ಪುಟ:ಕಥಾಸಂಗ್ರಹ ಸಂಪುಟ ೨.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

240 ಕಥಾಸಂಗ್ರಹ-೫ ನೆಯ ಭಾಗ ಪ್ರಳಯಾಗ್ನಿಗೆ ಸಮಾನವಾದ ಕೋಪದಿಂದ ಸಂತಪ್ತನಾಗಿ ಹುಬ್ಬುಗಳನ್ನು ಹಾರಿ ಸುತ್ತ ತುಟಿಗಳನ್ನು ಕುಣಿಸುತ್ತ ಆ ದೂತರನ್ನು ಕುರಿತು-ದೊಡ್ಡ ದೊಡ್ಡವುಗ ಳಾದ ಒಣಮರಗಳನ್ನು ತೆಗೆದು ಕೊಂಡು ಬಂದು ಒಟ್ಟಿ, ನಾಲ್ಕು ಕಡೆಗಳಿಗೂ ಅಗ್ನಿ ಯನ್ನು ಹೊತ್ತಿಸಿ ಚೆನ್ನಾಗಿ ಉರಿಸಿ ಈ ನೀಚನ ಕೈ ಕಾಲುಗಳನ್ನು ಕಟ್ಟಿ ಆ ಮಹಾಗ್ನಿ ಮಧ್ಯದಲ್ಲಿ ಹಾಕಿಬಿಡಿರಿ ಎಂದು ನೇಮಿಸಿ ಕಳುಹಿಸಿದನು. ಅವರೆಲ್ಲರೂ ಅದೇ ಮೇರೆಗೆ ಬರಡುಗಳನ್ನು ತಂದು ಒಟ್ಟಿ ಅದಕ್ಕೆ ಬೆಂಕಿಯನ್ನು ಹಾಕಿ ಹೊತ್ತಿಸಿ 'ಚೆನ್ನಾಗಿ ಉರಿಯುವಂತೆ ಮಾಡಲು ಆಗ ಮಹಾಸ್ವಾಲೆಯು ಮೇಘಮಂಡಲವನ್ನು ಹೊಯ್ಯ ಪ್ಪಳಿಸಿ ಮೇಲುಲೋಕಗಳನ್ನು ನೆಕ್ಕಿ ಮುಕ್ಕುವುದೋ ಎಂಬಂತಿರುವ ಮಹಾ ಗ್ನಿಯಲ್ಲಿ ಕೈ ಕಾಲುಗಳನ್ನು ಕಟ್ಟಿ ಪ್ರಹ್ಲಾದನನ್ನು ತೆಗೆದುಕೊಂಡು ಬಂದು ಹಾಕಿ ದರು. ಆ ಕೂಡಲೆ ಅಗ್ನಿ ದೇವತೆಯು ಪ್ರತ್ಯಕ್ಷನಾಗಿ ಬಂದು ಕೋಟಿಸೂರ್ಯ ಪ್ರಕಾ ಶಯುಕ್ಕನೂ ಮಹಾಮಹಿಮೆಯುಳ್ಳವನೂ ಆದ ಪ್ರಹ್ಲಾದನನ್ನು ದಹಿಸುವುದಕ್ಕೆ . ಶಕ್ತಿಸಾಲದುದರಿಂದ ಅವನನ್ನು ಬಹಳವಾಗಿ ಉಪಚರಿಸಿ ಸಂತೋಷದಿಂದಲೂ ಭಕ್ತಿ ಯಿಂದಲೂ ಎತ್ತಿ ಕೊಂಡು ಬಂದು ಆ ರಾಜದೂತರ ವಶಕ್ಕೆ ಕೊಟ್ಟು ಆ ಬೆಂಕಿಯ ಲ್ಲಿಯೇ ಹೊಕ್ಕು ಮರಿಸಿಕೊಂಡನು. ಅನಂತರದಲ್ಲಿ ದೂತರು ಬಂದು ಹಿರಣ್ಯಕಶಿಪು ವಿಗೆ ಈ ವರ್ತಮಾನವನ್ನು ಹೇಳಲು ಕಡಲೆ ಕೋಪೋಗ್ರನಾದ ಹಿರಣ್ಯಕಶಿಪುವು ಆ ಪಾಪಿಯನ್ನು ಘಟಸರ್ಪಗಳಿ೦ದ ಕಚ್ಚಿಸಿ ಕೊಂದುಹಾಕಿರಿ ಎಂದು ಅಪ್ಪಣೆಯನ್ನು ಕೊಡಲು ಅವರು ಶೀಘ್ರವಾಗಿ ದೊಡ್ಡ ದೊಡ್ಡ ಹಾವುಗಳನ್ನು ತೆಗೆದುಕೊಂಡು ಬಂದು ಆ ಪ್ರಹ್ಲಾದನ ಮೇಲೆ ಬಿಟ್ಟು ಹೊಡೆದು ತಿವಿದು ಕೋಪಗೊಳಿಸಲು ವಿವಿಧ ವಾದ ಆ ಸರ್ಪಗಳೆಲ್ಲವೂ ಅವನನ್ನು ಸ್ವಲ್ಪವಾದರೂ ಮುಟ್ಟದೆ ಹಿಂದಿರುಗಿ ಆ ರಾಜ ದೂತರನ್ನೆ ಕಚ್ಚಿ ಕೊಲ್ಲುವುದಕ್ಕೆ ಮೊರೆಯುತ್ತ ಓಡಿಸಿಕೊಂಡು ಬಂದುವು. ಆಗ ಅವರೆಲ್ಲರೂ ಹೆದರಿಕೊಂಡು ಪ್ರಾಣಭೀತಿಯಿಂದ ಕೂಡಿದವರಾಗಿ ದಿಕ್ಕು ದಿಕ್ಕಿಗೆ ಓಡಿ ಕಡೆಗೆ ಹಿರಣ್ಯಕಶಿಪುವಿನ ಬಳಿಯನ್ನು ಸೇರಿ ಬದುಕಿದೆವೆಂದುಕೊಂಡು ನಡೆದ ಸಂಗತಿ ಯನ್ನೆಲ್ಲಾ ಸ್ವಲ್ಪವಾದರೂ ಬಿಡದೆ ಅವನೊಡನೆ ಹೇಳಿದರು. ಅನಂತರದಲ್ಲಿ ಹಿರಣ್ಯ ಕಶಿಪುವು ಮಹಾ ಕೊಪಸಂತಾಪಯುಕ್ತನಾಗಿ ಪರ್ವತಾಗ್ರಗಳಿಂದ ನೂಕಿಸುವುದೇ ಮೊದಲಾದ ಕೃತ್ಯಗಳನ್ನು ಮಾಡಿಸಿದಾಗ ಅವನಿಗೆ ಮರಣವುಂಟಾಗದಿದ್ದುದನ್ನು ಕಂಡು ಮತ್ತೂ ಕೋಪದಿಂದ ಹೆಚ್ಚಾದ ದ್ವೇಷವುಳ್ಳವನಾಗಿ ದೂತರನ್ನು ನೋಡಿಆ ಪ್ರಹ್ಲಾದನನ್ನು ನಮ್ಮ ಚಾವಡಿಗೆ ಹಿಡಿದು ಕೊಂಡು ಬನ್ನಿರೆಂದು ಆಜ್ಞಾಪಿಸಲು ಅವರು ಶೀಘ್ರವಾಗಿ ಅವನನ್ನು ಹಿಡಿದುಕೊಂಡು ಬರಲು ಆಗ ಹಿರಣ್ಯಕಶಿಪುವು ವೇಗ ದಿಂದವನ ಬಳಿಗೆ ಹೋಗಿ ಅವನ ಜುಟ್ಟನ್ನು ಹಿಡಿದುಕೊಂಡು ಕತ್ತಿಯನ್ನು ತೆಗೆದು ಕೊಂಡು–ಎಲಾ, ಪರಮವಿರೋಧಿಯ ಕುಲದ್ರೋಹಿಯ ಆದ ಪಾಪಿಷ್ಟನೇ ! ನೀನು ಹೇಳುವ ಹರಿಯು ಎಲ್ಲಿದ್ದಾನೆ ? ತೋರಿಸು ಎನ್ನಲು ಆಗ ಪ್ರಹ್ಲಾದನು ಎಲೆ ತಂದೆಯೇ ! ಸರ್ವಾಂತರ್ಯಾಮಿಯಾದ ಹರಿಯು ಸಕಲ ಸ್ಥಳಗಳಲ್ಲಿಯ ಅಣು . ರೇಣು ತೃಣಕಾಷ್ಟ್ರಗಳಲ್ಲಿಯ ಪರಿಪೂರ್ಣನಾಗಿದ್ದಾನೆ. ಸಮಸ್ತ ಲೋಕಗಳಲ್ಲಿಯ