ಪುಟ:ಕಥಾಸಂಗ್ರಹ ಸಂಪುಟ ೨.djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

246 ಕಥಾಸಂಗ್ರಹ-೫ ನೆಯ ಭಾಗ ಅಪಮಾನವು ನಿನಗೇ ಹೊರತು ಇಂದ್ರನಿಗೇನೂ ಇಲ್ಲವಷ್ಟೆ. ಈ ಭಾಗದಲ್ಲಿ ಸರ್ವಜ್ಞ ಚಿತ್ರಕ್ಕೆ ಸಮಾಧಾನವಾದ ವಿಷಯವಾವುದು ? ಮತ್ತು ಶರಣಾಗತನಾದ ಈ ಇಂದ್ರ ನಿಗೆ ಅಪ್ಪಣೆಯೇನು ಎಂದು ಕೇಳಿದನು. ಆ ಮಾತುಗಳನ್ನು ಕೇಳಿ ಚತುರ್ಮುಖ ಬ್ರಹ್ಮನು ಇದಕ್ಕೆ ನಾನೇನು ಮಾಡಲಿ ? ನಾನು ಹೇಳತಕ್ಕ ಉತ್ತರವು ತಾನೆ ಯಾವು ದಿರುವುದು ? ತಪಸ್ಸನ್ನು ಮಾಡಿದವರಿಗೆ ಬೇಕಾದ ವರಗಳನ್ನು ಕೊಡುವುದು ಮಾತ್ರ ನನ್ನ ಧರ್ಮವು. ಹಾಗೆ ಕೊಡುವುದಕ್ಕೆ ಮಾತ್ರ ನನಗೆ ಶಕ್ತಿಯುಂಟೇ ಹೊರತು ನಿಗ್ರಹಿಸುವ ಶಕ್ತಿಯಿಲ್ಲ. ಅದು ಕಾರಣ ನೀವು ಜಗದೀಶ್ವರನಾದ ಶಿವನ ಸನ್ನಿಧಿಗೆ ಹೋಗಿ ಆತನೊಡನೆ ಈ ಸಂಗತಿಯನ್ನು ಹೇಳಿಕೊಳ್ಳಿ. ಒಂದು ವೇಳೆ ಆತನೇನಾ ದರೂ ಒಂದು ಉಪಾಯದಿಂದ ನಿಮಗೆ ಸಹಾಯವನ್ನು ಮಾಡಿದರೂ ಮಾಡಬ ಹುದು. ಹೋಗಿರಿ ಎಂದು ಕಳುಹಿಸಬಿಟ್ಟನು. ಆ ಮೇಲೆ ಅವರು ಕೈಲಾಸಕ್ಕೆ ಬಂದು ಪರಮೇಶ್ವರನನ್ನು ಕಂಡು ನಮಸ್ಕರಿಸಿ ತಮಗೆ ಬಲಿಯು ಹೇಳಿ ಕಳುಹಿಸಿದುದನ್ನೂ ತಾವು ಆ ಸಂಗತಿಯನ್ನು ಚತುರ್ಮುಖ ಬ್ರಹ್ಮನಲ್ಲಿ ಹೇಳಿಕೊಂಡುದಕ್ಕೆ ಆತನು ಹೇಳಿ ದುದನ್ನೂ ಹೇಳಿ. ಇಲ್ಲಿಂದ ಮುಂದೆ ಸರ್ವಜನಾದ ನೀನು ಏನು ಅಪ್ಪಣೆಯನ್ನು ಕೊಡುವಿ ಎಂದು ಕೇಳಿಕೊಂಡರು. ಆಗ ಈಶ್ವರನು-ನಾನೂ ಸರೋಜಸಂಭವನಂತೆ ಕೊಡುವದಲ್ಲದೆ ನಿಗ್ರಹಿಸುವದನ್ನು ಅನುಮೋದಿಸಲಾರೆನು. ಇಂಥ ಸಂದರ್ಭದಲ್ಲಿ ಪ್ರಾಪ್ತವಾದ ಮೃತ್ಯುವನ್ನು ಯಾವುದಾದರೂ ಒಂದು ಉಪಾಯದಿಂದ ತಪ್ಪಿಸಿ ಕಾಪಾಡುವ ಶಕ್ತಿಯು ವಿಷ್ಣುವನ್ನೇ ಹೊಂದಿರುವುದಲ್ಲದೆ ಮತ್ತಾರಿಂದಲೂ ತೀರದು. ಆದುದರಿಂದ ನೀವು ಆತನ ಬಳಿಗೆ ಹೋಗಿ ಈ ಸಂಗತಿಯನ್ನು ಹೇಳಿಕೊಳ್ಳಿರಿ ಎಂದು ಅಪ್ಪಣೆಯನ್ನು ಕೊಟ್ಟು ಅವರನ್ನು ಕಳುಹಿಸಿದನು. ಆ ಮೇಲೆ ಅವರು `ಕ್ಷೀರಸಾಗ ರಕ್ಕೆ ಬಂದು ಮಹಾವಿಷ್ಣುವನ್ನು ಕಂಡು ನಮಸ್ಕರಿಸಿ ನಡೆದಿರುವ ಸಂಗತಿಗಳನ್ನೆಲ್ಲಾ ಯಥಾವತ್ತಾಗಿ ವಿಜ್ಞಾಪಿಸಿ ಕಾಪಾಡಬೇಕೆಂದು ಬೇಡಿಕೊಂಡರು. ಅನಂತರದಲ್ಲಿ ಮಹಾವಿಷ್ಣುವು ಬೃಹಸ್ಸತ್ಯಾಚಾರ್ಯನನ್ನು ಕುರಿತು- ಎಲೈ ಸುರರಾಜಗುರುವೇ ! ಬಲಿಯು ಮಹಾ ಧರ್ಮಿಷ್ಟನು. ಇದಲ್ಲದೆ ಅವನು ನನಗೆ ಪರಮ ಭಕ್ತನು. ಆತನನ್ನು ನಿಗ್ರಹಿಸುವ ಕಾರ್ಯವು ನನ್ನಿಂದ ಎಷ್ಟು ಮಾತ್ರವೂ ಆಗಲಾರದು. ನೀನು ಮಹಾ ಬುದ್ದಿ ಸಂಪನ್ನನು. ನಿನಗೆ ತಿಳಿಯುವಂಥ ಉಪಾಯ ಗಳು ಯಾರಿಗೂ ತಿಳಿಯುವುದಿಲ್ಲ ವು. ಅದು ಕಾರಣ ನೀನೇ ಈ ಕಾರ್ಯವನ್ನು ನಿರ್ವ ಹಿಸತಕ್ಕ ಯೋಚನೆಯನ್ನು ಮಾಡಿ ಈ ಇಂದ್ರನನ್ನು ಕಾಪಾಡು ಎಂದು ಹೇಳಿ ಅದೃಶ್ಯನಾದನು. ಆ ಮೇಲೆ ಬೃಹಸ್ಪತ್ಯಾಚಾರನು ತುಂಬಿದ ದುಃಖದಿಂದ ಕಂದಿದ ಮುಖವುಳ್ಳ ಇಂದ್ರನನ್ನು ಕರೆದುಕೊಂಡು ಹಿಂದಿರುಗಿ ಅಮರಾವತಿಗೆ ಬಂದು ಇಂದ್ರ ನನ್ನೂ ಆತನ ಪಟ್ಟದರಸಿಯಾದ ಶಚೀದೇವಿಯನ್ನೂ ಆತನ ಮಗನಾದ ಜಯಂತನನ್ನೂ ಈ ಮೂರು ಜನರನ್ನು ಮಾತ್ರ ಸ್ವರ್ಗದಿಂದ ಹೊರಡಿಸಿಕೊಂಡು ಬಂದು ಇಂದ್ರನ ತಂದೆಯಾದ ಕಶ್ಯ ಪರ್ಷಿಯ ಆಶ್ರಮದಲ್ಲಿ ಒಂದೆಡೆಯಲ್ಲಿರಿಸಿ ನೀವು ಇಲ್ಲಿರತಕ್ಕುದು. ನಾನು ಬೇಗ ಬರುವೆನು ಎಂದು ಹೇಳಿ ಅಲ್ಲಿಂದ ಹೊರಟು ಶೀಘ್ರವಾಗಿ ಶೋಣಿತಪು