ಪುಟ:ಕಥಾಸಂಗ್ರಹ ಸಂಪುಟ ೨.djvu/೩೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ರಾವಣನ ದಿಗ್ವಿಜಯವು 23 ಆತನ ಬಳಿಗೆ ಹೋಗಿ ಆದರಿಸಿ ಮುಂದೆ ನಡೆಯುವ ಯುದ್ಧದಲ್ಲಿ ಅವನಿಗೆ ನಿನ್ನ ಭುಜ ಸಹಾಯವನ್ನು ಮಾಡೆಂದು ಹೇಳಲು ಮಧುದೈತ್ಯನು ಆ ಮಾತುಗಳನ್ನು ಕೇಳಿ ಒಪ್ಪಿ ಕೊಂಡು ರಾವಣನ ಬಳಿಗೆ ಬಂದು ಯಥಾಯೋಗ್ಯವಾಗಿ ಪೂಜಿಸಿ ಮರ್ಯಾದೆಯೊ ಡನೆ ತನ್ನ ಮನೆಗೆ ಕರೆದುಕೊಂಡು ಬಂದು ಸತ್ಕರಿಸಿದನು. - ಆ ಬಳಿಕ ರಾವಣನು ಆ ರಾತ್ರಿಯನ್ನು ಅಲ್ಲೇ ಕಳೆದು ಮರುದಿವಸ ಬೆಳಗಾ ಗುತ್ತಲೇ ಎದ್ದು ಆ ಮಧು ದೈತ್ಯನನ್ನೂ ಸಂಗಡವೇ ಕರೆದು ಕೊಂಡು ಇಂದ್ರನ ಪಟ್ಟಿ ಣವಾದ ಅಮರಾವತಿಯನ್ನು ಕುರಿತು ಬರುತ್ತಿರಲು ನಡುದಾರಿಯಲ್ಲಿ ಸೂರ್ಯಾಸ್ಯ ಮಾನವಾಯಿತು. ಆಗ ಕೈಲಾಸಾಚಲದ ತಪ್ಪಲಲ್ಲಿ ಬಿಡಾರವನ್ನು ಬಿಡಿಸಿ ಕೋಮಲ ತರವಾದ ಚಿಗುರುಗಳನ್ನು ತರಿಸಿ ಮಂಚದ ಮೇಲೆ ಹಾಸಿಸಿ ಮಾರ್ಗಾಯಾಸ ವಿಶ್ರಾಂ ತ್ಯರ್ಥವಾಗಿ ತಣುಪಾದ ಗಾಳಿಗೆ ಮೆಯೊಟ್ಟು ಮಲಗಿದ್ದನು. ಆ ಸಮಯದಲ್ಲಿ ದೇವ ಗಣಿಕೆಯರಲ್ಲಿ ಬಲು ಚಲುವೆಯ ಸೊಬಗುಳ್ಳವಳೂ ಆದ ರಂಭೆಯೆಂಬವಳು ಆ ಮಾರ್ಗದಲ್ಲಿ ಹೋಗುತ್ತಿರಲು ದಶಾನನನು ಅವಳನ್ನು ನೋಡಿ ಕಾಮಪರವಶನಾಗಿ ಕೂಡಲೆ ಅವಳ ಬಳಿಗೆ ಹೋಗಿ ಅವಳನ್ನು ತಡೆದು ಬಲಾತ್ಕಾರಿಸಲು ಆಕೆಯು ಆ ನಿರ್ಬಂಧವನ್ನು ತಡೆಯಲಾರದೆ ಅದೃಶ್ಯಳಾಗಿ ತಾನು ವರಿಸಿದ್ದ ಕುಬೇರನ ಕುಮಾರ ನಾದ ನಳಕೂಬರನ ಬಳಿಗೈದಿ ದಾರಿಯಲ್ಲಿ ದುಷ್ಟನಾದ ದಶಾನನನು ಮಾಡಿದ ದುಶ್ಲೇ ಪೈಯನ್ನು ಹೇಳಲು ಆಗ ನಳಕೂಬರನು