೆ ಹಣ್ಣು ಕಾಯಿ ದಕ್ಷಿಣೆ ತಾಂಬೂಲ ಇವು ಮೊದಲಾದುವುಗ ಳಿಂದ ಸತ್ರರಿಸಿ ಆ ಮುತ್ತೈದೆಯರನ್ನೆಲ್ಲಾ ಅವರವರ ಮನೆಗಳಿಗೆ ಕಳುಹಿಸಿಕೊಟ್ಟು ತರುವಾಯ ಅವೈರುಗಳನ್ನು ಕುರಿತು ಸೀತಾರಾಮರಿಗೆ ಮಂಗಳಮವನ್ನು ಮಾಡಿಸಿ ದಿವ್ಯಾಂಬರಾಭರಣಗಳನ್ನು ಧರಿಸಿ ಅಲಂಕರಿಸಿ ಎಂದು ಅಪ್ಪಣೆಯನ್ನು ಕೊಟ್ಟಳು. ಆ ಕೂಡಲೆ ವೃದ್ದೆ ಯರೂ ಜಾಣೆಯರೂ ಆದ ಅರುಗಳು ಬಂದು ಸೀತಾರಾಮರನ್ನು ಮಜ್ಜನದ ಮನೆಗೆ ಬಿಜಮಾಡಿಸಿಕೊಂಡು ಹೋಗಿ ಶುದ್ಧ ಸ್ಪಟಿಕ ಶಿಲಾನಿರ್ಮಿತವಾದ ಬಚ್ಚಲಲ್ಲಿ ಚಂದ್ರಕಾಂತಶಿಲಾಕಲ್ಪಿತಗಳಾದ ಕಾಲ್ಕ ಣೆಗಳ ಮೇಲೆ ಕುಳ್ಳಿರಿಸಿ ನವರತ್ನ ಖಚಿತಗಳಾದ ಹೊಂಗರಗಗಳಿಂದ ಬಲು ಬಿಸಿಯ ಬಲು ತಣ ಆಗದಿರುವ ಪರಿಮಳೋದಕವನ್ನು ಎರೆದು ಅರಸಿನವೇ ಮೊದಲಾದ ಅಂಗರಾಗಗಳನ್ನು ಲೇಪಿಸಿ ಮತ್ತೆ ಮಂಗಳಸ್ನಾನವನ್ನು ಮಾಡಿಸಿ ಪರಿಶುದ್ದ ವಾದ ದಿವ್ಯ ವಸ್ತ್ರಗಳಿಂದ ಮೈಯೊರಿಸಿ ರಾಮನಿಗೆ ದಿವ್ಯ ಪೀತಾಂಒರಗಳನ್ನು ಡಿಸಿ ಹೊದಿಸಿ ಕಿರೀಟ ಕುಂಡಲ ಕೇಯರ ಕಟಕ ಮುದ್ರಿಕಾ ಹಾರಾದಿ ವಿವಿಧಾಭರಣಗಳನ್ನು ತೊಡಿಸಿ ದಿವ್ಯ ಗಂಧ ಮಾಲಿಕೆಗಳಿಂದ ಅಲಂಕರಿಸಿ ಕರೆದುಕೊಂಡು ಬಂದು ಹಜಾರದಲ್ಲಿ ನವರತ್ನ ಖಚಿತ `ವಾದ ಸುವರ್ಣದ ಮಂಚದ ಮೇಲೆ ಕುಳ್ಳಿರಿಸಿ ಅನಂತರದಲ್ಲಿ ಲೋಕಮಾತೃವಾದ ಸೀತೆಯನ್ನು ಅಸದೃಶವಾಗಿ ಅಲಂಕರಿಸುವುದಕ್ಕೆ ಆರಂಭಿಸಿದರು. ಅವರಲ್ಲಿ ಒಬ್ಬಳು ಜಾಣೆಯು ಸೀತಾದೇವಿಯ ರೂಪಲಾವಣ್ಯಗಳನ್ನು ನೋಡಿ ತಲೆದೂಗಿದವಳಾಗಿ- ಎಲೈ ಅಕ್ಕಂದಿರಾ ! ಲೋಕದ ಸಾಧಾರಣ ಸ್ತ್ರೀಯರಿಗೆ ಆಭರ ಣಗಳನ್ನು ತೊಡಿಸಿ ಅಲಂಕರಿಸಿದರೆ ಆ ಆಭರಣಗಳಿಂದ ಅವರಿಗೆ ಒಂದು ವಿಧವಾದ ಚಲುವಿಕೆಯುಂಟಾಗುವುದು. ಈ ಮಹಾ ಸೌಂದರ್ಯವತಿಯಾದ ಸೀತಾದೇವಿಗೆ ಆಭರಣಗಳನ್ನಿಟ್ಟರೆ ಈಕೆಯ ಅನನ್ಯಸಾಧಾರಣ ರೂಪಲಾವಣ್ಯಗಳಿ೦ದ ಆ ತೊಡವು ಗಳಿಗೇ ಅಸದೃಶವಾದ ಪಾಶಸ್ಕೃ ಮು೦ಟಾಗುವುದೇ ಹೊರತು ಅವುಗಳಿ೦ದಿವಳಿಗೇನೂ ಸೌಂದರ್ಯವುಂಟಾಗಲಾರದು ಎಂದು ಹೇಳಲು ಆಗ ಮತ್ತೊಬ್ಬಳು-ಎಲೆ ತಂಗಿ ಯೇ ! ನೀನು ಹೇಳಿದ ಮಾತು ಸತ್ಯವಾದುದೇ ಸರಿ. ಆದರೂ ಲೋಕದ ನಡುವಳಿ