ಪುಟ:ಕಥಾಸಂಗ್ರಹ ಸಂಪುಟ ೨.djvu/೨೬೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ವಾಮನಾವತಾರದ ಕಥೆ 249 ಆತನಿಗೆ ಗುರುವಾದ ನಾನೂ ತಪಸ್ಸಿಹೋಗತಕ್ಕುದು ಯುಕ್ತವಾಗಿಯೂ ನಿರ್ವಿವಾ ಗ್ರವಾಗಿಯೂ ಇದೆ. ಅದು ಕಾರಣ ಪರಮ ವಿವೇಕಿಯಾದ ನೀನು ಈ ಭಾಗದಲ್ಲಿ ಸ್ವಲ್ಪ ನಾದರೂ ಚಿಂತಿಸದೆ ನನಗೆ ಅನುಜ್ಞೆ ಮಾಡಬೇಕೆಂದು ಹೇಳಿ ವಿವಿಧವಾದ ನೀತಿಗಳಿಂದ ಒಡಂಬಡಿಸಿ ಆತನಿಂದ ಅಪ್ಪಣೆಯನ್ನು ಹೊಂದಿ ಅಲ್ಲಿಂದ ಹೊರಟು ಶೀಘ್ರವಾಗಿ ಕಶ್ಯ ಪರ ಆಶ್ರಮಕ್ಕೆ ಬಂದು ಮೊದಲು ಅವರ ಸಹಧರ್ಮಿಣಿಯಾದ ಅದಿತಿದೇವಿಯನ್ನು ಕಂಡು ಆಕೆಯೊಡನೆ ಈ ಸಂಗತಿಗಳನ್ನೆಲ್ಲಾ ಆದ್ಯಂತವಾಗಿ ತಿಳಿಸಲು ಆಕೆಯು ಮಹಾ ದುಃಖಾಕ್ರಾಂತೆಯಾಗಿ ಬೃಹಸ್ಪತ್ಯಾಚಾರ್ಯರನ್ನು ಕುರಿತು ಎಲೈ ಬೃಹ ಸ್ಪತಿಯೇ ! ನೀನು ನನ್ನ ಮಗನಾದ ಇಂದ್ರನಿಗೆ ಆಹೋರಾತ್ರಿಗಳಲ್ಲೂ ಹಿತಾಪೇಕ್ಷಿ ಯಾದ ಗುರುವಾಗಿದ್ದು ಅವನು ತ್ರಿಲೋಕಾಧಿಪತ್ಯವನ್ನು ಕಳೆದುಕೊಂಡು ಹೀಗೆ ಮಹಾ ಕಷ್ಟ ವ್ಯಥೆಗಳನ್ನನುಭವಿಸುತ್ತ ಇರುವುದು ನಿನಗೆ + ಸಮ್ಮತವೇ ? ಮತ್ತು ಮಾನವೇ ! ಮುಂದೆ ಈ ವಿಷಯದಲ್ಲಿ ಯಾವ ಯೋಚನೆಯನ್ನು ಮಾಡಬೇಕು ? ನೀನು ಯೋಚಿಸಿ ನನಗೆ ಹೇಳಿದರೆ ನಾನು ಅದೇ ಮೇರೆಗೆ ನಡೆಯುವೆನು. ಪುತ್ರಶ್ರೇ ಯಶ್ಚಿಂತನೆಗಿಂತಲೂ ನನಗೆ ಬೇರೆ ಕಾರ್ಯವಾವುದಿರುವುದು ಎಂದು ಹೇಳಲು ಬೃಹಸ್ಪತಾಚಾರ್ಯರು ಯೋಚಿಸಿ ಮುಂದೆ ಮಾಡಬೇಕಾದ ಕಾರ್ಯದ ವಿಷಯ ವಾಗಿ ಆಕೆಯ ಕಿವಿಯಲ್ಲಿ ಹೇಳಿ-ಇಂದ್ರ ಶಚಿ ಜಯಂತ ಇವರೊಡನೆ ಕೂಡಿ ನಾನು ನಿಮ್ಮ ಆಶ್ರಮದಲ್ಲಿ ಇಂಥ ಕಡೆ ಇರುವೆನೆಂದು