ಪುಟ:ಕಥಾಸಂಗ್ರಹ ಸಂಪುಟ ೨.djvu/೨೯೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


280 ಕಥಾಸಂಗ್ರಹ-೬ ನೆಯ ಭಾಗ ಅಲ್ಪನಿಗೆ ಐಶ್ವರ್ಯ ಬಂದಾಗ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿಸಿಕೊಂಡ. ಅಲ್ಪರ ಸಂಗ ಅಭಿಮಾನ ಭಂಗ. ಅಲ್ಲಾಡುವ ಹಲ್ಲಿನ ಮೇಲೆ ಹಲಗೇ ಕಲ್ಲು ಬಿದ್ದಂತೆ. ಅವನ ಮಾತು ಕೆಸರಿನಲ್ಲಿ ನೆಟ್ಟ ಕಂಬದ ಹಾಗೆ. ಅವನ ಸಾಕ್ಷಿ ಅಡ್ಡ ಗೋಡೆಯ ಮೇಗಣ ದೀಪದ ಹಾಗೆ. ಅಶನವಸನಕ್ಕಿದ್ದ ಮೇಲೆ ವ್ಯಸನವೇಕೆ ? ಅಳಿದ ಊರಿಗೆ ಉಳಿದವನೇ ಗೌಡ. ಆಕಳು ಕಪ್ಪಾದನೆ ಹಾಲು ಕಪ್ಪೇ ? ಆಗದ ಕಾರ್ಯಕ್ಕೆ ಆಶೆ ಪಟ್ಟರೆ ಸಾಗುವದಿಲ್ಲ ಹೋಗುವದಿಲ್ಲ. ಆಟಕ್ಕೆ ತಕ್ಕ ವೇಷ, ವೇಷಕ್ಕೆ ತಕ್ಕ ಭಾಷೆ. ಆನೆಗೆ ಗುಂಗುರು ಕಾಡಿದ ಹಾಗೆ. ಆನೇ ಕಂಡು ಸ್ನಾನ ಬೊಗುಳಿದ ಹಾಗೆ. ಆನೇ ಕೈಲಿ ಕಬ್ಬು ಕೊಟ್ಟ ಹಾಗೆ. ಆನೇ ಮೇಲೆ ಹೋಗುವವನನ್ನು ಸುಣ್ಣಾ ಕೇಳಿದ ಹಾಗೆ ಆರಾಳು ಮರು ಫೌಜು. ಆಶೆಗೆ ನಾಶವಿಲ್ಲ. ಇಡೀ ಮುಳುಗಿದ ಮೇಲೆ ಚಳಿಯೇನು ಗಾಳಿಯೇನು ? ಇರುಳು ಕಂಡ ಬಾವಿಯಲ್ಲಿ ಹಗಲು ಬಿದ್ದನು. ಇಲಿ ಬೆಕ್ಕಿಗೆ ಸಾಕ್ಷಿ: ಇಲಿಗೆ ಹೆದರಿ ಹುಲಿಯ ಬಾಯಲ್ಲಿ ಬಿದ್ದನು. ಇವನವನಿಗೆ ಎಣ್ಣೆ ಸೀಗೆ, ಈಚಲು ಮರದ ಕೆಳಗೆ ಮಜ್ಜಿಗೆ ಕುಡಿದರೆ ನಾಚಿಕೆಗೇಡಾಗದೇ ? ಉಂಟುಮಾಡಿದ ದೇವರು ಊಟವ ಕೊಡಲಾರನೋ ? ಉಂಡದ್ದು ಉಂಡ ಹಾಗೆ ಹೋದರೆ ವೈದ್ಯನ ಹಂಗೇನು ? ಉಂಬೋಕ್ಕೆ ಉಡೋಕ್ಕೆ ಅಣ್ಣಪ್ಪ, ಕೆಲಸಕ್ಕೆ ಮಾತ್ರ ದೊಣ್ಣಪ್ಪ, ಊರೆಲ್ಲಾ ಸೂರೆ ಆದ ಮೇಲೆ ಬಾಗಿಲು ಹಾಕಿದರು." ಎಣ್ಣೆ ಬರುವಾಗ ಗಾಣಾ ಮುರಿಯಿತು. ಎಣ್ಣೆ ಅಳದ ಮಾನದ ಜಿಡ್ಡು ಹೋದೀತೇ? ಎತ್ತ ಹೋದರೂ ಮೃತ್ಯು ಬಿಡದು. ಎತ್ತಿನ ಮುಂದೆ ತೆಂಗಿನ ಕಾಯಿ ಹಾಕಿದ ಹಾಗೆ. ಎತ್ತು ಹಾರುವುದಕ್ಕಿಂತ ಮುಂಚೆ ಕೌದಿ ಹಾರಿತು. ಎಮ್ಮೆ ಮೇಲೆ ಮಳೆಗರೆದ ಹಾಗೆ, ಎಲ್ಲಾ ಹೊಕ್ಕಿತು, ಬಾಲ ಮಾತ್ರ ಉಳಿಯಿತು.