ಪುಟ:ಕಥಾಸಂಗ್ರಹ ಸಂಪುಟ ೨.djvu/೨೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ರಾವಣನ ದಿಗ್ವಿಜಯವು 17 ಆಗ ದೇವತೆಗಳು ರಾವಣನ ವಿನಾಶಕ್ಕೆ ಕಾರಣಭೂತವಾಗಿ ಸಂಭವಿಸಿದ ಶಾಪಕ್ಕೊಸ್ಕರ ಸಂತೋಷಿಸಿ ಲೋಕಗಳೆಲ್ಲವೂ ಗಂಭೀರಧ್ವನಿಮಯವಾಗುವಂತೆ ದಿವ್ಯ ದುಂದುಭಿಗಳನ್ನು ತಾಡಿಸಿದರು. ಆ ಶಾಪಕ್ಕೆ ಖಳಪತಿಯಂಜುವನೇ ? ನೃಪವರನು ಮೃತನಾಗಲು ಅಲ್ಲಿಂದ ಹೊರಟು ತೋಟೆಯನ್ನು ಅಡಗಿಸಿಕೊಳ್ಳುವುದಕ್ಕೆ ಅಲ್ಪ ಬಲಯುಕ್ತವಾದ ಈ ನರಸಂಕುಲವು ನನಗೀಡಲ್ಲವೆಂದು ಆಲೋಚಿಸುತ್ತ ಗಗನ ಮಾರ್ಗದಲ್ಲಿ ಬರುತ್ತಿರಲು ಅಲ್ಲಿ ಸೈರಗಾಮಿಯಾದ ನಾರದಮುನಿಯನ್ನು ಕಂಡು ನಮಸ್ಕರಿಸಲು ಆ ಮುನೀಂದ್ರನು ಹರಿಸಿ---ಎಲೈ ಲಂಕಾಧೀಶನೇ ! ನಿನಗೆ ಸೌಖ್ಯವೇ ? ಎಂದು ವಿನಯದಿಂದ ಯೋಗಕ್ಷೇಮವನ್ನು ಕೇಳಿ ಈಗ ನಿನ್ನ ಶೌರ್ಯೋಿಕ ವೆಂಬ ಪ್ರಳಯಾಗ್ನಿ ಜ್ವಾಲೆಯಲ್ಲಿ ಲೋಕವೆಲ್ಲವೂ ಬೆಂದುಹೋಯಿತು. ಅಲ್ಪರಾದ ಈ ಮನುಷ್ಯರನ್ನು ಕೊಲ್ಲುವುದು ನಿನಗೆ ಹಿರಿದವು. ಈ ಮನುಷ್ಯರಲ್ಲಿ ನಿನಗೆ ಎದು ರಾಗಿ ನಿಂತು ಯುದ್ಧ ಮಾಡುವವರುಂಟೇ ? ಇಲ್ಲ ವು. ಮಹಾವೀರನಾದ ನೀನು ಇಂಥ ಹೀನಬಲರನ್ನು ಕೊಂದರೆ ಅಪ್ರತಿಹತವಾದ ನಿನ್ನ ಭುಜಬಲಕ್ಕೆ ಪ್ರಾಶಸ್ತ್ರವುಂಟಾ ದೀತೇ ? ಎಂದಿಗೂ ಇಲ್ಲ ವು. ಈ ನರರು ಅಲ್ಪಾಯುಷರು ಮತ್ತು ರೋಗ ಶೋಕ ಕ್ಷು ಪಿಪಾಸಾದಿಗಳಿಂದ ಸ್ವಲ್ಪ ಕಾಲದೊಳಗೆ ತಾವಾಗಿಯೇ ಮೃತ್ಯುವಶರಾಗುವ ವರು. ಇಂಥವರನ್ನು ಕೊಲ್ಲುವುದು ನಿನಗೆ ಅಕೀರ್ತಿಕರವು. ಆದುದರಿಂದ ಇವರನ್ನು ಬಿಟ್ಟು ಬಿಡು, ಯಮನೇ ಮೊದಲಾದ ಲೋಕಪಾಲಕರು ಬಹು ಬಲಿಷ್ಠರಾಗಿರುವರು. ಅವರು ನಿನಗೆ ಸಮಾನವಾದ ಭುಜಬಲವುಳ್ಳವರು. ನೀನು ಹೋಗಿ ಯುದ್ಧದಲ್ಲಿ ಅವ ರನ್ನು ಸೋಲಿಸಿದರೆ ಮಹಾ ಕೀರ್ತಿಯುಂಟಾಗುವುದು. ಅವರೊಳಗೆ ತೆಂಕಣದೆಸೆಗೊ ಡೆಯನಾದ ಯಮನೆಂಬುವನು ಕಾಲದಂಡವನ್ನು ಧರಿಸಿದವನಾಗಿ ದೇವ ದಾನವ ಮಾನವೋರಗಾದಿ ಸಕಲ ಪ್ರಾಣಿಗಳನ್ನೂ ಬಾಧಿಸುತ್ತಿರುವನು. ನೀನು ಹೋಗಿ ಅವ ನನ್ನು ಕೊಂದುಹಾಕಿದರೆ ಸರ್ವಪ್ರಾಣಿಗಳೂ ಕ್ಷೇಮದಿಂದಿರುವುವು ಎನ್ನ ಲು ರಾವ ಣನು-ಎಲೆ ಮುನೀಂದ್ರನೇ ! ನೀನು ಹೇಳಿದ ಮಾತು ಯುಕ್ತವೇ ಸರಿ. ನಾನು ಹೀಗೆಯೇ ಯೋಚಿಸುತ್ತಿದ್ದೆನು. ನೀನು ಹೇಳಿದಂತೆ ದಿಕ್ಷಾಲಕರಲ್ಲಿ ಒಬ್ಬನಾದ ಕುಬೇ ರನನ್ನು ಮೊದಲೇ ಜಯಿಸಿದ್ದೇನೆ. ಇನ್ನು ಯಮವರುಣೇಂದ್ರಾದಿ ದಿಗೀಶರನ್ನು ಜಯಿಸಿ ಆ ಮೇಲೆ ರಸಾತಲವನ್ನು ಹೊಕ್ಕು ದೈತ್ಯ ದಾನವ ಪನ್ನಗರೇ ಮೊದಲಾದವ ರನ್ನು ಸೋಲಿಸಿ ಕೀರ್ತಿಯನ್ನು ಹೊಂದುವೆನೆಂದು ಹೊರಡಲು ನಾರದಮುನಿಯು ಅವನಿಗಿಂತಲೂ ಮೊದಲೇ ಯಮಲೋಕಕ್ಕೆ ಬಂದು ಯಮನಿಂದ ಸತ್ಕೃತನಾಗಿ ಅವ ನನ್ನು ಕುರಿತು-ರಾವಣನು ನಿನ್ನೊಡನೆ ಯುದ್ಧ ಮಾಡುವುದಕ್ಕೆ ಬರುವನು. ಅವ ನನ್ನು ಕಾಲದಂಡದಿಂದ ಬಡಿದು ಕೊಂದುಹಾಕು, ಲೋಕಕ್ಕೆಲ್ಲಾ ಕ್ಷೇಮವುಂಟಾಗು ವುದೆಂದು ಹೇಳಿ ಹೊರಟುಹೋದನು. ಅನಂತರದಲ್ಲಿ ರಾವಣನು ರಾಕ್ಷಸಸೇನಾಸಮೇತನಾಗಿ ಹೊರಟು ಯಮಲೋ ಕಕ್ಕೆ ಬಂದು ನೋಡಲು ನರಕಗಳಲ್ಲಿ ಯಮದೂತರು ಪಾಪಾತ್ರರನ್ನು ಹಿಡಿದು ಕಾಯ್ದ ಮಳಲಿನಲ್ಲಿ ಎಳೆಯುತ್ತಿರುವುದನ್ನೂ ಕಾಯಿಸಿದ ಉಕ್ಕಿನ ಶಲಾಕೆಗಳಿ೦ದ

೧)