ಪುಟ:ಕಥಾಸಂಗ್ರಹ ಸಂಪುಟ ೨.djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

270 ಕಥಾಸಂಗ್ರಹ-೫ ನೆಯ ಭಾಗ ರುವೆನು. ಅದು ಕಾರಣ ನಿಮ್ಮ ಮನಸ್ಸಿನಲ್ಲಿ ಸ್ವಲ್ಪವಾದರೂ ಸಂಶಯಪಡಬೇಡಿರಿ ಎಂದು ನಂಬುಗೆಯನ್ನು ಕೊಟ್ಟು ಸನ್ಮಾನಿಸಿ ಮನೆಗೆ ಕಳುಹಿಸಿ ತಾನು ಕಂಸನ ಅಪ್ಪ ಣೆಯನ್ನು ತೆಗೆದು ಕೊಂಡು ಗೋಕುಲಕ್ಕೆ ಬಂದು ಯಶೋದಾರೋಹಿಣಿಯರ ಮಕ್ಕ ಳುಗಳನ್ನು ನೋಡಿ ಸಂತೋಷಪಟ್ಟು ಕೊಂಡಿರುತ್ತಿದ್ದನು. ಹೀಗಿರುವಲ್ಲಿ ಮೊದಲು ಕಂಸಾಸುರನು ಕಳುಹಿಸಿದ್ದ ಪೂತನಿಯೆಂಬ ರಾಕ್ಷ ಸಿಯು ಯಶೋದಾದೇವಿಯು ಹೊರಗೆ ಹೋಗಿದ್ದ ವೇಳೆಯಲ್ಲಿ ಆಕೆಯ ಆಕಾರವನ್ನು ತಾಳಿ ಮನೆಯೊಳಗೆ ಹೋಗಿ ಆರು ದಿನಗಳ ಮಗುವನ್ನು ಎತ್ತಿ ಕೊಂಡು ವಿಷ ಸೈನ್ಯ ವನ್ನು ಕುಡಿಸಿ ಕೊಂದುಹಾಕುವೆನೆಂದು ಯೋಚಿಸಿ ಮೊಲೆಯನ್ನು ಉಣ್ಣಗೊಡಲು ಆ ಬಾಲಕನು ತನ್ನ ಬಾಯಿಯಿಂದ ಮೊಲೆಯ ತುದಿಯನ್ನು ಕಚ್ಚಿ ಅವಳ ಶರೀರಗತ ವಾದ ನೆತ್ತರು ನೆಣ ಮಾಂಸ ಇವು ಮೊದಲಾದುವುಗಳನ್ನೆಲ್ಲಾ ಹೀರಿಬಿಟ್ಟನು. ಆ ಮೇಲೆ-ಅಯ್ಯೋ ಬಿಡು ಬಿಡು ಎಂದು ಒರಟುತ್ತ ಕೆಳಗೆ ಬಿದ್ದ ಅವಳ ಪ್ರಾಣಗ ಳನ್ನೂ ಹೀರಿಬಿಟ್ಟನು. ಆಗ ಮಹಾಘೋರವಾದ ರಾಕ್ಷಸಿಯ ಆಕಾರದ ಹೆಣವನ್ನೂ ಆ ಹೆಣದ ಮೊಲೆಯ ತೊಟ್ಟನ್ನು ತುದಿಯ ಬಾಯಿಯಲ್ಲಿ ಕಚ್ಚಿ ಕೊಂಡಿರುವ ಶಿಶು ವನೂ ಯಶೋದೆಯು ಕಂಡು ಬೆದರಿ ಬೆಬ್ಬರಗೊಂಡು ಬೇಗ ಹೋಗಿ ಆ ಶಿಶುವನ್ನು ಎತ್ತಿಕೊಂಡು ಗಂಡನಿಗೆ ಹೇಳಿ ಆ ಹೆಣವನ್ನು ಹೊರಗೆ ಹಾಕಿಸಿಬಿಟ್ಟು ಕೂಡಲೆ ಮ೦ತ್ರಜ್ಞರನ್ನು ಕರಿಸಿ ಆ ಶಿಶುವಿಗೆ ಭೀತಿಶಂಕೆಯು ಪರಿಹಾರವಾಗುವ ಹಾಗೆ ಯಂತ್ರವನ್ನು ಕಟ್ಟಿಸಿ ಮ೦ತ್ರಿಸಿ ಹಣೆಗೆ ವಿಭೂತಿಯನ್ನಿಡಿಸಿದಳು. ಆ ಮೇಲೆ ನೆಂಟ ರಾದ ವೃದ್ದ ಸ್ತ್ರೀಯರು ಬಂದು ಮಗುವನ್ನು ತೂಪಿರಿದು ನೆಟ್ಟಿಗೆಗಳನ್ನು ಮುರಿದು ಹರಸಿಹೋದರು. ತರುವಾಯ ಯದುವಂಶೀಯರ ಪುರೋಹಿತನಾದ ಗಾರ್ಗ್ಯನೆಂಬು ವನು ವಸುದೇವನ ಅಪ್ಪಣೆಯಿಂದ ಹನ್ನೆರಡನೆಯ ದಿನದಲ್ಲಿ ರಹಸ್ಯವಾಗಿ ವೇಷವನ್ನು ಮರಿಸಿಕೊಂಡು ಗೋಕುಲಕ್ಕೆ ಬಂದು ರೋಹಿಣೀದೇವಕಿಯರ ಮಕ್ಕಳುಗಳಿಗೆ ರಾಮ ಕಷ ಎಂದು ಹೆಸರನ್ನಿಟ್ಟು ಹರಸಿ ಹೊರಟುಹೋದನು. ಅನಂತರದಲ್ಲಿ ಯಶೋದೆಯು ನೆಂಟರೂ ಇಷ್ಟರೂ ಆದ ಮುತ್ತೈದೆಯರನ್ನು ಕರಿಸಿ ಬಾಗಿನಗಳನ್ನು ಕೊಟ್ಟು ಮಗು ವನ್ನು ಚಿನ್ನದ ತೊಟ್ಟಲಿನಲ್ಲಿ ಮಲಗಿಸಿ ಉಡಿದಾರವನ್ನು ಕಟ್ಟಿ ತೊಟ್ಟಿಲನ್ನು ತೂಗುತ್ತ ಜೋಗುಳಗಳನ್ನು ಹಾಡಿ ಆ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ತೂಗುವುದಕ್ಕೆ ಆರಂ ಭಿಸಿದಳು. ಕೃಷ್ಣನು ಬೆಳೆಯುತ್ತ ಕೆಲವು ದಿವಸಗಳಿಗೆ ಅಕಾರಣವಾದ ನಗೆಯಳುವಿಕೆ ಗಳಿಂದಲೂ ಉತ್ಯಾನಶಯನಗಳಿಂದಲೂ ತಾಯಿ ತಂದೆಗಳನ್ನು ನಗಿಸಿ ಸಂತೋಷಪಡಿ ಸುತ್ತಿದ್ದನು. ಹೀಗಿರುವಲ್ಲಿ ಒಂದು ದಿವಸ ಯಶೋದೆಯು ಮಗುವನ್ನು ತಟ್ಟಲಿನಲ್ಲಿ ಮಲ ಗಿಸಿ ಪರಿಚಾರಕಳನ್ನು ಕರೆದು ಕೊಂಡು ಸ್ನಾನಾರ್ಥವಾಗಿ ಕಾಳಿಂದೀನದಿಗೆ ಹೋದ ಕಾಲದಲ್ಲಿ ಶಕಟಾಸುರನು ನಂದಗೋಪನ ಮನೆಯಲ್ಲಿ ನಿಲ್ಲಿಸಿರುವ ಗಾಡಿಯಲ್ಲಿ ಸೇರಿಕೊಂಡು ತೊಟ್ಟಲಿನಲ್ಲಿ ಮಲಗಿರುವ ಮಗುವನ್ನು ಕೊಂದುಹಾಕುವೆನೆಂದು ಆ ಗಾಡಿಯನ್ನು ತೊಟ್ಟಿಲಿನ ಮೇಲೆ ನೂಕಲು ಆ ಗಾಡಿಗೆ ಮಗುವಿನ ಕಾಲಿನ ಉಂಗು