ಪುಟ:ಕಥಾಸಂಗ್ರಹ ಸಂಪುಟ ೨.djvu/೨೬೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


258 ಕಥಾಸಂಗ್ರಹ-೫ ನೆಯ ಭಾಗ ಯಂತೆ ಯುದ್ಧಕ್ಕೆ ತೊಡಗಿ ಸೋಲು ಗೆಲುವುಗಳಿಲ್ಲದೆ ಏಳು ದಿವಸಗಳವರೆಗೂ ತ್ರಿಭುವನವೂ ಕಂಪಿಸುವಂತೆ ಮಹಾಯುದ್ಧವನ್ನು ಮಾಡಿ ಕಡೆಗೆ ರಾಮನ ಬೃಂಭಣಾ ಪ್ರಯೋಗದಿಂದ ಷಣ್ಮುಖನು ಸ್ತಂಭೀಭೂತನಾದುದನ್ನು ನೋಡಿ ಪಾರ್ವತೀಪರ ಮೇಶ್ವರರು ಸಂತೋಷದಿಂದ ಕೂಡಿದವರಾಗಿ ರಾಮನನ್ನು ತೆಗೆದು ಆಲಂಗಿಸಿಕೊಂಡು ಮುದ್ದಿಸಿ ಅವನಿಗೆ ಅಮೋಘವಾದ ಒಂದು ಕೊಡಲಿಯನ್ನು ಕೊಟ್ಟು-ನೀನು ಈ ಆಯುಧವನ್ನು ಸದಾ ಕಾಲದಲ್ಲೂ ಧರಿಸಿಕೊಂಡು ಲೋಕದಲ್ಲಿ ಪರಶುರಾಮನೆಂಬ ಹೆಸರನ್ನು ಹೊಂದಿ ಜಗದ್ವಿಖ್ಯಾತನಾಗಿ ಬಾಳು ಎಂದು ಹರಸಿ ಇನ್ನು ಮೇಲೆ ನಿನ್ನ ತಾಯ್ತಂದೆಗಳ ಬಳಿಗೆ ಹೋಗಿ ಭಕ್ತಿಯಿಂದ ಶುಶೂಷೆಯನ್ನು ಮಾಡಿಕೊಂಡಿರು ಎಂದು ಹೇಳಿ ಕಳುಹಿಸಿದರು. ತರುವಾಯ ಪರಶುರಾಮನು ಪಾರ್ವತೀಪರಮೇಶ್ವರ ರಿಗೆ ವಂದಿಸಿ ಸಂತೋಷಾಂತರ೦ಗನಾಗಿ ಆ ಕೈಲಾಸಸೀಮಾಪ್ರದೇಶದಿಂದ ಹೊರಟು ತನ್ನ ತಾಯ್ತಂದೆಗಳ ಬಳಿಗೆ ಬಂದು ಭಯಭರಿತಭಕ್ತಿಯಿಂದ ಅವರಿಗೆ ನಮಸ್ಕಾರವನ್ನು ಮಾಡಿ ತನ್ನಲ್ಲಿ ಪಾರ್ವತೀಪರಮೇಶ್ವರರು ಅನುಗ್ರಹಮಾಡಿದುದನ್ನೂ ತಾನು ಷಣ್ಮು ಖನನ್ನು ಜಯಿಸಿದುದನ್ನೂ ಅವರಿಗೆ ತಿಳಿಸಿ ನಿರಂತರವೂ ಅವರ ಶುಶೂಷೆಯನ್ನು ಮಾಡಿಕೊಂಡು ಅಲ್ಲೇ ಇರುತ್ತಿದ್ದನು. ಹೀಗಿರುತ್ತ ಪರಶುರಾಮನು ಒಂದು ದಿವಸ ತಂದೆಯ ಯಜ್ಞಾಹುತಿಗೆ ದರ್ಭೆ ಸಮಿತ್ತು ಇವುಗಳನ್ನು ತೆಗೆದುಕೊಂಡು ಬರುವುದಕ್ಕಾಗಿ ಕೊಡಲಿಯನ್ನು ಧರಿಸಿ ಅರ ಗ್ರಕ್ಕೆ ಹೋದ ಸಮಯದಲ್ಲಿ ಕಾರ್ತವೀರ್ಯಾರ್ಜುನನು ದಿಗ್ವಿಜಯಾರ್ಥವಾಗಿ ಚತು ರಂಗಬಲದೊಡನೆ ಹೋಗಿದ್ದು ತಿರುಗಿ ತನ್ನ ಪಟ್ಟಣವಾದ ಮಾಹಿಷ್ಕ ತೀನಗರಕ್ಕೆ ಬರು ತಿರುವಾಗ ನಡುದಾರಿಯಲ್ಲಿ ಜಮದಗ್ನಿ ಯ ಆಶ್ರಮವನ್ನು ಕಂಡು ಅದರೊಳಗೆ ಬಂದು ಮಹರ್ಷಿಯನ್ನು ನೋಡಿ ಆತನಿಗೆ ಪಾದಾಭಿವಂದನೆಯನ್ನು ಮಾಡಿದನು. ಆ ಮೇಲೆ ಜಮದಗ್ನಿ ಯು ಚಕ್ರವರ್ತಿಯಾದ ಕಾರ್ತವೀರ್ಯಾರ್ಜುನನಿಗೆ ಅರ್ತ್ಯಪಾದ್ಯಾಸನಾ ದಿಗಳಿಂದ ಅತಿಥಿಪೂಜೆಯನ್ನು ಮಾಡಿ ಸವಿನುಡಿಗಳಿಂದ ಕುಶಲಪ್ರಶ್ನೆಗಳನ್ನು ಕೇಳಿ ಆತನನ್ನು ಕುರಿತು-ಆಯಾ ರಾಜೇಂದ್ರನೇ ! ನೀನು ನಿನ್ನ ಚತುರಂಗಬಲದೊಡನೆ ಈ ದಿವಸ ಇಲ್ಲಿದ್ದು ನಾನು ಮಾಡುವ ಅತಿಥಿಸತ್ಕಾರವನ್ನು ಕೈಕೊಂಡು ನಾಳಿನ ದಿನ ಸಂತೋಷದಿಂದ ತೆರಳಬಹುದು ಎಂದು ಬಹುತರವಾಗಿ ಪ್ರಾರ್ಥಿಸಿಕೊಳ್ಳಲು ಕಾರ್ತವೀರ್ಯಾರ್ಜುನನು-ಹಾಗೆ ಆಗಲಿ ಎಂದು ಹೇಳಿ ಆ ಮುನಿಯ ಪರ್ಣಶಾ ಲೆಗೆ ಸ್ವಲ್ಪ ದೂರದಲ್ಲಿ ಗುಡಾರಗಳನ್ನು ಹೊಡಿಸಿ ಚತುರಂಗಬಲವನ್ನೆಲ್ಲಾ ಅಲ್ಲಿಳಿಸಿ ಕೊಂಡು ತಾನೂ ಅಲ್ಲಿ ನಿಂತನು. ಆ ಮೇಲೆ ಜಮದಗ್ನಿಯು ತನ್ನ ಹೋಮಧೇನುವಾದ ಕಾಮಧೇನುವನ್ನು ಕರೆದು-ಎಲೈ ಸುರಭಿಯೇ ! ಚಕ್ರವರ್ತಿಯಾದ ಕಾರ್ತವೀ ರ್ಯಾರ್ಜುನನಿಗೆ ಸತ್ಕಾರಮಾಡುವೆನೆಂದು ಅವನನ್ನು ಚತುರಂಗಬಲದೊಡನೆ ಇಲ್ಲಿ ನಿಲ್ಲಿಸಿಕೊಂಡಿದ್ದೇನೆ. ನೀನು ಅವನ ದಂಡಿಗೆ ಹೋಗಿ ಅಲ್ಲಿರುವ ಸಕಲ ಶರೀರಿಗಳಿಗೂ ಅವರವರ ಅಭೀಷ್ಟವಿದ್ದಂತೆ ಅನ್ನ ಪಾನವನ್ನಾಭರಣ ಗಂಧಮಾಲ್ಯಾದಿಗಳಿಂದ ತೃಪ್ತಿ ಪ ಡಿಸಬೇಕೆಂದು ಅಪ್ಪಣೆಯನ್ನು ಕೊಟ್ಟನು. ಸುರಭಿಯು ಆ ಕೂಡಲೆ ದಂಡಿಗೆ ಬಂದು