ಪುಟ:ಕಥಾಸಂಗ್ರಹ ಸಂಪುಟ ೨.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14 ಕಥಾಸಂಗ್ರಹ-೪ ನೆಯ ಭಾಗ ಕಿಂಕರಸೇವಿತ ಪಾದಪಂಕಜನಾದ ಶಂಕರನು ತುಷ್ಟನಾಗಿ ಗಿರಿಜಾತೆಯೊಡನೆ ತಂದು ದಶಕಂಠನ ಅಪರಾಧಗಳನ್ನು ಮನ್ನಿಸಿ- ಎಲೈ ಅಸದೃಶವೀರನೇ ! ನಿನ್ನ ಭುಜವಿಕ್ರ ಮಕ್ಕೆ ನಾನು ಮೆಚ್ಚಿದೆನು. ನೀನು ಧ್ವನಿಯಿಂದ ಲೋಕತ್ರಯಗಳನ್ನೂ ಬೆಚ್ಚಿಸಿದವ ನಾದುದರಿಂದ ಇನ್ನು ಮೇಲೆ ನಿನಗೆ ರಾವಣನೆಂದು ಹೆಸರುಂಟಾಗಲಿ, ಸಂತೋಷ ದಿಂದ ಹೋಗು ಎಂದು ಹೇಳಿದನು. ಆ ಮೇಲೆ ರಾವಣನು ಭಯಭರಿತ ಭಕ್ತಿಯಿಂದ ಕೂಡಿ ಕೈಮುಗಿದು ನಿಂತುಕೊಂಡು ಎಲೈ ದೇವದೇವನೇ ! ನೀನು ನನ್ನಲ್ಲಿ ಕೃಪೆ ಯುಳ್ಳವನಾದರೆ ಅಪೂರ್ವವಾದೊಂದು ಖಡ್ಗವನ್ನು ಕರುಣಿಸಬೇಕೆಂದು ಬೇಡಿಕೊಳ್ಳಿ ಲು ಚಂದ್ರಶೇಖರನು ಚಂದ್ರಹಾಸವೆಂಬೊಂದು ಕತ್ತಿಯನ್ನಿತ್ತು ಅಂತರ್ಧಾನನಾದನು. ಆ ಬಳಿಕ ರಾವಣನು ಅಲ್ಲಿಂದ ಹೊರಟು ಭೂಲೋಕದಲ್ಲಿ ಸಂಚರಿಸುತ್ತ ತೋಳವು ಕುರಿ ಮಂದೆಗಳನ್ನು ಕಡಿದೊಟ್ಟುವಂತೆ ಆಜಿರಂಗದಲ್ಲಿ ಬಲವಂತರಾದ ಅರಸು ಗಳನ್ನು ಸಂಹರಿಸುತ್ತ ಬಂದು ಹಿಮನಗರದ ತಪ್ಪಲಲ್ಲಿರುವ ಮಹಾರಣ್ಯವನ್ನು ಹೊಕ್ಕು ನೋಡಲು ಅಲ್ಲೊಂದೆಡೆಯಲ್ಲಿ ಅಸಮಾನಸೌಂದರ್ಯದಿಂದ ಕಂಗೊಳಿಸುತ್ತ ದ್ವಿತೀಯ ರತಿಯಂತೆ ಕುಳಿತು ತಪಸ್ಸನ್ನು ಮಾಡುತ್ತಿದ್ದ ಒಬ್ಬ ಸ್ತ್ರೀಯನ್ನು ನೋಡಿ"ಎಲೈ ಸ್ತ್ರೀಯಳೇ ! ಇದೇನು ? ಅತ್ಯಾಶ್ಚರ್ಯವು ! ನೀನಾರು ? ನಿನ್ನ ಹೆಸರೇನು ? ಈ ವನ ಭೂಮಿಯಲ್ಲಿ ಸುಕುಮಾರಾಂಗಿಯಾದ ನೀನೊಬ್ಬಳೇ ಇದ್ದುಕೊಂಡು ಕಠಿಣತರ ತಸ ಶರಣಕ್ಕೆ ಕಾರಣವೇನು ? ಈ ಮೊದಲಾದ ವರ್ತಮಾನಗಳನ್ನು ವಿಶದವಾಗಿ ತಿಳಿಸು ಎನ್ನಲು ಆಕೆಯ ಪ್ರೀತಿಯಿಂದ ರಾವಣನನ್ನು ಸತ್ಕರಿಸಿಕೇಳ್ಳೆ ! ಬೃಹಸ್ಪತಿಯ ಕುಮಾರನಾದ ಕುಶಧ್ವಜನೆಂಬವನು ವೇದವನ್ನು ಪಠಿಸುತ್ತಿರುವಾಗ ನಾನು ಆತ - ಬಾಯಿಯಿಂದ ಹುಟ್ಟಿದವಳಾದಕಾರಣ ಲೋಕದಲ್ಲಿ ನನಗೆ ವೇದವತಿಯೆಂದು ಹೆಸರಾ ಯಿತು. ನನ್ನ ತಂದೆಯು ಬಹು ಪ್ರೀತಿಯಿಂದ ನನ್ನನ್ನು ಕಾಪಾಡುತ್ತಿರಲು ಮನು ಮುನಿ ಸುರ ಕಿನ್ನರ ಯಕ್ಷ ಕಿಂಪುರುಷಾದಿಗಳಲ್ಲಿ ಸುಂದರರಾದ ಪುರುಷರು ಬಂದು ನನ್ನನ್ನು ಬೇಡಲು ಅವರೊಡನೆ ನನ್ನ ತಂದೆಯು-ಈಕೆಯು ಅಯೋನಿಜೆಯಾದುದ ರಿಂದ ಬಹು ಪವಿತ್ರಳು, ಈಕೆಯನ್ನು ಎಷ್ಟು ಎಗಲ್ಲದೆ ಮತ್ಯಾರಿಗೂ ಕೊಡುವುದಿಲ್ಲ ವೆಂದು ಹೇಳಿಬಿಟ್ಟನು. ಆ ಮೇಲೆ ಶಂಭುವೆಂಬೊಬ್ಬ ರಾಕ್ಷಸನು ಬಂದು ನನ್ನನ್ನು ಕೇಳಲು ನನ್ನ ತಂದೆಯು ಅವನಿಗೂ ಯಥಾವತ್ತಾಗಿ ಹೇಳಿಬಿಡಲು ಅವನು ಕೃದ್ದ ನಾಗಿ ನನ್ನ ತಂದೆಯ ತಲೆಯನ್ನು ಕಡಿದು ಬಿಸುಟು ಹೊರಟುಹೋದನು. ಆಗ ನನ್ನ ತಾಯಿ ಯು ಸಹಗಮನಕ್ರಿಯೆಯಿಂದ ಪ್ರಾಣತ್ಯಾಗವನ್ನು ಮಾಡಿದಳು. ಆ ಮೇಲೆ ಅನಾಥಳಾದ ನಾನು ತಾಯ್ತಂದೆಗಳಿಗೆ ಔರ್ಧ್ವದೇಹಿಕವನ್ನು ನಿರ್ವತಿ್ರಸಿ ನನ್ನ ತಂದೆಯ ಬಯಕೆಯನ್ನು ಕೊನೆಗಾಣಿಸುವುದಕ್ಕಾಗಿ ವಿಷ್ಣು ಪ್ರೀತ್ಯರ್ಥವಾಗಿ ತಪ ಸ್ಪನ್ನು ಮಾಡುತ್ತ ಇಲ್ಲಿದ್ದೇನೆ ಎಂದು ಹೇಳಿದಳು. ಆಗ ರಾವಣನು-ಎಲೈ ಸ್ತ್ರೀಯೇ ! ಕೇಳು, ಹರಿಯೆಲ್ಲಿ ? ನೀನೆಲ್ಲಿ ? ಇಂಥ ನವಯೌವನಕಾಲದಲ್ಲಿ ಸುಖವಾಗಿರು ವುದನ್ನು ಬಿಟ್ಟು ಹೀಗೆ ಮಗಳಾಗಿ ತಪಶ್ಚರಿಸುವದರಿಂದ ನಿನ್ನ ಯೌವನವು ಅರಣ್ಯ ಪತಿತ ಚಂದ್ರಿಕೆಯಂತೆ ನಿರುಪಯೋಗವಾಗಿ ಹೋಗುವುದು. ಅದು ಕಾರಣ