ಪುಟ:ಕಥಾಸಂಗ್ರಹ ಸಂಪುಟ ೨.djvu/೨೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


220 ಕಥಾಸಂಗ್ರಹ-೫ ನೆಯ ಭಾಗ ರಾದ ಬೃಹಸ್ಪತ್ಯಾಚಾರ್ಯರು-ನೀವು ಇತ್ತಂಡದವರೂ ಕೂಡಿ ಏಕಮನಸ್ಸಿನಿಂದ ಪಾಲ್ಗಡಲನ್ನು ಕಡೆಯುವಲ್ಲಿ ಅಮೃತ ಒಂದು ವಿನಾ ಉಳಿದ ಭೋಗ್ಯ ವಸ್ತುಗಳು ಏನೇನು ಹುಟ್ಟಿದಾಗೂ ಅವುಗಳಲ್ಲಿ ಒಂದನ್ನಾ ದರೂ ನೀವು ಮುಟ್ಟಿದೆ ದೇವತೆಗಳಿಗೇ ಬಿಟ್ಟು ನೀವು ಅಮೃತ ಒಂದನ್ನು ಮಾತ್ರ ತೆಗೆದು ಕೊಂಡು ಪಾನಮಾಡಿದರೆ ನೀವೇ ಅಮರ್ತ್ಯರಾಗುವಿರಿ. ಹೀಗೆ ಮಾಡುವುದರಿಂದ ನೋಡುವವರಿಗೆ ನ್ಯಾಯವಾಗಿಯ ಇರುವುದು ಎಂದು ಹೇಳಲು ಆ ಮಾತನ್ನು ಕೇಳಿ ದೈತ್ಯರೆಲ್ಲರೂ ಮಹಾತ್ಮರಾದ ಈ ಬೃಹಸ್ಪತಾಚಾರ್ಯರು ನಿಜವಾಗಿಯೂ ನಮ್ಮ ಶ್ರೇಯಸ್ಸನ್ನೇ ಕೋರಿಕೊಂಡಿರು ವರೇ ಹೊರತು ದೇವತೆಗಳಲ್ಲಿ ಅಣುಮಾತ್ರವಾದರೂ ಪ್ರೇಮವಿಲ್ಲವೆಂದು ತಮ್ಮ ಮನ ಸ್ಸಿನಲ್ಲಿ ತಿಳಿದು ನಿಶ್ಚಯಿಸಿಕೊಂಡು ಸುರಗುರುವನ್ನು ಕುರಿತು.ಸ್ವಾಮಿಾ ! ಇನ್ನು ಮುಂದೆ ಏನು ಮಾಡುವಿರಿ ಎಂದು ಕೇಳಲು ಆಗ ಸುರಾಚಾರ್ಯನು-ನಾನು ಹೋಗಿ ಸಮಯೋಚಿತವಚನಗಳಿಂದ ಇಂದಾದಿಗಳನ್ನೆಲ್ಲಾ ಕರೆದುಕೊಂಡು ಬಂದು ಮಂದರಗಿರಿಯ ತಪ್ಪಲಲ್ಲಿ ನಿಲ್ಲಿಸಿ ತಿರಿಗಿ ಇಲ್ಲಿಗೆ ಬಂದು ನಿಮ್ಮನ್ನೂ ಅಲ್ಲಿಗೆ ಕರೆದು ಕೊಂಡು ಹೋಗುವೆನು ಎಂದು ಹೇಳಿ ತಿರಿಗಿ ಮಹಾವಿಷ್ಣುವಿನ ಬಳಿಗೆ ಬಂದು ತಾನು ದೈತ್ಯರೊಡನೆ ಆಲೋಚಿಸಿಕೊಂಡು ಬಂದ ಸಂಗತಿಯನ್ನೆಲ್ಲಾ ಆದ್ಯಂತವಾಗಿ ತಿಳಿಸಿ ಕಡೆಗೆ ಅಮೃತವು ಅವರಿಗೆ ಸೇರದೆ ದೇವತೆಗಳಿಗೇ ಸೇರುವ ಹಾಗೆ ಮಾಡುವ ಭಾರವು ಸರ್ವಶಕ್ತನಾದ ನಿನ್ನನ್ನೇ ಹೊಂದಿದೆ ಎಂದು ಹೇಳಲು ಆಗ ವಿಷ್ಣು ವು ಹಾಗೇ ಮಾಡುವೆನೆಂದು ನಂಬಿಕೆಯನ್ನು ಕೊಟ್ಟು ಕಳುಹಿಸಿದನು. ಅನಂತರದಲ್ಲಿ ಬೃಹತ್ವಾಚಾರ್ಯರು ಅಲ್ಲಿಂದ ಹೊರಟು ಬಂದು ದೇವೇಂ ದ್ರಾದಿಗಳನ್ನೆಲ್ಲಾ ಕರೆದು ಕೊಂಡು ಬಂದು ಮಂದರಸರ್ವತದ ಬಳಿಯಲ್ಲಿ ನಿಲ್ಲಿಸಿ ಆ ಮೇಲೆ ದೈತ್ಯರಾಜರ ಬಳಿಗೆ ಹೋಗಿ ಶುಕ್ರಾಚಾರ್ಯರು ಸಹಿತವಾಗಿ ಅವರನ್ನೆಲ್ಲಾ ಕರೆದುಕೊಂಡು ದೇವತೆಗಳ ಬಳಿಗೆ ಬಂದು ಕಾಲೋಚಿತವಾದ ಮಾತುಗಳಿಂದ ಇತ್ತ೦ ಡದವರಿಗೂ ಸಮಾಧಾನವನ್ನು ೦ಟುಮಾಡಿ ಸ್ನೇಹವನ್ನು ಬೆಳಿಸಿದನು. ಆ ಮೇಲೆ ಸುರಾಸುರರು ದೈತ್ಯ ದಾನವರು ಯಕ್ಷಗರುಡಗಂಧರ್ವ ಕಿಂಪುರುಷೋರಗರೇ ಮೊದ ಲಾದವರೆಲ್ಲಾ ಏಕಚಿತ್ತದಿಂದ ಕೂಡಿ ಮಂದರಗಿರಿಯನ್ನು ಕೀಳುವುದಕ್ಕೆ ಆರಂಭಿಸಿ ದರು. ಎಷ್ಟು ಶ್ರಮಪಟ್ಟು ಕಿತ್ತಾಗ ಆ ಗಿರಿಯು ಸ್ವಲ್ಪವಾದರೂ ಅಲ್ಲಾಡದೆ ಇದ್ದುದರಿಂದ ದೇವಾಸುರರು ಮಹಾ ವ್ಯಸನಾಕಾಂತರಾಗಿ ವಿಷ್ಣುವಿಗೆ ನಮಸ್ಕರಿಸಿ ಭಯಭಕ್ತಿಯಿಂದ ಪ್ರಾರ್ಥನೆಯನ್ನು ಮಾಡಿಕೊಳ್ಳಲು ಆಗ ವಿಷ್ಣುವು ಅನಂತನೆಂಬ ಮಹಾ ಶೇಷನನ್ನು ಕರೆದು ನೀನು ಹೋಗಿ ಮಂದರಾಚಲವನ್ನು ಕಿತ್ತಿಟ್ಟು ಬಾ ಎಂದು ಹೇಳಿ ಕಳುಹಿಸಲು ಆತನು ಮಹಾ ಬಲಶಾಲಿಯಾದುದರಿಂದ ನಿಮೇಷಮಾತ್ರ ದಲ್ಲಿ ಆ ಗಿರಿಯನ್ನು ಕಿತ್ತು ಇರಿಸಿದನು. ಆ ಮೇಲೆ ಸುರಾಸುರ ಸಮೂಹವು ಸಂತೋ ಪದಿಂದ ಕೂಡಿ ಆ ಮಂದರ ಪರ್ವತವನ್ನು ತಲೆಯ ಮೇಲೆ ಹೊತ್ತುಕೊಂಡು ಬಂದು ಕ್ಷೀರಸಾಗರದಲ್ಲಿ ಹಾಕಲು ಅದು ಆ ಕ್ಷಣದಲ್ಲಿ ಸಮುದ್ರದಲ್ಲಿ ಮುಣುಗಿಹೋ ಯಿತು. ಆಗ ದೇವಾಸುರರೆಲ್ಲರೂ ರಾತ್ರಿಯೆಲ್ಲಾ ಶ್ರಮಪಟ್ಟು ಹೆತ್ತ ಕೂಸನ್ನು