ಪುಟ:ಕಥಾಸಂಗ್ರಹ ಸಂಪುಟ ೨.djvu/೨೮೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕೃಷ್ಣಾವತಾರದ ಕಥೆ 271 ಟವು ತಗುಲಿ ಆ ಶಕಟಾಸುರನು ಸತ್ತು ಬಿದ್ದುದರಿಂದ ಅವನ ಹೆಣವು ಒಂದು ಮಹಾ ಸರ್ವತದಂತೆ ಕಾಣಿಸಲು ಈ ಹಸುಗೂಸಿನ ಸಾಹಸವೆಷ್ಟೋ ಎಂದು ನೋಡಿದವರು ಆಶ್ಚರ್ಯಪಟ್ಟಾರೆಂದು ಯೋಚಿಸಿ ಆ ಅಸುರನ ಹೆಣವನ್ನು ಆ ಶಿಶುರೂಪನಾದ ಹರಿಯೇ ಮಾಯಮಾಡಿ ತೊಟ್ಟಿಲಲ್ಲಿ ಕಾಲ ಹೆಬ್ಬೆರಳನ್ನು ಬಾಯಿಯಲ್ಲಿಟ್ಟು ಕೊಂಡು ಚೀಪುತ್ರ ಆಡುತ್ತಿದ್ದನು. ಅಷ್ಟರಲ್ಲಿ ಗೋಪಿಯು ಬಂದು ನುಚ್ಚು ನುರಿಯಾಗಿರುವ ಬಂಡಿಯನ್ನು ನೋಡಿ-ಇದೇನು ಮಹಾಶ್ವರ್ಯವು ? ಈ ಬಂಡಿಯು ಇದ್ದು ದಕ್ಕಿದ್ದ ಹಾಗೆಯೇ ಚೂರುಚೂರಾಗಿರುವುದು ! ಮಗುವು ಎಷ್ಟು ಹೆದರಿಕೊಂಡಿತೋ ಎಂದು ಮಗುವನ್ನು ಎತ್ತಿಕೊಂಡು ಗಂಡನಿಗೆ ಹೇಳಿ ಆ ಶಿಶುವಿಗೆ ಬಹಳವಾಗಿ ಶಾಂತಿಕರ್ಮ ವನ್ನು ಮಾಡಿಸಿದಳು. . ಆ ಮೇಲೆ ಕೃಷ್ಣನು ಮನೆಯಲ್ಲಿ ನಿಲ್ಲದೆ ಬೀದಿಗೇ ಓಡಿಯೋಡಿ ಹೋಗುತ್ತಿ ರಲು ಗೋಪಿಯು ಕೋಪಗೊಂಡು ಏನು ಮಾಡಿದರೂ ಮನೆಯನ್ನು ಬಿಟ್ಟು ಹೋಗು ವುದನ್ನು ಬಿಡುವುದಿಲ್ಲವಲ್ಲಾ ಎಂದು ಅವನ ಸೊಂಟಕ್ಕೆ ಒಂದು ಹಗ್ಗವನ್ನು ಕಟ್ಟಿ ಆ ಹಗ್ಗದ ತುದಿಯನ್ನು ಒಂದು ಒರಳುಕಲ್ಲಿಗೆ ಬಿಗಿದು ಮನೆಗೆಲಸಕ್ಕೆ ಹೋಗಲು ಆ ಸಮಯದಲ್ಲಿ ಕೃಷ್ಣನು ಆ ಒರಳು ಕಲ್ಲನ್ನು ಎಳೆದುಕೊಂಡು ಹೊರಗೆ ಹೋಗಿ ಬಾಗಿ ಲಿನ ಮುಂದೆ ಇರುವ ಎರಡು ಮತ್ತೀಮರಗಳ ನಡುವೆ ಹೋಗಲು ಆ ಮರಗಳಿಗೆ ಈ ಒರಳುಕಲ್ಲು