ಪುಟ:ಕಥಾಸಂಗ್ರಹ ಸಂಪುಟ ೨.djvu/೨೮೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕೃಷ್ಣಾವತಾರದ ಕಥೆ 273 ಕಾಳಿಂಗನಾಗೇಂದ್ರನ ಪತ್ನಿ ಯರಾದ ನಾಗಕನ್ನಿಕೆಯರು ಓಡಿಬಂದು ಕೃಷ್ಣನಿಗೆ Aಷ್ಟಾಂಗವಾಗಿ ನಮಸ್ಕರಿಸಿ ಬಹಳವಾಗಿ ಸ್ತೋತ್ರಮಾಡಿ---ಎಲೈ ಮಹಾತ್ಮನೇ ! - ಪತಿಯನ್ನು ಕಾಪಾಡಿ ನಮ್ಮ ಮುತ್ತೆ ದೆತನವನ್ನು ರಕ್ಷಿಸಬೇಕು ಎಂದು ದೀನ . ಬಂದ ಕೂಡಿ ಬೇಡಿಕೊಂಡು ದರಿಂದ ಶ್ರೀಕೃಷ್ಣನು ಆ ಕಾಳಿಂಗನನ್ನು ಬಿಟ್ಟು .ಲ್ಲಿರದೆ ಈ ಕ್ಷಣದಲ್ಲಿಯೇ ಇಲ್ಲಿಂದ ಹೊರಟುಹೋಗಿ ಸಮುದ್ರದಲ್ಲಿ ಸೇರಿಕೊ ಎಂದು ಅಪ್ಪಣೆಯನ್ನು ಕೊಟ್ಟು ದರಿಂದ ಅದು ಆ ಸ್ಥಳವನ್ನು ಬಿಟ್ಟು ಹೊರಟು ತನ್ನ ಸಂಸಾರಸಹಿತವಾಗಿ ಹೋಗಿ ಸಮುದ್ರವನ್ನು ಸೇರಿಕೊಂಡಿತು. ತರುವಾಯ ನಂದ ಗೋಪನೇ ಮೊದಲಾದ ಗೊಲ್ಲರೆಲ್ಲಾ ಈ ಮಹದಾಶ್ಚರ್ಯವನ್ನು ಕಂಡು ಈ ಬಾಲಕನು ಸಾಮಾನ್ಯ ಬಾಲಕನಲ್ಲ, ದೇವಾಂಶಸಂಭೂತನಾದ ಬಾಲಕನೇ ಸರಿ ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡು ಸಂತೋಷಪಡುತ್ತಿದ್ದರು. ಮತ್ತೊಂದು ದಿವಸ ಶ್ರೀಕೃಷ್ಣನು ತನಗೆ ದನಗಳನ್ನು ಕಾಯುವ ಪ್ರಾಯವಾ ದುದರಿಂದ ಬಲರಾಮನ ಜೊತೆಯಲ್ಲಿ ದನಗಳನ್ನು ಕಾಯುವ ಹುಡುಗರ ಸಂಗಡ ತನ್ನ ಮನೆಯ ದನಗಳನ್ನೂ ಅಟ್ಟಿ ಕೊಂಡು ಹೋಗಿ ಗೋವರ್ಧನಗಿರಿಯ ತಪ್ಪಲಲ್ಲಿ ಅವುಗಳನ್ನು ಮೇಯಿಸುತ್ತ ಆ ಗಿರಿಯ ಸಮೀಪದಲ್ಲಿರುವ ತಾಳೀವನವನ್ನು ಕಂಡು ಜೊತೆಯ ಹುಡುಗರನ್ನು ಕರೆದು ಇಲ್ಲಿ ನೋಡಿರಿ. ಈ ವನದಲ್ಲಿ ಓಲೆಯ ಹಣ್ಣು ಗಳು ಎಷ್ಟು ಚೆನ್ನಾಗಿರುವುವು. ಅವುಗಳನ್ನು