ಪುಟ:ಕಥಾಸಂಗ್ರಹ ಸಂಪುಟ ೨.djvu/೨೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


206 ಕಥಾಸಂಗ್ರಹ-೪ ನೆಯ ಭಾಗ ಕೆಯ ಪ್ರಕಾರ ಈಕೆಗೆ ಆಭರಣಗಳನ್ನು ತೊಡಿಸಬೇಕಾಗಿದೆ ಎಂದು ಹೇಳಿ ಸೀತಾದೇ ವಿಯ ಕಾಲ್ಪೆರಳುಗಳಿಗೆ ವಜ್ರದ ಆಣಿಮೆಟ್ಟು ಕಾಲುಂಗುರ ಬೊಬ್ಬುಳಿಕಾಯಿ ಅಕ್ಕಿ ಪಿಲ್ಲಿ ಕಿರು ಪಿಲ್ಲಿಗಳೆಂಬ ಒಡವೆಗಳನ್ನು ಇಕ್ಕಿದುದರಿಂದ ಆ ಬೆರುಳುಗಳ ಉಗುರು ಗಳ ಶ್ರೇಷ್ಠ ವಾದ ಕಾಂತಿಯಿಂದ ಪರಾಜಿತಗಳಾದ ನಕ್ಷತ್ರಗಳು ಬಂದು ಸೀತಾ ವಿಯ ಪದನಖಗಳನ್ನು ಸೇವಿಸುತ್ತಿವೆಯೋ ಎಂಬಂತೆ ಪ್ರಕಾಶಿಸಿದವು. ಮತ್ತೊಬ್ಬಳು ವಿಲಾಸವತಿಯು ಅರಗಿನ ರಸವನ್ನು ತಂದು ಬತ್ತಿಯಿಂದ ಅದ್ದಿ ತೆಗೆದು ಸೀತಾದೇ ವಿಯ ಕಾಲ್ಪ ಹಿಂಮಡಿಗಳಿಗೆ ಬೆಳಿದು ಶೃಂಗರಿಸಲು ಆ ಅರಗಿನ ರಸದ ಕಾ೦ತಿ ಯೊಡನೆ ಕೂಡಿದ ಪಾದದ ಕೆಂದಳಿರ್ವಣ್ಣವು ಸೂರ್ಯೋದಯ ಕಾಲದಲ್ಲಿ ಉಂಟಾ ಗುವ ಪ್ರಾತಸ್ಸಂಧ್ಯಾರಾಗವನ್ನು ಪಳಿಯುತ್ತಿದ್ದಿತು. ಇನ್ನೊಬ್ಬಳು ಗಾಡಿಕಾತಿಯು ಚಿನ್ನದಿಂದ ಮಾಡಲ್ಪಟ್ಟ ಮನೋಹರವಾದ ರುಳಿಯನ್ನು ತೆಗೆದುಕೊಂಡು ಬಂದು ಸೀತಾದೇವಿಯ ಕಾಲುಗಳಿಗೆ ಇಡಲು ಅವುಗಳು ಬಾಲಾದಿತ್ಯನ ಪರಿವೇಷದಂತೆ ಕಂಗೊ ಳಿಸಿದುವು. ಮತ್ತೊಬ್ಬಳು ಮಾನಿನಿಯು ಸುವರ್ಣದ ಸರಿಗೆಗಳಿಂದ ನೇಯಲ್ಪಟ್ಟು ಅತಿ ರಮ್ಯತೆಯನ್ನೊಳಗೊಂಡಿರುವ ದಿವ್ಯವಾದ ಸೀರೆಯನ್ನು ಚೆನ್ನಾಗಿ ನೆರಿ ಹಿಡಿದು ತಂದು ಉಡಿಸುವುದಕ್ಕೆ ಆರಂಭಿಸಿ ಬಲು ಹೊತ್ತಿನ ವರೆಗೂ ಆಕೆಯ ನಡುವನ್ನು ಕಾಣದೆ ಕಡೆಗೆ ಪ್ರಯಾಸದಿಂದ ಬಡನಡುವನ್ನು ಕಂಡು ಉಡಿಸಿದಳು. ಮತ್ತೊಬ್ಬಳು ಕಮಲವಿ ಮಲಮುಖಿಯು ಸುವರ್ಣದ ನೇವಣದಿಂದಲೂ ಕಿರುಗೆಜ್ಜೆಗಳಿಂದಲೂ ಕೂಡಿ ನವ ರತ್ನ ಖಚಿತವಾದ ನಡುವಿನ ಪಟ್ಟೆ ಯನ್ನು ತಂದು ಜನಕನಂದಿನಿಯ ನಡುವಿಗಿಟ್ಟು ನೋಡಿ ಈ ಸೊಬಗು ಯಾರಿಗುಂಟೆಂದು ತಲೆದೂಗಿದಳು. ಇನ್ನೊಬ್ಬಳು ಭೂಮಿಜೆಯ ಕೈಬೆರುಳುಗಳಿಗೆ ಚಿತ್ರವಿಚಿತ್ರಗಳಾದ ಉಂಗುರಗಳನ್ನು ತಂದು ತೊಡಿಸಿದಳು. ಇನ್ನೊ ರ್ವಳು ಹಸ್ತಗಳಿಗೆ ನವರತ್ನಖಚಿತಗಳಾದ ಕಟಕ ಹಿಂಬಳೆ ಚಳಿಕೆ ಮುಂತಾದ ಆಭರಣ ಗಳನ್ನೂ ತೋಳುಗಳಿಗೆ ನಾಗಮುರಿ ಬಾಜೇಬಂದುಗಳನ್ನೂ ಕೊರಳಿಗೆ ಕಂಠೀಸರ ಕಡ ಲೇಕಾಯಿ ಯ ಸರ ಔರೀ ಸರ ಮುತ್ತಿನ ಸರ ಜೋಮಾಲೆ ಅಕೆ ನಕ್ಷ ತ್ರಮಾಲಿಕೆ ಈ ಮೊದಲಾದ ನಾನಾವಿಧವಾದ ಕಂಠಾಭರಣಗಳನ್ನೂ ಹಣೆಯಲ್ಲಿ ಶ್ರೇಷ್ಠ ಮೌಕ್ತಿಕ ಗಳಿಂದ ರಚಿಸಲ್ಪಟ್ಟ ಚುಟ್ಟಿ ಯನ್ನೂ ಮೂಗಿನಲ್ಲಿ ಮನೋಹರವಾದ ಮೂಗುತಿಯನ್ನೂ ನಡುದಲೆಯಲ್ಲಿ ಮಲಕುಗೊಂಡೇ ಧಾರಗಳನ್ನೂ ಹಿಂದಿಯಲ್ಲಿ ಜಡೆ ಭಂಗಾರವೇ ಮೊದಲಾದ ವಿವಿಧಾಭರಣಗಳನ್ನೂ ಇಟ್ಟು ಇನ್ನೂ ಹೇಳುವುದಕ್ಕೆ ಸಾಧ್ಯವಾದ ಅಪಾ ರಾಭರಣಗಳನ್ನೂ ಇಟ್ಟು ಶೃಂಗರಿಸಿದಳು. ಮತ್ತೊಬ್ಬಳು ದಿವ್ಯ ರತ್ನ ಪುಂಜರಂಜಿತ ವಾಗಿ ನೋಡುವವರ ಕಣ್ಣಗೆಗಳನ್ನು ಸೆಳೆಯುತ್ತ ಅಸದೃಶವಾಗಿರುವ ಕುಪ್ಪಸವನ್ನು ತೊಡಿಸಿದಳು. ಈ ರೀತಿಯಾಗಿ ವಿವಿಧಾಭರಣಾಂಬರಗಳಿಂದ ಭೂಷಿತಳಾದ ಸೀತಾದೇ ವಿಯನ್ನು ನೋಡಿ ಅಂತಃಪರನಾರಿಯರು ತಲೆದೂಗಿ ನಲಿದು ಸೀತಾದೇವಿಯ ಜನ್ನ ವನ್ನು ಕೊಂಡಾಡಿ ದಣಿದರು. ಈ ಪ್ರಕಾರವಾಗಿ ಸರ್ವಜಗನ್ನ ನೋಹರಾಂಗಿಯಾದ ಜನಕರಾಜನ ಮಗಳು ಸರ್ವ ದಿವ್ಯಾಂಬರಾಭರಣಭೂಷಿತಳಾಗಲ ಆಗ ಸ್ತ್ರೀಯರು ದೃಷ್ಟಿ ದೋಷ ನಿವಾರಣಾ