ಪುಟ:ಕಥಾಸಂಗ್ರಹ ಸಂಪುಟ ೨.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನರಸಿಂಹಾವತಾರದ ಕಥೆ 233 ಆ ಜಿರಣ್ಯಕಶಿಪುವು ಆ ಮಾತನ್ನು ಕೇಳಿ ಆಹಾ! ನಾನು ಬುದ್ದಿ ಯಿಲ್ಲದೆ ಮೋಸ ಹೋದೆನು, ನೀಚನಾದ ವಿಷ್ಣು ವೇ `ಶಿವಯೋಗಿಯ ವೇಷವನ್ನು ಧರಿಸಿ ನನಗೆ ಹೀಗೆ ಹೇಳಿ ನನ್ನ ಮುಂದೆಯೇ ಅದೃಶ್ಯನಾಗಿ ನನ್ನ ಹೊಟ್ಟೆಯನ್ನು ಹೊಕ್ಕನು. ಶಿವಯೋ ಗಿಯಾಗಿದ್ದಾಗಲೇ ಅವನನ್ನು ಹಿಡಿದು ಕೊಂದುಹಾಕಬೇಕಾಗಿದ್ದಿತು. ತಿಳಿಯದೆ ಮೋಸವಾಯಿತು. ಕೆಲಸ ಕೆಟ್ಟಿತಲ್ಲಾ ! ಮುಂದೆ ಮಾಡತಕ್ಕುದೇನು ? ಪಾಪಿಯ ಮಹಾಮಾಯಾವಿಯ ಆದ ಆ ವಿಷ್ಣು ವು ನನ್ನ ಹೊಟ್ಟೆ ಯನ್ನು ಹೊಕ್ಕನಲ್ಲಾ! ಇನ್ನು ನಾನು ಇವನನ್ನು ಕೊಲ್ಲುವ ಬಗೆಯು ಯಾವುದು ಎಂದು ಚಿಂತಾಕ್ರಾಂತನಾಗಿ ಹಿಂದಿರುಗಿ ಸೇನಾಸಮೇತನಾಗಿ ಬಂದು ತನ್ನ ಪಟ್ಟಣವನ್ನು ಸೇರಿದನು. ಇತ್ತಲಾ ಮಹಾವಿಷ್ಣುವು ನಾಗದಮಹರ್ಷಿಯನ್ನು ಕರೆದು-ಹಿರಣ್ಯಕಶಿಪು ಎನ ಹೆಂಡತಿಯು ಬಹಳ ಪರಿಶುದ್ಧಳು. ನೀನು ಈ ಕ್ಷಣದಲ್ಲಿಯೇ ಅವಳ ಬಳಿಗೆ ಹೋಗಿ-ಏಂಕಾರದಲ್ಲಿ ವಿಷ್ಣುವನ್ನೇ ಧ್ಯಾನಿಸುತ್ತಾ ಇದ್ದಲ್ಲಿ ನಿನ್ನ ಗರ್ಭದಲ್ಲಿ ಲೋಕೈ ಕವೀರನೂ ಪರಮಭಾಗವತಶಿರೋಮಣಿಯ ಆದ ಗಂಡುಮಗನು ಹುಟ್ಟುವನು ಎಂದು ಚೆನ್ನಾಗಿ ಬೋಧಿಸಿ ಹೇಗಾದರೂ ಆಕೆಯು ನನ್ನ ಧ್ಯಾನಾಸಕ್ತಳಾಗುವಂತೆ ಮಾಡಿ ಬಾ ಎಂದು ಹೇಳಲಾಗಿ, ಆತನು ಕೂಡಲೆ ಆಕೆಯ ಬಳಿಗೆ ಹೋಗಿ ಅದೇ ಮೇರೆಗೆ ರಹಸ್ಯವಾಗಿ ಆಕೆಗೆ ಉಪದೇಶಿಸಿ ಬಂದನು. ಆಕೆಯು ನಾರದಮಹರ್ಷಿಯ ಉಪದೇಶದಂತೆ ಸದಾಕಾಲದಲ್ಲಿಯ ಹೃದಯದಲ್ಲಿ ಎಷ್ಟು ವನ್ನೇ ಧ್ಯಾನಿಸುತ್ತ ಇದ್ದುದರಿಂದ ಕೂಡಲೆ ಗರ್ಭಿಣಿಯಾದಳು. ಹೀಗಿರುವಲ್ಲಿ ಹಿರಣ್ಯಕಶಿಪುವು ಮತ್ತೊ೦ ದು ದಿವಸ ಸಮಸ್ತ ಪರಿವಾರದೊಡನೆ ಒಡೋಲಗದಲ್ಲಿರುತ್ತ-ಆ ಕಪಟಿಯಾದ ವಿಷ್ಣುವನ್ನು ಹೇಗೆ ಕೊಲ್ಲಲಿ ? ಅದಕ್ಕೆ ಏನು ಉಪಾಯವನ್ನು ಮಾಡಬೇಕು ಎಂದು ಯೋಚಿಸುತ್ತ ಕಡೆಗೆ ಶಿವನನ್ನು ಕರಿತು ತಪಸ್ಸು ಮಾಡಿ ಮೆಚಿ ಸಿ ಆತನಿಂದ ಆ ವಿಷ್ಣುವು ಸುಲಭವಾಗಿ ನನ್ನ ಕೈಗೆ ಸಿಕ್ಕುವ ಹಾಗೆ ವರವನ್ನು ಪಡೆದು ಕೊಂಡು ಆ ವರಬಲದಿಂದ ಮಾಯಾವಿಯಾದ ಆ ವಿಷ್ಣುವನ್ನು ಹಿಡಿದು ಕೊಂದುಹಾಕುವೆನು ಎಂದು ನಿಶ್ಚಯಿಸಿಕೊಂಡು ತನ್ನ ರಾಜ್ಯಭಾರವನ್ನು ಮಂತ್ರಿಗಳಲ್ಲಿರಿಸಿ ತಾನೊಬ್ಬನೇ ಹಿಮವತ್ಪರ್ವತಕ್ಕೆ ಹೋಗಿ ಅಲ್ಲಿ ಶಿವನನ್ನು ಕುರಿತು ತಪಸ್ಸು ಮಾಡುತ್ತ ಇದ್ದನು. ಅನಂತರದಲ್ಲಿ ಈ ವರ್ತಮಾನವನ್ನು ಕೇಳಿದ ಇಂದ್ರಾದೃಷ್ಟ ದಿಕ್ಷಾಲಕರು ಸಮಸ್ತ ದೇವತಾಸಮಹದೊಡನೆ ಕೂಡಿ ಭಯಭ್ರಾಂತರಾಗಿ ಮಹಾವಿಷ್ಣುವಿನ ಬಳಿಗೆ ಬಂದು-ಎಲೈ ಸ್ವಾಮಿಯೇ ! ಆ ದುಷ್ಟನಾದ ಹಿರಣ್ಯಕಶಿಪುವು ಪುನಃ ಶಿವನನ್ನು ಕುರಿತು ತಪಸ್ಸು ಮಾಡುತ್ತ ಕುಳಿತಿದ್ದಾನೆ. ಈಗಲೇ ಅವನಿಂದ ಸಮಸ್ತ ಲೋಕ ಗಳೂ ಅಪಾರಕಷ್ಟವನ್ನನುಭವಿಸಿ ಧೂಳೀಪಟಲವಾಗಿ ಹೋದುವು. ಮತ್ತೆ ಅವನು ತಪಸ್ಸಿನಿಂದ ಶಿವನನ್ನು ಮೆಚ್ಚಿಸಿ ಎಂಥ ಭಯಂಕರವರವನ್ನು ಕೇಳಿಕೊಂಡು ಬಂದು ಶರಣಾಗತರಾದ ನಮ್ಮನ್ನೂ ಉಳಿದ ಲೋಕಗಳನ್ನೂ ಏನು ಮಾಡುವನೋ ತಿಳಿ ಯದು. ಸರ್ವಜ್ಞನಾದ ನೀನು ಇಲ್ಲಿಂದ ಮುಂದೆ ನಮಗೇನಪ್ಪಣೆಯನ್ನು ದಯಪಾ ಲಿಸುವಿ ಎಂದು ಕೇಳಿಕೊಂಡರು. ಅದಕ್ಕೆ ವಿಷ್ಣವು ಸ್ವಲ್ಪ ಯೋಚಿಸಿ ಇಂದ್ರನನ್ನು