ಪುಟ:ಕಥಾಸಂಗ್ರಹ ಸಂಪುಟ ೨.djvu/೩೦೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


290 ಕಥಾಸಂಗ್ರಹ-೬ ನೆಯ ಭಾಗ ಹಂಚಿನಲ್ಲು ಣು ವವರಿಗೆ ಹರಿವಾಣವೇಕೆ ? ಹಂದಿ ತೊಳೆದರೂ ಕೆಸರಿನಲ್ಲಿ ಹೊರಳೋದು ಬಿಡದು. ಹಣವಿದ್ದವನಿಗೆ ಗುಣವಿಲ್ಲ, ಗುಣವಿದ್ದವನಿಗೆ ಹಣವಿಲ್ಲ, ಹಣವಿಲ್ಲದವ ಹೆಣ. ಹಣವಂದರೆ ಹೆಣಾ ಬಾಯಿ ಬಿಡುತ್ತೆ. ಹಣ್ಣು ಜಾರಿ ಹಾಲಿನಲ್ಲಿ ಬಿದ್ದ ಹಾಗೆ.. ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದ ಹಾಗೆ. ಹಣ್ಣೆಂದು ಶಲಭ ದೀಪದ ಮೇಲೆ ಬಿದ್ದು ಸತ್ತ ಹಾಗೆ, ಹತ್ತರ ಸಾವು ಮದುವೆ ಸಮಾನ. ಹತ್ತರ ಹಲ್ಲ ಕಡ್ಡಿ ಒಬ್ಬನ ತಲೆ ಹೊರೆ. ಹನಿಗೂಡಿದರೆ ಹಳ್ಳ, ತೆನೆಗೂಡಿದರೆ ಭತ್ಯ. ಹನುಮಂತರಾಯ ಹಗ್ಗಾ ತಿನ್ನುವಲ್ಲಿ ಪೂಜಾರೆಯ ಸೇವಿಗೇ ಬಯಸಿದ. ಹನ್ನೆರಡು ವರುಷ ಸಾಧಕಾ ಮಾಡಿ ಮನೇ ಮುದುಕಿ ಸೊಂಟಾ ಮುರಿದ ಹಾಗೆ. ಹಬೆಗೆ ತಾಳದೆ ಉರಿಯೊಳಗೆ ಬಿದ್ದನಂತೆ. ಹರಿವಿಯ ಅನ್ನದಲ್ಲಿ ಒಂದಗುಳು ನೋಡಿದರೆ ಸರಿ. ಹರಿಯೋ ಪರಿಯಂತರ ಎಳೆಯಬಾರದು; ಮುರಿಯೋ ಪರಿಯಂತರ ಬೊಗ್ಗಿ ಸಬಾರದು. ಹಲವು ಸಮಗಾರರು ಕೂಡಿ ತೊಗಲು ಹದಾ ಕೆಡಸಿದರು. ಹಲ್ಲು ಇರುವಾಗಲೇ ಕಡೆ ತಿನ್ನಬೇಕು. ಹಸೀ ಗೋಡೆಗೆ ಕಲ್ಲು ಹೊಡೆದ ಹಾಗೆ ಹಳೆದು ಮಿಾರಿ ಹೊಸದಿಲ್ಲ; ಬಿಳಿದು ಮಿರಿ ಬಣ್ಣವಿಲ್ಲ. ಹಳ್ಳಿ ಕುರುಬರಿಗೆ ಗಾಜೇ ಮಾಣಿಕ್ಯ, ಹಾಕುವದಕ್ಕೆ ತೆಗೆಯುವದಕ್ಕೆ ಗೌಡನ ಕೊಳವೇ ? ಹಾಕೋದು ಬಿತ್ತೋದು ನನ್ನಿ ಚೆ : ಆಗೋದು ಹೋಗೋದು ದೇವರಿಚೆ. ಹಾಗದ ಕೋತಿ ಮುಪ್ಪಾಗದ ಬೆಲ್ಲಾ ತಿಂತು. ಹಾಗಲವಾಡಿಗೆ ಹೋದರೆಗೀದರೆ ಹಾಗಂದೆಮ್ಮೆ ತಂದರೆಗಿಂದರೆ ಕರೆದರೆಗಿರೆದರೆ ನಿಮ್ಮವರಿಗೆ ಮಜ್ಜಿಗೆಗಿಚ್ಚಿಗೆ ಕೊಟ್ಟು ಗಿಟೀಯಾ ! ಹಾಡಿದ್ದೇ ಹಾಡೋ ಕಿಸುಬಾಯಿ ದಾಸ, ಹಾದೀ ಜಗಳವ ಹಣವಡ್ಡಕ್ಕೆ ಕೊಂಡ. ಹಾರೋ ಗುಬ್ಬಿಗೆ ಗೋಧೀ ಕಲ್ಲು ಕಟ್ಟಿದ ಹಾಗೆ. ಹಾಲಕ್ರಿಯಾದರೆ ಹಾಲ ಕರದೀತೇ ? ಹಾಲಿದ್ದಾಗಲೇ ಹಬ್ಬಾ ಮಾಡು. ಹಾವಿಗೆ ಹಾಲೆರೆದರೆ ತನ್ನ ವಿಷಾಬಿಟೀತೇ ? ಹಾವಿನ ಕಡೆ ಕಪ್ಪೆಗೆ ಸರಸವೇ ? ಹಾವ ಕೊಂದು ಹದ್ದಿನ ಮುಂದೆ ಹಾಕಿದ ಹಾಗೆ. ಹಾವು ಮುಪ್ಪಾದರೆ ವಿಷ ಮುಪ್ಪೇ.