ಪುಟ:ಕಥಾಸಂಗ್ರಹ ಸಂಪುಟ ೨.djvu/೩೦೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಗಾದೆಗಳು 289 ಸಾಯುವ ತನಕ ಸಾಮು ಕಲಿತರೆ ಯುದ್ದಾ ಮಾಡುವದ್ಯಾವಾಗ ? ಸಾಯುವವನ ಕಣ್ಣಿಗೆ ಸುಳಿದವನೇ ಜವರಾಯ. ಸಾವಿಗಂಜದವನು ನೋವಿಗೆ ಹೆದರಾನೇ ? ಸಾವಿರ ಕುದುರೆ ಸರದಾರನಾದರೂ ಮನೇ ಹೆಂಡತೀ ಕಾಸ್ಕಾರ. ಸಾವಿರ ತನಕ ಸಾಲ, ಆ ಮೇಲೆ ಲೋಲ. ಸಾವಿರ ವರಹಾ ತೂಕ ಚಿನ್ನ ಕೈ ಹಾಗ ತೂಕ ಮಚ್ಚು. ಸಾವಿರ ಬೆಕ್ಕು ಕೂಡಿದರೆ ಒಂದು ಹುಲಿಯಾದೀತೇ ? ಸಾವಿರ ಬಾರಿ ಗೋವಿಂದಾ ಎನ್ನ ಬಹುದು ; ಒಬ್ಬ ದಾಸ್ಯೆಯಗೆ ಇಕ್ಕೋದು ಕಷ್ಟ. ಸೀತರೆ ಬೀಳುವ ಮಗು ಕೊಯಿದರೆ ನಿಂತೀತೇ ? ಸಿಟ್ಟಿಗೆ ಕೊಯಿದ ಮಗು ಶಾಂತದಿಂದ ಹತ್ತೇ ? ಸೀಸದ ಉಳಿಯಲ್ಲಿ ಶೈಲಾ ಒಡೆಯ ಬಹುದೇ ? ಸುಂಕದವನ ಸಂಗಡ ಸುಖದುಃಖ ಹೇಳಿದರೆ ಕಂಕುಳಲ್ಲಿ ಏನು ಅಂದ ? ಸುಂಕದವನು ಸುಳ್ಳ ಬಣಜಿಗ ಕಳ್ಳ, ಸುಡುಗಾಡಿಗೆ ಹೋದ ಹೆಣ ತಿರಿಗಿ ಬಂದೀತೇ ? ಸುದ್ದೀ ಅ೦ದರೆ ತಿಳಿಯದೇ ? ಒನಿಕೇ ರಾಗ. ಸುಳ್ಳು ದೇವರಿಗೆ ಕಳ್ಳ ಪೂಜಾರಿ, ಸೂಜೆಗೆ ಸೂಜಿ ಮುತ್ತು ಕೊಟ್ಟ ಹಾಗೆ. ಸೂಜಿಯಷ್ಟು ಬಾಯಿ, ಗುಡಾಣದಷ್ಟು ಹೊಟ್ಟೆ. ಸೂಲು ತಪ್ಪಿದರೆ ಗೊಷ್ಟೇ, ಸೆಕೆ ಹೆಚ್ಚಾಯಿತೆಂದು ಕಂಬಳಿ ಹೊದ್ದು ಕೊಂಡ. - ಸೆಟ್ಟಿ ಬಿಟ್ಟಲ್ಲೇ ಪಟ್ಟಣ, ಸೆಟ್ಟಿಯ ಬಾಳು ಸತ್ಯಲ ದೆ ತಿಳಿಯದು. ಸೆಟ್ಟಿ ಶೃಂಗಾರವಾಗುವಾಗ್ಗೆ ಪಟ್ಟಣವೆಲ್ಲಾ ಸೂರೆ ಹೋಯಿತು. ಸೆಟ್ಟಿ ಸವಾಸೇರು, ಲಿಂಗ ಅಡೀ ಸೇರು. ಸೇದಿದ ನೀರು ಹಾದೀಲಿ ಹಾಕ್ಯಾರೇ ? ಸೇರದ ಗಂಡನಿಗೆ ಮೊಸರಲ್ಲಿ ಕಲ್ಲು ಸಿಕ್ಕಿತು. ಸೇರು ರಾಜ, ಮಣವು ಭಂಟ, ಸ್ಥಿತಿಯಿಲ್ಲದಿದ್ದರೂ, ಗತಿ ಕೆಡಬಾರದು. ಸ್ಮರಣೆ ತಪ್ಪಿದರೂ ಸೈರಣೆ ಇರಬೇಕು. ಸ್ವಪ್ನದಲ್ಲಿ ದಂಡಿಗೇ ಏರಿ ಗೊಂಡೇ ಹಿಡಿದ ಹಾಗೆ. ಸ್ವಾಮಿದ್ರೋಹೀ ಮನೆಗೆ ಪಂಚಮಹಾಪಾತಕದ ಬಾಗಲು. ಹಂಗಾಳಾದ ಮೇಲೆ ಮಂಗನ ಹಾಗೆ ಮಾಡಬೇಕು. ಹಂಗು ಹರಿದ ಮೇಲೆ ತೊಂಗೇನು ? ತೊಡರೇನು ?