ಬಹು ಕುಪಿತನಾಗಿದುಷ್ಟನಾದ ರಾವ ಣನು ಇಂದು ಮೊದಲು ಪರಸ್ತ್ರೀಯರನ್ನು ಬಲಾತ್ಕಾರದಿಂದ ಹಿಡಿದರೆ ಅವನ ಹತ್ತು ತಲೆಗಳೂ ಒಡೆದು ಸಾಯಲೆಂದು ಉಗ್ರ ಶಾಪವನ್ನಿತ್ತನು. . ಆ ಬಳಿಕ ರಾವಣನು ತನಗೆ ನಳಕೂಬರನಿಂದ ಬಂದ ಶಾಪದ ವೃತ್ತಾಂತ ವನ್ನು ಆಕಾಶವಾಣಿಯಿಂದ ಕೇಳಿದವನಾದಾಗ ಅದನ್ನು ಗಣನೆಗೆ ತಾರದೆ ಸೂರ್ಯೋದಯ ಕಾಲದಲ್ಲೆದು ಸೇನೆಯೊಡನೆ ಕೂಡಿ ಹೊರಟು ಅಮರಾವತೀ ಪಟ್ಟ ಣದ ಬಳಿಗೆ ಬಂದನು. ಆಗ ದೇವತೆಗಳು ಓಹೋ ! ಈಗ ಸೇನೆಯೊಡನೆ ಬಂದ ವನು ಪರಭೀಕರನಾದ ರಾವಣನು. ಈ ಸಮಯದಲ್ಲಿ ಸಂಭವಿಸಿದ ಮಹಾ ವಿಪತ್ತಿ ನಿಂದ ತಪ್ಪಿಸಿ ನಮ್ಮನ್ನು ಕಾಪಾಡುವವರಾರೋ ಕಾಣೆವಲ್ಲಾ ! ಎಂದು ಭಯಾವಿಷ್ಟ ರಾಗಿ ಓಡುತ್ತೆ ದೇವೇಂದ್ರನ ಬಳಿಗೆ ಬಂದು-ಎಲ್ಲೆ ಒಡೆಯನೇ ! ಈಗ ಬಲು ಕೇಡಾಳಿಯಾದ ರಾವಣನಿಂದ ನಮ್ಮ ಲೋಕಕ್ಕೆ ಬಹು ಭಯ ಉಂಟಾಗಿರುವುದು. ಈ ಮಹಾ ಭಯವನ್ನು ಪರಿಹರಿಸುವ ಕಾರ್ಯವು ಹರಿ ಹರ ಹಿರಣ್ಯಗರ್ಭರಿಂದಲ್ಲದೆ ಮಿಕ್ಕವರಿಂದ ತೀರದೆಂದು ಹೇಳಿದರು. ಆಗ ಸಭೆಯಲ್ಲಿದ್ದ ಏಕಾದಶರುದ್ರರು ದ್ವಾದ ಶಾದಿತ್ಯರು ಅಷ್ಟವಸುಗಳು ಸಸ್ಯ ಮರುತ್ತುಗಳು ಸಿದ್ದ ರು ಸಾಧ್ವರು ವಿದ್ಯಾಧರರು ಅಪ್ಪರಸ್ಸುಗಳು ಗುಹ ಕರು ಇವರೇ ಮೊದಲಾದ ನಾನಾ ದೇವತೆಗಳೂ ಕೂಡಿ ಶೌರ್ಯಾತಿಶಯದಿಂದ ತಮ್ಮ ತಮ್ಮ ಪರಾಕ್ರಮಾಧಿತ್ಯೋಕ್ತಿಗಳನ್ನು ಹೇಳಿಕೊಳ್ಳುತ್ತ ನಾವೆಲ್ಲರೂ ಇರುವಾಗ ಈ ಖಳನಾದ ದಶಕಂಧರನಿಗೆ ಹೆದರಿಕೊಳ್ಳುವುದೇಕೆ ? ನಾವು ಹೋಗಿ ಅವನ ಬಲವನ್ನೆಲ್ಲಾ ಮುರಿದೊಟ್ಟಿ ಅವನನ್ನು ಲಂಕೆಗೆ ಓಡಿಸುವೆವೆಂದು