ಪುಟ:ಕಥಾಸಂಗ್ರಹ ಸಂಪುಟ ೨.djvu/೨೫೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


248 ಕಥಾಸಂಗ್ರಹ-೫ ನೆಯ ಭಾಗ ಅಚಂಚಲಭಕ್ತಿಯುಳ್ಳವರಾಗಿ ವಿಷ್ಣುವನ್ನು ಪೂಜಿಸಿ ಸೇವಿಸುತ್ತ ಇರುವಂತೆಯೂ ಕಟ್ಟು ಮಾಡಿಸಿ ಸುಖದಿಂದ ತ್ರಿಲೋಕಾಧಿಪತ್ಯವನ್ನು ಮಾಡುತ್ತ ಬಂದನು. ಆ ಮಹಾ ತ್ಮನಾದ ಬಲಿಚಕ್ರವರ್ತಿಯು ಸತ್ಯದಿಂದ ರಾಜ್ಯಭಾರವನ್ನು ಮಾಡುತ್ತಿರುವಲ್ಲಿ ಮರು ಲೋಕಗಳಲ್ಲಿಯ ಸಂತತಿ ಸಂಪತ್ತುಗಳು ಪೂರ್ಣಚಂದ್ರೋದಯ ಕಾಲದ ಸಾಗರ ದಂತೆ ಹೆಚ್ಚಿದುವು. ಭೂಮಿಯಲ್ಲಿ ಬೆಳೆಯು ಹೆಚ್ಚಾಗಿ ಬೆಳೆದು ದೇಶದಲ್ಲಿ ಸಂಪೂರ್ಣ ಧಾನ್ಯ ಸಮೃದ್ಧಿ ಯುಂಟಾಯಿತು. ಕಾರ್ಮುಗಿಲುಗಳು ಸ್ವಲ್ಪವಾದರೂ ಕಾಲವನ್ನತಿ ಕ್ರಮಿಸದೆ ಸುವೃಷ್ಟಿಯನ್ನು ಕರೆಯುತ್ತ ಬಂದುವು. ಬಲೀಂದ್ರರಾಜ್ಯದಲ್ಲಿ ಬಡತನದ ಹುಚ್ಚೇ ಹಾಳಾಯಿ ತು. ಸರ್ವಪ್ರಜೆಗಳೂ ಧರ್ಮವನ್ನು ಮಾರದೆ ನಡೆದು ಕೊಂಡು ಹರಿಭಕ್ತಿ ಪರಾಯಣರಾಗಿ ಸುಖದಿಂದಿದ್ದರು. ಹೀಗಿರಲು ಒಂದಾನೊಂದು ದಿವಸ ಬೃಹಸ್ಸತ್ಯಾಚಾರ್ಯರು ರಹಸ್ಯವಾಗಿ ಬಲಿ ಚಕ್ರವರ್ತಿಯ ಬಳಿಗೆ ಬಂದು ಆತನಿಂದ ಪೂಜಿತರಾಗಿ ದಿವ್ಯ ಪೀಠದಲ್ಲಿ ಕುಳಿತುಕೊಂಡು ಆತನನ್ನು ಕುರಿತು ನೀನು ಸ್ವಲ್ಪವಾದರೂ ಧರ್ಮಮಾರ್ಗವನ್ನ ತಿಕ್ರಮಿಸದೆ ತ್ರಿಲೋ ಕಾಧಿಪತ್ಯವನ್ನು ಮಾಡುತ್ತ ಬರುತ್ತಿರುವುದನ್ನು ನೋಡಿ ನನಗೆ ಬಹಳ ಸಂತೋಷವಾ ಯಿತು. ನೀನು ಇನ್ನು ಮೇಲೆ ಮಹಾತ್ಮರಾದ ಶುಕ್ರಾಚಾರ್ಯರನ್ನು ಇಟ್ಟು ಕೊಂಡು ಅವರ ಆಜ್ಞಾನುಸಾರವಾಗಿ ನಡೆದುಕೊಳ್ಳುತ್ತ ಸುಖದಿಂದ ಬಾಳುವವನಾಗು. ಈಗ ನೀನು ಅಪ್ಪಣೆಯನ್ನು ಕೊಟ್ಟರೆ ನಾನು ತಪಸ್ಸು ಮಾಡುವುದಕ್ಕಾಗಿ ತಪೋವನವನ್ನು ಕುರಿತು ಹೋಗುವೆನು ಎಂದು ಹೇಳಿದರು. ಆ ಮಾತುಗಳನ್ನು ಕೇಳಿ ಬಲಿಚಕ್ರವ ರ್ತಿಯು ತುಂಬಿದ ವ್ಯಾಕುಲದಿಂದ ಬಹಳ ಖಿನ್ನನಾಗಿ ಬೃಹಸ್ಪತ್ಯಾಚಾರ್ಯರನ್ನು ಕುರಿತು-.-ಎಲೈ ಮಹಾತ್ಮರಾದ ಸುರರಾಜಗುರುಗಳೇ ! ಶುಕಾಚಾರ್ಯರು ದೈತ್ಯ ರಿಗೆ ಗುರುಗಳೇ ಹೊರತು ಈ ಇಂದ್ರಪದವಿಗೆ ಗುರುಗಳಲ್ಲಿ, ಈ ಪದವಿಗೆ ಬಂದವರಿಗೆ ಪೂಜ್ಯರಾದ ನೀವೇ ಗುರುಗಳಾಗಿ ಸದ್ದು ರ್ಮಗಳನ್ನು ಬೋಧಿಸುತ್ತ ಸಮೀಪದಲ್ಲೆ ಇರಬೇಕು. ಅದು ಕಾರಣ ಈಗ ತಾವು “ತಸಶರಣೆಗೆ ಹೋಗುವುದು ಹೇಗಾದೀತು ? ಬ್ರಹ್ಮಾದಿ ಸರ್ವದೇವತೆಗಳೂ ಮಹಾ ವಿಷ್ಣುವಿನಿಂದ ನೇಮಿಸಲ್ಪಟ್ಟು ತಮ್ಮ ತಮ್ಮ ಅಧಿಕಾರವನ್ನು ಬಿಟ್ಟು ಹೋಗುವುದಕ್ಕೆ ಹೇಗೆ ಶಕ್ತರಲ್ಲಿ ಹಾಗೆಯೇ ಮಹಾ ವಿಷ್ಣುವು ನಿಮಗೆ ಸುರಗುರುತ್ವದ ಪದವಿಯನ್ನು ಕೊಟ್ಟಿರುವುದರಿಂದ ನೀವೂ ಇದನ್ನು ಬಿಟ್ಟು ಹೋಗಕೂಡದು ಎಂದು ಹೇಳಿದನು. ಅದಕ್ಕೆ ಬೃಹಸ್ಪತಾಚಾರ್ಯರು ಬಲಿಚ ಕ್ರವರ್ತಿಯನ್ನು ಕುರಿತು-ಅಯ್ಯಾ ನೀತಿವಿಶಾರದನಾದ ಬಲೀಂದ್ರನೇ ! ನೀನು ಹೇಳಿದ ಮಾತು ಯುಕ್ತವಾದುದೇ ಸರಿ. ಆದರೆ ಈ ಭಾಗದಲ್ಲಿ ಅನಿವಾರ್ಯವಾದ ಒಂದು ಕುಂದಕವಿರುವುದು. ಅದಾವುದೆಂದರೆ, ನೀನು ಪ್ರಥಮದಲ್ಲಿ ಮಹಾವಿಷ್ಣು ವಿ ನಿಂದ ನಿಯಮಿಸಲ್ಪಟ್ಟು ಈ ಇಂದ್ರಪದವಿಯನ್ನು ಅನುಭವಿಸುತ್ತಿರುವವನಲ್ಲ, ನಿನ್ನ ತಪಸ್ಸಿನಿಂದ ಪಡೆದ ವರಬಲದಿಂದಲೂ ಧರ್ಮದಿಂದಲೂ ಸದ್ದು ಣಗಳಿಂದಲೂ ಈ ಪದ ವಿಯನ್ನು ಅನುಭವಿಸುತ್ತಿರುವಿ. ಆದುದರಿಂದ ಮೊದಲೇ ವಿಷ್ಣುವಿನಿಂದ ಈ ಪದವಿ ಯಲ್ಲಿ ನಿಯಮಿತನಾಗಿ ಇದನ್ನು ಅನುಭವಿಸುತ್ತಿದ್ದ ಇಂದ್ರನು ತಪಸ್ಸಿಗೆ ಹೋದ ಮೇಲೆ