ಪುಟ:ಕಥಾಸಂಗ್ರಹ ಸಂಪುಟ ೨.djvu/೨೩೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


224 ಕಥಾಸಂಗ್ರಹ-೫ ನೆಯ ಭಾಗ ಲಾದುವುಗಳೆಲ್ಲಾ ನಡೆಯದೆ ಸಂಪೂರ್ಣವಾಗಿ ನಿಂತುಹೋಗಿರುವುದರಿಂದ ನಾವೆ ಲ್ಲರೂ ಆಹಾರಶೂನ್ಯರಾಗಿ ಮೃತಪ್ರಾಯರಾಗಿದ್ದೇವೆ. ಮಹಾತ್ಮನಾದ ನೀನು ಅನಾ ಥರಾದ ನಮ್ಮಲ್ಲಿ ಕರುಣೆಯನ್ನಿಟ್ಟು ಆ ದೈತ್ಯನನ್ನು ಕೊಂದು ಭೂಮಿಯನ್ನು ರಸಾ ತಲದಿಂದ ಮೇಲಕ್ಕೆತ್ತಿ ಯಥಾಪ್ರಕಾರವಾಗಿಟ್ಟು ನಮ್ಮನ್ನು ಕಾಪಾಡಬೇಕೆಂದು ಬಹುತರವಾಗಿ ಬೇಡಿಕೊಳ್ಳಲು ಆಗ ದಯಾದ್ರ್ರಹೃದಯನಾದ ವಿಷ್ಣು ವು ಒಳ್ಳೆಯ ದೆಂದು ಹೇಳಿ ಅವರಿಗೆ ಅಭಯವನ್ನಿ ತ್ತು ಅವರೆಲ್ಲರನ್ನೂ ಅವರವರ ಲೋಕಗಳಿಗೆ ಕಳುಹಿಸಿದನು. ಹೀಗಿರುವಲ್ಲಿ ಒಂದು ದಿವಸ ಸತ್ಯಲೋಕದಲ್ಲಿ ಸರೋಜಸಂಭವನು. ಪುರು ಷೋತ್ತಮನು ಭೂಮಿಯನ್ನು ರಸಾತಲದಿಂದ ಮೇಲಕ್ಕೆತ್ತಿ ಯಥಾಪ್ರಕಾರವಾಗಿ ನಿಲ್ಲಿಸಿ ಹವ್ಯಕವ್ಯಗಳು ನಿರ್ವಿಘ್ನತೆಯಿಂದ ನಡೆಯುವ ಹಾಗೆ ಎಂದಿಗೆ ಮಾಡುವನೋ ಎಂದು ಚಿಂತಿಸುತ್ತ ಆತನನ್ನು ಧ್ಯಾನಿಸುತ್ತಿರುವಲ್ಲಿ ಆತನ ಮಗಿನ ರಂಧ್ರದ ದೆಸೆಯಿಂದ ಅಂಗುಷ ಮಾತ್ರ ಪ್ರಮಾಣವುಳ್ಳ ಒಂದು ವರಾಹವು ಸಿಡಿದು ಕೆಳಗೆ ಬಿದ್ದು ಒಡನೆ ಮುಗಿಲನ್ನು ಮುಟ್ಟುವ ಹಾಗೆ ರೌದ್ರಾಕಾರವಾಗಿ ಬೆಳೆದು ದಶದಿಕ್ಕುಗಳು ಒಡೆ ಯುವ ಹಾಗೆ ಗರ್ಜಿಸುತ್ತಿದ್ದಿತು. ಆ ಮಹಾ ವರಾಹಕ್ಕೆ ನಾಲ್ಕು ವೇದಗಳು ನಾಲ್ಕು ಕಾಲುಗಳಾದುವು. ಮಹಾವಾಸುಕಿಯು ಬಾಲವಾದನು. ಸ್ಮ ತಿಪುರಾಣಗಳೆರಡೂ ಎರಡು ಕಿವಿಗಳಾದುವು. ಆದಿತ್ಯ ಚಂದ್ರರು ಎರಡು