ಪುಟ:ಕಥಾಸಂಗ್ರಹ ಸಂಪುಟ ೨.djvu/೨೯೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


288 ಕಥಾಸಂಗ್ರಹ-೬ ನೆಯ ಭಾಗ ವನವಾಸಕ್ಕೆ ಹೋದರೂ ಘನ ಕಷ್ಟ ಬಿಡಲಿಲ್ಲ. ವಾಸಿ ಆಗದ ರೋಗಕ್ಕೆ ರಾಶಿ ಮದ್ದು ಮಾಡಿದರೂ ವ್ಯರ್ಥ ವಿತ್ರಕ್ಕೆ ತಕ್ಕ ವಿಭವ. ವೀರನ ಶೌರ್ಯ ಹಾರುವನ ಮೇಲೆಯೇ ? ವೈರವಿದ್ದ ವನಿಂದ ಕೌರಾ ಮಾಡಿಸಿಕೊಂಡ ಹಾಗೆ. ವೈರಾಗ್ಯವುಳ್ಳವನಾದರೂ ವೈರತ್ವ ಬಿಡಲಿಲ್ಲ. ಶಕುನದ ಹಕ್ಕಿಯು ಗೋಣು ಮುರಿದ ಹಾಗೆ. ಶಕ್ತಿಯಿದ್ದವನಾದರೂ ಯುಕ್ತಿಯಿದ್ದವನ ಕೆಳಗೆ ಶಾಪಾ ಕೊಡುವವ ಪಾಪಕ್ಕೆ ಹೆದರ. ಶಾಂತಿ ಮಾಡಿದರೂ ಭಾಂತಿ ಹೋಗಲಿಲ್ಲ. ಶ್ಯಾನುಭೋಗನ ಸಂಬಳ ಸಂತೋ ಎಂದು ಕೇಳ ಬೇಡ; ಹೆಂಡತೀ ದೆಸೆಯವರು ಉಂಡ - ರೋ ಎಂದು ಕೇಳ ಬೇಡ. ಶಾನನ ಮುಂದೆ ಗಾನಾ ಹಾಡಿದ ಹಾಗೆ. ಶಿವಾ ಅಂದರೆ ಸೆರಗು ಸುತ್ತಿಕೊಂಡ; ಭವಾ ಅಂದರೆ ಭೈರವಾಸು ಹರಿದು ಬಿಟ್ಟ. ಸಂಕಟ ಬಂದರೆ ವೆಂಕಟರಮಣ. ಸಂಚು ನಡಿಸಲಿಕ್ಕೆ ಸಂಚಕಾರಾ ಕೊಡಬೇಕೇ ? ಸಂತೇ ನೆರೆಯುವದಕ್ಕಿಂತ ಮುಂಚೆ ಗಂಟು ಕಳ್ಳರು ನೆರೆದ ಹಾಗೆ, ಸಂತೆ ಹೊತ್ತಿಗೆ ಮರು ಮೊಳಾ ನೇದ ಹಾಗೆ. ಸಜ್ಜನನಿಗೂ ಸಜ್ಜನನಿಗೂ ಮರು ದಾರಿ; ಸಜ್ಜನನಿಗೂ ದುರ್ಜನನಿಗೂ ಎರಡು ದಾರಿ;

  • ದುರ್ಜನನಿಗೂ ದುರ್ಜನನಿಗೂ ಒಂದೇ ದಾರಿ. ಸಟೆ ಆಡುವವನಿಗೆ ಮಠದ ಪೂಜೆ ಸಿಕ್ಕೀತೇ ? ಸಣ್ಣ ತಲೆಗೆ ದೊಡ್ಡ ಮುಂಡಾಸು. ಸತ್ತ ಕುರಿ ಕಿಚ್ಚಿಗೆ ಅ೦ಜೀತೇ ? ಸತ್ಯವಿದ್ದರೆ ಎತ್ತಲೂ ಭಯವಿಲ್ಲ. ಸಮಯ ಕ್ಕಾಗದ ಅರ್ಥ ಸಹಸ್ರವಿದ್ದರೂ ವ್ಯರ್ಥ ? ಸಮಯ ಕಾದವನೇ ನೆಂಟ, ಸಾಹಸಕ್ಕೊದಗಿದವನೇ ಭಂಟ, ಸಮುದ್ರದ ನಂಟು, ಒಪ್ಪಿಗೆ ಬಡತನ, ಸಮುದ್ರದ ಮುಂದೆ ಅರವಟಿಗೆ. ಸಮುದ್ರ ದೊಡ್ಡದಾದರೂ ಪಾತ್ರೆ ಇದ್ದಷ್ಟೇ ನೀರು ಸಿಕ್ಕಿತು. ಸಮುದ್ರದ ಮೇರೆ ದಪ್ಪಿದರೆ ಯಾರು ಮಾಡೋದೇನು ? ಸರಕು ಒಪ್ಪಿಸಿದ ಮೇಲೆ ಸುಂಕವೇ ? ಸರ್ಪನ ಕೂಡೆ ಸರಸವೇ ? ಸಾಧು ಎತ್ತಿಗೆ ಎರಡು ಹೇರು. ಸಾಧಿಸಿದರೆ ಸಬಳಾ ನುಂಗಬಹುದು.

21