ಪುಟ:ಕಥಾಸಂಗ್ರಹ ಸಂಪುಟ ೨.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

230 ಕಥಾಸಂಗ್ರಹ-೫ ನೆಯ ಭಾಗ ಕಾಷ್ಠ ಮಂತ್ರ ವ್ಯಾಧಿ ಇವು ಮೊದಲಾದುವುಗಳಿಂದಲೂ ನನಗೆ ಮರಣವುಂಟಾಗ ದಂತೆ ವರವನ್ನು ಕೊಡು. ಬಲುಮಾತುಗಳಿಂದೇನು ! ಸಮಸ್ತ ಲೋಕಗಳವರೂ ಬಂದು ಭಯ ಭಕ್ತಿಯಿಂದ ನನ್ನನ್ನು ಓಲೈಸಬೇಕು. ಈ ಪ್ರಕಾರವಾದ ವರವನ್ನು 'ಕೊಡಬೇಕೆಂದು ಕೇಳಿಕೊಂಡನು. ಆಗ ಕಮಲಸಂಭವನು ತನ್ನ ಮನಸ್ಸಿನಲ್ಲಿ-ಇವನು ಮಹಾದುಷ್ಕನು. ಮೊದಲೇ ಲೋಕಗಳನ್ನೆಲ್ಲಾ ಹಿಡಿದು ತಿಕ್ಕಿ ಮುಕ್ಕುತ್ತಿರುವನು. ಇದರ ಮೇಲೆ ಇಂಥ ಮಹಾವರವನ್ನು ಕೊಟ್ಟರೆ ಕ್ಷಣಕಾಲದಲ್ಲಿ ಲೋಕಗಳನ್ನೆಲ್ಲಾ ಸುಟ್ಟು ಬೂದಿ ಮಾಡಿ ಬಿಡುವನು. ಅಸದೃಶವರಗಳನ್ನು ಕೇಳಿಕೊಂಡನಲ್ಲಾ! ಇದಕ್ಕೆ ಏನು ಮಾಡ ಬೇಕು ? ಇವನು ನ್ಯಾಯವಾಗಿ ಮಹೋಗ್ರತಪಸ್ಸಿನಿಂದ ಕಷ್ಟ ಪಟ್ಟು ನನ್ನನ್ನು ಮೆಚ್ಚಿ ಸಿರುವನು. ವರವನ್ನು ಕೊಡದೇ ಹೋದರೆ ನನ್ನ ಭಕ್ತರು ನಗುವರು. ಮತ್ತು ಭಕ್ತಿ ಯಲ್ಲಿ ನಂಬಿಕೆಯನ್ನು ತೊರೆಯುವರು ಎಂದು ಯೋಚಿಸಿ ಕಡೆಗೆ ಏನಾದರೂ ಆಗಲಿ, ಇವನು ಕೇಳಿಕೊಂಡಂತೆ ವರಗಳನ್ನು ಕೊಡತಕ್ಕುದು ಯುಕ್ತವಾಗಿದೆ ಎಂದು ನಿಶ್ಚಯಿಸಿ ಆ ಹಿರಣ್ಯಕಶಿಪುವನ್ನು ಕುರಿತು ನಿನ್ನ ಮನಸ್ಸಿನ ಇಷ್ಟ ಪ್ರಕಾರವೇ ವರಗ ಳನ್ನು ಕೊಟ್ಟೆನು. ಸಂತೋಷದಿಂದ ಹೋಗು ಎಂದು ಹೇಳಿ ಅದೃಶ್ಯನಾದನು. ಆಗ ಹಿರಣ್ಯಕಶಿಪುವು ಮಹಾಸಂತೋಷದಿಂದ ಕೂಡಿದವನಾಗಿ ರೈತರ ಬಡಗಿಯಾದ ಮಯನನ್ನು ನೆನೆಯಲು ಆ ಕೂಡಲೆ ಆತನು ಬಂದು ನಿಂತು ಕೈ ಮುಗಿದು--ನನಗೇನ ಪ್ರಣೆ ಎಂದು ಕೇಳಲು ಅದಕ್ಕೆ ಹಿರಣ್ಯಕಶಿಪುವು-ನೀನು ಈ ಕ್ಷಣದಲ್ಲಿ ಹೋಗಿ ನನ್ನ ಪಟ್ಟಣವನ್ನು ಸರ್ವೋನ್ನತವಾಗಿ ದಿವ್ಯಾಲಂಕಾರಗಳಿಂದ ಶೃಂಗರಿಸು ಎಂದು ಅಪ್ಪಣೆ ಯನ್ನು ಕೊಟ್ಟು ಕಳುಹಿಸಿದನು. ಆ ಬಳಿಕ ಮಯನು ಅವನ ಅಪ್ಪಣೆಯನ್ನು ತಲೆ ಯಲ್ಲಿ ಅಂತು ಒಂದು ಆ ಪಟ್ಟಣವನ್ನೆಲ್ಲಾ ಜಾಗ್ರತೆಯಾಗಿ ಆಶ್ಚರ್ಯವಿಧದಿಂದ ಶೃಂಗ ರಿಸಿದನು. ಅನಂತರದಲ್ಲಿ ಹಿರಣ್ಯಕಶಿಪುವ ಸರ್ವಸಂವಿಧಾನದೊಡನೆ ಕೂಡಿ ಗೋಧೂ ಲಗ್ನದಲ್ಲಿ ಪುರವನ್ನು ಪ್ರವೇಶಿಸಿ ಒಂದು ದಿನ ಮಾತ್ರ ಅಲ್ಲಿ ದ್ದು ಮಾರಣೆಯ ದಿನವೇ ದೈತ್ಯಭಟರೊಡನೆ ಕೂಡಿ ಸರ್ವಲೋಕಗಳನ್ನೂ ಭಯಪಡಿಸುತ್ತ ಹೊರಟು ಇಂದ್ರ ಲೋಕಕ್ಕೆ ಹೋಗಿ ಆರ್ಭಟಿಸಿ ಇಂದ್ರಾದೃಷ್ಟ ದಿಕ್ಷಾಲಕರನ್ನು ಯುದ್ಧಕ್ಕೆ ಕರೆಯಲು ಆ ಇಂದ್ರನು ಅಷ್ಟದಿಕ್ಷಾಲಕರೊಡನೆ ಕೂಡಿ ಹಿರಣ್ಯಕಶಿಪುವನ್ನು ಕುರಿತು-ಅಲ್ಪ ಶಕರಾದ ನಾವು `ಮಹಾತ್ಮನಾದ ನಿನ್ನೊಡನೆ ಯುದ್ದ ಮಾಡಲಾರೆವು. ನಾವೆಲ್ಲರೂ ನಿನಗೆ ಕಪ್ಪಗಳನ್ನು ಕೊಡುತ್ತ ನೀನು ಹೇಳಿದಂತೆ ಕೇಳಿಕೊಂಡು ಅಧೀನರಾಗಿರುವೆವು ಎಂದು ವಿನಯಪೂರ್ವಕವಾಗಿ ಬೇಡಿಕೊಂಡುದರಿಂದ ಆ ದೈತ್ಯನು ಅವರು ಭಯಭಕ್ತಿ ಯಿಂದ ತಂದೊಪ್ಪಿಸಿದ ಕಷ್ಟಗಳನ್ನು ತೆಗಿಸಿಕೊಂಡು ಅವರೆಲ್ಲರನ್ನೂ ಜತೆಯಲ್ಲಿ ಕರೆದು ಕೊಂಡು ಹಿಂದಿರುಗಿ ತನ್ನ ಪಟ್ಟಣಕ್ಕೆ ಬಂದು ಸಿಂಹಾ ನದ ಮೇಲೆ ಕುಳಿತುಕೊಂಡು ಸರ್ವಲೋಕಗಳವರಿಂದ ಸೇವಿಸಲ್ಪಡುವವನಾಗಿ ತ್ರಿಭುವನಾಧಿಪತ್ಯವನ್ನು ಹೊಂದಿ ಭೂಲೋಕದಲ್ಲಿ ಮಾಡುವ ಕರ್ಮಗಳಲ್ಲಿ ಸರ್ವರೂ ನನ್ನ ಹೆಸರನ್ನು ಹೇಳಿ ಆಹುತಿಗೆ ಳನ್ನು ಕೊಡಬೇಕೇ ಹೊರತು ಇಂದ್ರನೇ ಮೊದಲಾದ ಯಾವ ದೇವತೆಗಳ ಹೆಸರನ್ನಾ