ಕಣ್ಣುಗಳಾದರು. ದೇವಪಿತೃ ಯಜ್ಞಗಳು ಕೋರೆದಾಡೆಗಳಾದುವು. ಸಕಲಮಂತ್ರಗಳು ಸರ್ವಾ೦ಗಗಳಾದುವು. ಇಂಥ ಅದ್ಭುತಾಕಾರಯುಕ್ತವಾದ ಮಹಾಸಕರವನ್ನು ನೋಡಿ ಸರೋಜಸಂಭ ವನುಸ್ಮಾ ಏಾ ! ನಿನ್ನ ಲೋಕಭೀಕರವಾದ ಮಹಾರ್ಭಟವನ್ನು ಸಹಿಸುವವರು ಯಾರು ? ಸರ್ವಶಕ್ತನಾದ ನೀನು ನಮ್ಮಲ್ಲಿ ಕೃಪೆಮಾಡಿ ಆ ಕೇಡಾಳಿಯಾದ ದೈತ್ಯ ನನ್ನು ಕೊಂದು ಭೂಮಿಯನ್ನು ತೆಗೆದುಕೊಂಡು ಬಂದು ಯಥಾರೀತಿಯಾಗಿಟ್ಟು ಲೋಕವನ್ನು ಉದ್ಧರಿಸಿ ಕಾಪಾಡು ಎಂದು ಭಯಭಕ್ತಿಯಿಂದ ಕೂಡಿ ಬೇಡಿಕೊಳ್ಳಲು ಕೂಡಲೆ ವರಾಹವು ಘುಡಿಘುಡಿಸುತ್ತ ದಾಡೆಯನ್ನು ಮಸೆದು ಎಡಬಲಗಳನ್ನು ನೋಡುತ್ತ ಮಗಿನ ರಂಧ್ರದಲ್ಲಿ ಬಿಸಿಯಾದ ಉಸಿರನ್ನು ಭಯಂಕರವಾಗಿ ಬಿಡುತ್ತ ಎರಡು ಕಣ್ಣುಗಳಿಂದ ಕೆಂಗಿಡಿಗಳನ್ನು ದುರಿಸುತ್ತ ಬಾಲವನ್ನು ಆಕಾಶಕ್ಕೆ ರೋಮ ಗಳನ್ನು ಕೆದರಿ ನಿಗುರಿಸಿಕೊಂಡು ಹೊರಟು ಅತಿರಭಸದಿಂದ ಪಾತಾಳವನ್ನು ಪ್ರವೇಶಿಸಿ ಅಲ್ಲಿ ಬಿದ್ದಿರುವ ಧರಣಿಯನ್ನು ತನ್ನ ಕೋರೆದಾಡೆಗಳಿಂದ ಮೇಲೆತ್ತಿ ಕೊಂಡು ಶೀಘ್ರ ದಿಂದ ತೆಗೆದು ಕೊಂಡು ಬರುತ್ತಿದ್ದಿತು. ಆಗ ಪಾತಾಳಲೋಕನಿವಾಸಿಗಳಾದ ಪ್ರಾಣಿ ಗಳೆಲ್ಲವೂ ಅಪೂರ್ವವಾದ ಈ ವರಾಹವನ್ನೂ ಅದರ ಅನ್ಯಾದೃಶವಾದ ಬಲವನ್ನೂ ನೋಡಿ ಭಯಾಶ್ಚರ್ಯಗಳ ಸಮುದ್ರಗಳಲ್ಲಿ ಮುಳುಗುತ್ತಿದ್ದುವು. ಇತ್ತಲು ಮೊದಲೇ ಪ್ರಾಯದ ಕೊಬ್ಬಿನಿಂದ ಬಲಿಷ್ಠರಾದ ದೇವತೆಗಳನ್ನು ಜಯಿಸುವುದಕ್ಕೋಸ್ಕರ ಸುರಲೋಕವನ್ನು ಕುರಿತು ಹೊರಟಿದ್ದ ಹಿರಣ್ಯಾಕ್ಷನು ಬಲದ ಉಬ್ಬಿನಿಂದ ಕೂಡಿ ಕಂಡ ಕಂಡವರನ್ನು ಕಾಳೆಗಕ್ಕೆ ಕರೆದು ಕರೆದು ಎದುರಾ