ಪುಟ:ಕಥಾಸಂಗ್ರಹ ಸಂಪುಟ ೨.djvu/೨೩೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


226 ಕಥಾಸಂಗ್ರಹ-೫ ನೆಯ ಭಾಗ ಯೆ. ಈ ಲೋಕದಲ್ಲಿ ನನ್ನೊಡನೆ ನಿಂತು ಕಾದುವ ಪರಾಕ್ರಮಶಾಲಿಗಳು ಎಲ್ಲಾದರೂ ; ಯಾರಾದರೂ ಇದ್ದರೆ ಬೇಗ ಹೇಳು ಎಂದನು. ಅದಕ್ಕೆ ವರುಣನು ಸ್ವಲ್ಪ ಯೋಚನಾ -ಎಲೈ ದೈತ್ಯರಾಜನೇ ! ನೀನು ಮೊದಲು ತೆಗೆದುಕೊಂಡು ಹೋಗಿ ರಸಾತಲದಸಾ ಹಾಕಿದ ಭೂಮಿಯನ್ನು ತನ್ನ ಕೋರೆದಾಡೆಗಳ ಮೇಲೆ ಇರಿಸಿ ತೆಗೆದುಕೊಂಡು ಒಬ್ಬರು ವರಾಹರಾಜನು ಹೋಗುತ್ತಾ ಇದ್ದಾನೆ. ಒಂದು ವೇಳೆ ಅವನೇನಾದರೂ ನಿನ್ನೊಡನೆ ಯುದ್ದಕ್ಕೆ ನಿಂತರೂ ನಿಲ್ಲಬಹುದು. ಅವನೂ ನಿಲ್ಲದೇಹೋದರೆ ಇನ್ನಾರನ್ನೂ ಕಾಣೆನು ಎಂದು ಹೇಳಿದನು. ಆ ಮಾತನ್ನು ಕೇಳಿ ಹಿರಣ್ಯಾಕ್ಷನು ಮಹಾ ಕೋಪದಿಂದ ಮುಂಗಾಣದವನಾಗಿ ಹೊರಟು ಭೂತಳವನ್ನು ಎತ್ತಿಕೊಂಡು ಹೋಗುತ್ತಿರುವ ವರಾ ಹಪತಿಯನ್ನು ಕಂಡು ಅಬ್ಬರಿಸಿ ಓಡಿಬಂದು ಎದುರಾಗಿ ನಿಂತು ತನ್ನವರನ್ನು ಕುರಿತು ---ಎಲೆ, ಎಲೇ ಹಂದಿ ಹಂದಿ ! ಮಜಭಾಪು !' ಮೊದಲು ನಾವು ತಂದುಹಾಕಿದ ಭೂಮಿಯನ್ನು ಎತ್ತಿಕೊಂಡು ಹೋಗುತ್ತಿದೆ. ಹಿಡಿಯಿರಿ ಹಿಡಿಯಿರಿ ! ಹೊಡಿಯಿರಿ ಹೊಡಿಯಿರಿ ! ಹಿಂದಟ್ಟಿ ಹೋಗಿರಿ ಬಡಿಯಿರಿ. ತಡಮಾಡಬೇಡಿರಿ, ಬಲೆಗಳನ್ನು ಹಾಕಿರಿ. ಕೆಡಹಿರಿ. ಹಾಸುಗಳನ್ನು ಕಳಚಿ ನಾಯಿಗಳನ್ನು ಬಿಡಿರಿ. ಇದು ನಮಗೆ ಇಂದಿನ ಆಹಾರಕ್ಕೆ ಸಾಕಾಗುವುದು. ಇದನ್ನು ಈ ಕ್ಷಣದಲ್ಲೇ ಕೊಲ್ಲದೆ ಬಿಡೆನೆಂದು ವರಾಹ ನದುರಿಗೆ ಬಂದು ನಿಂತು ಅದನ್ನು ಕುರಿತು ಎಲಾ, ಕೊಬ್ಬಿದ ಹಂದಿಯೇ ! ನಿನಗೀ ಬೊಬ್ಬೆಗಿಬ್ಬೆಗಳೇಕೆ ? ಮಾರಿಯ ಹಬ್ಬದಲ್ಲಿ ತಲೆಗೊಡುವ ಸೂಕರನೇ ! ನನ್ನೊಡನೆ ನಿನ್ನ ಮೈ ಗೊಬ್ಬನ್ನು ತೋರಿಸೇಳು. ನಿನ್ನ ಬಲದ ಕೊಬ್ಬನ್ನು ನಗುವೆನು. ನಿನ್ನ ಖಂಡ ವನ್ನು ತುಪ್ಪದಲ್ಲಿ ಹುರಿದು ತಿಂದು ತೇಗುವೆನು. ನಿನ್ನ ರಕ್ತವನ್ನು ಕುಡಿದು ಸಂತೋ ಹಿಸುವೆನು. ಅರಸುತ್ತಿರುವ ಬಳ್ಳಿಯು ಕಾಲ್ಗೊಡರಿಕೊಂಡಂತೆ ರಕ್ತಮಾಂಸಗಳಿಂದ ಕೊಬ್ಬಿದ ನೀನೇ ನನಗೆ ಸಿಕ್ಕಿದುದು ಬಲು ಚೆನ್ನಾ ಯಿತು. ನಿಮೇಷಮಾತ್ರದಲ್ಲಿ ನಿನ್ನ ಆಸುಗಳನ್ನು ಹೊರಡಿಸಿ ಹಸನಾದ ಬಿಸಿಬಿಸಿ ನೆತ್ತರನ್ನು ಕುಡಿದು ತೃಪ್ತಿಯನ್ನು ಹೊಂದುವೆನು. ಇದೋ, ಇದನ್ನು ಸಹಿಸಿಕೋ ಎಂದು ತನ್ನ ತೋರವಾದ ಮಹಾ ಗದೆಯಿಂದ ವರಾಹನನ್ನು ಹೊಯ್ದನು. ಆಗಲಾ ಹಂದಿಯು ಕೆಲಕ್ಕೆ ಹಾರಿ ಆ ಮಹಾಘಾತವನ್ನು ತಪ್ಪಿಸಿಕೊಂಡು ತನ್ನ ಕೋರೆದಾಡೆಗಳ ಮೇಲಿದ್ದ ಭೂಮಿಯನ್ನು ಮಹಾಶೇಷನ ಹೆಡೆಯ ಮೇಲೂ ದಿಗ್ಗಜಗಳ ಮೇಲೂ ಇಟ್ಟು ಈ ರಕ್ಷಸನ ಬೊಬ್ಬಾ ಟವು ಬಲುವಾಗಿದೆ. ಇವನ ಉಕ್ಕನ್ನು ತಗ್ಗಿಸುವೆನು ಎಂದು ಸಿಡಿದು ಮೇಲಕ್ಕೆ ನೆಗೆದು ಹಾರಿಬಂದು ದೈತ್ಯನ ಹಲ್ಲುಗಳು ಮುರಿಯುವಂತೆ ಹೊಕ್ಕು ಹೊಯ್ಯಲು ಅದನ್ನು ಕಂಡು ದಾನವನು ತಪ್ಪಿಸಿಕೊಂಡು ತನ್ನ ಕೈಯಲ್ಲಿದ್ದ ಗದೆಯಿಂದ ವರಾಹನ ಕೈಯಲ್ಲಿದ್ದ ಗದೆಯನ್ನು ಹೊಯ್ಯಲು ಆ ಗದೆಯು ಮಹಾವರಾಹನ ಕೈಯಿಂದ ಕಳಚಿ ಕೆಳಗೆ ಬಿದ್ದಿತು. ಆ ವೇಳೆಯಲ್ಲಿ ದಿತಿಸುತನು ಮತ್ತೂ ಮಹಾ ಕೋಪವೇಗಯುಕ್ತನಾಗಿ ಬಹು ವಿಧಾಯುಧಗಳಿಂದ ವರಾಹನನ್ನು ಪ್ರಹರಿಸಿ ಮಾಯೆಯನ್ನವಲಂಬಿಸಿ ಮಿಂಚಾಗಿ ಬೆಚಿ ಸಿದನು. ಗುಡು ಗಾಗಿ ಹೆದರಿಸಿದನು. ಮಳೆಯಾಗಿ ವರಾಹನ ಮೇಲೆ ಸುರಿದನು.