ಸೂಚಿಸಿ ಆಕೆಯ ಅಪ್ಪಣೆಯನ್ನು ತೆಗೆ ದುಕೊಂಡು ಆ ಸ್ಥಳದಿಂದ ಹೊರಟು ಇಂದ್ರನ ಬಳಿಗೆ ಬಂದು ಆತನಿಗೆ ವೈಷ್ಣವ ಮಂ ತ್ರವನ್ನು ಉಪದೇಶಿಸಿ ಸರ್ವಕಾಲದಲ್ಲೂ ಸದ್ಭಕ್ತಿಯಿಂದ ಕೂಡಿ ವಿಷ್ಣುವನ್ನು ಭಜಿಸು ತಿರುವಂತೆ ನೇಮಿಸಿ ತಾನೂ ವಿಷ್ಣು ಧ್ಯಾನಪರಾಯಣನಾಗಿರುತ್ತಿದ್ದನು. ಇತ್ಯಲಾ ಅದಿತಿದೇವಿಯು ಮಹಾವೃಥಾದುಃಖಾಕ್ರಾಂತಳಾಗಿ ಆ ಸ್ಥಳದಿಂದ ಹೊರಟು ಪ್ರಾತರಾತ್ನಿಕಗಳನ್ನು ನೆರವೇರಿಸಿಕೊಂಡು ಸುಖಾಸೀನನಾಗಿರುವ ನಿಜಪತಿ ಯಾದ ಕಶ್ಯಪ ಪ್ರಜಾಪತಿಯ ಬಳಿಗೆ ಶೀಘ್ರದಿಂದ ಬಂದು ರೋದಿಸುತ್ತ ಅವನ ಪಾದಗಳ ಮೇಲೆ ಬಿದ್ದು ಧಾರಾಕಾರವಾಗಿ ಹರಿಯುತ್ತಿರುವ ತನ್ನ ಕಣ್ಣೀರುಗಳಿಂದ ಅವನ ಅಡಿದಾವರೆಗಳನ್ನು ತೊಳೆದು ಹಾಗೇ ದುಃಖಿಸುತ್ತಿರಲು ಅದನ್ನು ನೋಡಿ ಕಶ್ಯಪರು ದಯಾದ್ರ್ರಹೃದಯರಾಗಿ-ಎಲೈ ಪ್ರಾಣವಲ್ಲಭೆಯೇ ! ನಿನಗೆ ಈ ಪ್ರಕಾ ರವಾದ ಅಪಾರದುಃಖವು ಸಂಭವಿಸುವುದಕ್ಕೆ ಕಾರಣವೇನು ? ಹೇಳು. ನಾನು ಅದನ್ನು ಹೇಗಾದರೂ ಪರಿಹರಿಸಿಕೊಡುವೆನು ಎಂದು ಹೇಳಲು ಅದಿತಿದೇವಿಯು ಎದ್ದು ಕೈಮುಗಿದು ನಿಂತುಕೊಂಡು ಎಲೆ ಮಹಾತ್ಮನಾದ ಪ್ರಾಣಪ್ರಿಯನೇ ! ಆಪದ್ರಕ್ಷಕನೇ ! ಶರಣಾಗತಳಾದ ನನಗೆ ನಿನ್ನ ಚರಣಕಮಲಗಳೇ ಗತಿಯಲ್ಲದೆ ಅನ್ಯಥಾ ಗತಿಯಿಲ್ಲ ವು. ಈಗ ನನ್ನ ಮಗನ ಇಂದ್ರಪದವಿಯನ್ನು ಬಲಿಯೆಂಬ ದೈತ್ಯನು ಬಲಾತ್ಕಾರದಿಂದ ಕಿತ್ತು ಕೊಂಡುದರಿಂದ ಅವನು ನನ್ನ ಸೊಸೆಯಾದ ಶಚಿಯನ್ನೂ ನನ್ನ ಮೊಮ್ಮಗನಾದ ಜಯಂತನನ್ನೂ ಕೈಹಿಡಿದು ಕರೆದುಕೊಂಡು ಮಹಾದುಃಖ ವ್ಯಥೆಗಳಿಂದ ಕೂಡಿದವನಾಗಿ ಅಪಾರವಾದ ಕಷ್ಟವನ್ನ ನುಭವಿಸುತ್ತ ಅನಾಥನ ಹಾಗೆ