ತಗುಲಿದುದರಿಂದ ಎರಡು ಮರಗಳೂ ಬೇರಿನೊಡನೆ ಮುರಿದುಬಿದ್ದು ವು. ಆ ವೇಳೆಯಲ್ಲಿ ಹೊರಗೆ ಹೋಗಿದ್ದ ನಂದಗೋಪನು ಬರುತ್ತ ಬಿದ್ದಿರುವ ಆ ದೊಡ್ಡ ಮರಗಳನ್ನೂ ಅವುಗಳ ನಡುವೆ ಸಂತೋಷದಿಂದ ಆಡುತ್ತ ಒರಳು ಕಲ್ಲಿನೊಡನೆ ಕೂಡಿ ಸೊಂಟದಲ್ಲಿ ಹಗ್ಗ ವುಳ್ಳ ಕೃಷ್ಣನನ್ನೂ ಕಂಡು ಕೌತುಕಾನಂದಭರಿತನಾಗಿ ನೋಡುತ್ತಿ ರುವಷ್ಟರಲ್ಲೇ ಮನೆಯಲ್ಲಿ ಯಶೋದೆಯು ತಾನು ಕಟ್ಟಿ ಹಾಕಿದ್ದ ಸ್ಥಳದಲ್ಲಿ ಕೃಷ್ಣನನ್ನೂ ಒರಳು ಕಲ್ಲನ್ನೂ ಕಾಣದೆ ಹೊರಗೆ ಓಡಿ ಬಂದು ಬಿದ್ದಿರುವ ಮರಗಳ ಸಂದಿನಲ್ಲಿರುವ ಕೃಷ್ಣನನ್ನು ಕಂಡು ಬೇಗನೆ ಎತ್ತಿಕೊಂಡು ಮುದ್ದಿಸಿ ಮನೆಗೆ ಕರೆದುಕೊಂಡು ಹೋದಳು. ಹೀಗೆ ಕೆಲವು ದಿವಸಗಳು ಕಳೆಯಲು ಒಂದಾನೊಂದು ದಿವಸ ಬಲರಾಮನು ಬಂದು ಕೃಷ್ಣನು ಬೀದಿಯ ಮಣ್ಣನ್ನು ತಿಂದನು ಎಂದು ಗೋಪಿಯ ಸಂಗಡ ಚಾಡಿಹೇಳಲು ಆಗ ಗೋಪಿದೇವಿಯು-ಏನೋ ಕೃಷ್ಣಾ ! ಮಣ್ಣು ತಿಂದಿಯಾ ಎಂದು ಕೇಳಿದುದಕ್ಕೆ ಅವನು ಇಲ್ಲ ಮ್ಯಾ, ಅಣ್ಣನು ನನ್ನ ಮೇಲೆ ಚಾಡಿಹೇಳುತ್ತಾನೆ, ನೋಡು ಎಂದು ಬಾಯಿಯನ್ನು ತೆರೆದು ತೋರಿಸಲು ಆ ಬಾಯಿಯೊಳಗೆ ಸಪ್ತಸಾಗರ ಗಳೂ ಸಪ್ತ ಕುಲಾಚಲಗಳೂ ಸಪ್ತದ್ವೀಪಗಳೂ ಸಪ್ತಲೋಕಗಳೂ ಕಂಡುಬಂದುದರಿಂದ ಈತನೇ ಮಹಾವಿಷ್ಣುವೆಂದು ಆತನ ಮಾಯಾಶಕ್ತಿಯಿಂದ ಅರಿಯಲಾರದೆ ಬಾಯಿ ಯನ್ನು ಮುಚ್ಚಿ ಕೋ ಎಂದು ಹೇಳಿ ಸಮಾಧಾನಪಡಿಸಿದಳು. ಅನಂತರದಲ್ಲಿ ಒಂದಾನೊಂದು ದಿವಸ ನಂದಗೋಪನು ಮುದುಕರಾದ ಗೊಲ್ಲ ರನ್ನು ಕೂಡಿಸಿಕೊಂಡು ಈ ಗೋಕುಲದಲ್ಲಿ ನಮಗೆ ಏನೇನೋ ದೈವಿಕವಾದ ತೊ೦