ಕೆಡಹಿಕೊಂಡು ತಿನ್ನೋಣ ಬನ್ನಿರಿ ಎಂದು ಹೇಳಲು ಅವರೆಲ್ಲರೂ-ಅಯ್ಯೋ, ಅಪ್ಪಾ ! ಆಗದಾಗದು. ಮಹಾವಿ ಪತ್ತು ಸಂಭವಿಸುವುದು. ನಾವು ತಿರುಗಿ ಹೋಗಿ ನಮ್ಮ ತಾಯಿ ತಂದೆಗಳ ಮುಖಗ ಳನ್ನು ನೋಡುವುದಿಲ್ಲ. ಇದು ನಿಜ. ಈ ವನದಲ್ಲಿ ಉಂಟಾಗುವ ಹೆಂಡವು ಪ್ರತಿ ನಿತ್ಯದಲ್ಲೂ ಕಂಸಾಸುರನ ಪತ್ನಿ ಯರ ಪಾನಾರ್ಥವಾಗಿ ಸಾಗಿಹೋಗುತ್ತಿರುವುದು, ಈ ವನದಲ್ಲಿ ಧೇನುಕನೆಂಬ ಕತೆಯ ರೂಪಿನ ಒಬ್ಬ ದುಷ್ಪರಾಕ್ಷಸನಿರುವನು. ಮೊದಲು ಒಂದು ಸಾರಿ ಶಚೀಸಮೇತನಾದ ಇಂದ್ರನು ಈ ಓಲೆಮರಗಳ ಹೆಂಡವನ್ನು ಕುಡಿಯಬೇಕೆಂಬ ಅಪೇಕ್ಷೆಯಿಂದ ಬಂದು ಆ ಕತ್ತೆ ಯ ಕಾಲಿನಿಂದ ಒದಿಸಿಕೊಂಡು ನೋವು ತಿಂದು ಭಯಪಟ್ಟು ಹಿಂದಿರುಗಿ ನೋಡದೆ ಅಮರಾವತಿಗೆ ಓಡಿಹೋದನು. ನಾವು ಇಂಥ ವನಕ್ಕೆ ಹೋದರೆ ಬದುಕುವೆನೇನಪ್ಪಾ ? ನಮಗೆ ಬೇಡಪ್ಪಾ, ನಾವು ಖಂಡಿತವಾಗಿ ಬರುವುದಿಲ್ಲ ಎಂದು ಹೇಳಿದರು. ಅದಕ್ಕೆ ಕೃಷ್ಣನು ಅವರನ್ನು ನೋಡಿ ನಕ್ಕು-ಅಯ್ಯೋ ಬಾಳೆನಿಮ್ಮ ಧೈರ್ಯವು ಕಂಡ ಹಾಗಾಯಿತು ! ಒಂದು ಕತ್ತೆಗೆ ಹೆದರಿಕೊಂಡು ಅಲ್ಲಿಗೆ ಹೋಗಿ ದಿವ್ಯವಾದ ಹಣ್ಣುಗಳನ್ನು ತಿನ್ನದೆ ಇರಬಹುದೇ ? ಇದು ಗಂಡಸುತನವೋ ಎಂದು ಹೇಳಿ ತಾನು ಶೀಘ್ರವಾಗಿ ಅಲ್ಲಿಗೆ ಹೋಗಿ ವನವನ್ನು ಹೊಕ್ಕನು, ಜೊತೆಯ ಹುಡುಗರೆಲ್ಲರೂ ಭಯಪಟ್ಟು ಹೋಗಲಾರದೆ ಕೃಷ್ಣನು ಏನಾ ಗುವನೋ ಎಂದು ಯೋಚಿಸುತ್ತ ನೋಡುತ್ತ ದೂರದಲ್ಲೇ ನಿಂತಿದ್ದರು. ತರುವಾಯ ಕತ್ತೆಯ ರೂಪಿನ ಧೇನುಕನೆಂಬ ರಾಕ್ಷಸನು ಕೃಷ್ಣನು ವನಕ್ಕೆ ಬಂದುದನ್ನು ಕಂಡು ಇವನನ್ನು ಕಚ್ಚಿ ಒದೆದು ಕೊಂದು ತಿಂದುಹಾಕುವೆನೆಂದು ಯೋಚಿಸಿಕೊಂಡು ಆತನ 18