ಪುಟ:ಕಥಾಸಂಗ್ರಹ ಸಂಪುಟ ೨.djvu/೩೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


26 ಕಥಾಸಂಗ್ರಹ-೪ ನೆಯ ಭಾಗ ತಂದೆಯನ್ನು ನಿಲ್ಲಿಸಿ ತಾನು ರಥಾರೂಢನಾಗಿ ಮೇಘನಾದನ ಸಮುಖಕ್ಕೆ ತಂದು ನಿಂತು-ಎಲೈ ನೀಚನಿಶಾಚರನೇ! ನೀನೀವರೆಗೂ ದುರ್ಬಲರಾದ ದೇವತೆಗಳನ್ನು ಜಯಿ ಸಿದ ಮಾತ್ರಕ್ಕೆ ಮಹಾಶೂರನಾಗುವಿಯಾ ? ಇದೋ ! ನಾನು ಬಂದಿದ್ದೇನೆ. ಹಿಂದೆ ಗೆಯದೆ ನಿಂತು ನನ್ನೊಡನೆ ಒಂದು ಗಳಿಗೆಯ ವರೆಗೂ ಯುದ್ಧ ಮಾಡಿದರೆ ನಿನ್ನನ್ನು ಕೊಂದು ನಿನ್ನ ಮಾಂಸಖಂಡಗಳನ್ನು ಹಂಚಿ ನಾಯಿ ನರಿ ಹದ್ದು ಕಾಗೆಗಳಿಗೆ ಕೊಡು ವೆನು ಎಂದು ಹೇಳಲು ಮೇಘನಾದನು ಆ ಮಾತುಗಳನ್ನು ಕೇಳಿ ನಸುನಕ್ಕು-ಎಲೆ ಜಯ೦ತನೇ ! ಲೋಕದಲ್ಲಿ ಶೂರರಾದವರು ಯಾವ ಕಾರ್ಯವನ್ನಾದರೂ ಮಾಡಿ ತೋರಿಸುವರಲ್ಲದೆ ನಿನ್ನಂತೆ ಬಾಯಿಗೆ ಬಂದ ಹಾಗೆ ಹರಟುವದಿಲ್ಲವೆಂದು ಹೇಳಿ ಕಾಳ ಸರ್ಪ ಸದೃಶಗಳಾದ ಹತ್ತು ಬಾಣಗಳಿಂದ ಆತನ ಎದೆಯು ಸೀಳಿಹೋಗುವಂತೆ ಹೊಡೆಯಲು ಪಾಕಶಾಸನಿಯು ಆ ಬಾಣಗಳನ್ನು ಮಧ್ಯ ಮಾರ್ಗದಲ್ಲಿಯೇ ಕಡಿದು ಕೆಡಹಿ ನೂರು ಬಾಣಗಳನ್ನು ಪ್ರಯೋಗಿಸಿ ರಾವಣಿಯ ರಥವನ್ನು ಕಡಿದುರುಳಿಸಿ ವಿರಥ ನನ್ನು ಮಾಡಿದನು. ಆಗ ಮೇಘನಾದನು ಕಾಲಾಗ್ನಿ ಯೋಪಾದಿಯಲ್ಲಿ ಜ್ವಲಿಸುತ್ತಿರುವ ನೇತ್ರಗಳುಳ್ಳವನಾಗಿ ಈಶ್ವರದತ್ತವಾದ ಶಕ್ರಾಯುಧವನ್ನು ತೆಗೆದು ಆತನ ಮೇಲೆ ಪ್ರಯೋಗಿಸಲು ಜಯಂತನು ಅದರ ಹೊಡೆತವನ್ನು ತಡೆಯಲಾರದೆ ಕೆಳಗೆ ಬಿದ್ದು ಒದೆದು ಕೊಳ್ಳುತ್ತ ಮೂರ್ಛಯನ್ನು ಹೊಂದಲು ಅವನ ಮಾತಾಮಹನಾದ ಪುಲೋ ಮನು ಶೀಘ್ರವಾಗಿ ಬಂದು ಆತನನ್ನೆತ್ತಿಕೊಂಡು ಹೋದನು. ಆಗ ಬಿಡುಗಣ್ಣರೊಡೆಯನು ರಣರಂಗದಲ್ಲಿ ತನ್ನ ಮಗನನ್ನು ಕಾಣದೆ ತಾನೇ ಯುದ್ಧಕ್ಕೆ ಬರಲು ರಾವಣನು ಅದನ್ನು ಕಂಡು ತನ್ನ ಮಗನನ್ನು ಹಿಂದೆ ನಿಲ್ಲಿಸಿ ಹತ್ತು ಕೈಗಳಿಂದಲೂ ಹತ್ತು ಬಿಲ್ಲುಗಳನ್ನು ತೆಗೆದುಕೊಂಡು ಉಳಿದ ಹತ್ತು ಕೈಗಳಿಂದ ಅವು ಗಳಲ್ಲಿ ಬಾಣಸಂಧಾನವನ್ನು ಮಾಡಿ ಆಕರ್ಣಾ೦ತವಾಗಿ ಸೆಳೆದು ಬಿಡುತ್ತಿರಲು ದೆಸೆಗೆ ಳೇನಾದುವೋ ? ಬಾನೆಲ್ಲ ಡಿಗಿತೋ ? ಜಗಜ ನಜಾಲವೇನಾಯಿತೋ ? ಗಿರಿ ತರು ಸಮುದ್ರಗಳೇನಾದುವೋ ? ಎಂದು ಜನರು ಭಯಕಂಪಿತರಾಗಿ ಹೇಳಿಕೊಳ್ಳುತ್ತಿರಲು ದೇವೇಂದ್ರನು ಆ ಬಾಣಗಳನ್ನೆಲ್ಲಾ ನುಚ್ಚು ನೂರಾಗಿ ಇಕ್ಕಡಿಗೆಯೊಟ್ಟಿ ಪರಂಪರಾ ಪ್ರಯುಕ್ತವಾದ ಬಾಣಜಾಲದಲ್ಲಿ ತಲೆಯೆತ್ತದಂತೆ ರಾವಣನನ್ನು ಹೂಳಲು ಆಗ ದಶ ಕಂಠನು ಇಂದ್ರನ ಬಾಣಗಳನ್ನೆಲ್ಲಾ ತುಂಡುತುಂಡಾಗುವಂತೆ ಕಡಿದು ಭೂಮಿಗೆ ಬೀಳಿಸುತ್ತಿದ್ದನು. ಪುನಃ ದೇವೇಂದ್ರನು ಬಾಣಪ್ರಯೋಗವನ್ನು ಮಾಡಿ ರಾವಣನ ಸಾರಥಿಯನ್ನು ಕೊಂದು ರಥವನ್ನು ಕೊಚ್ಚಿ ಹತ್ತು ಕೈಗಳಲ್ಲಿದ್ದ ಬಿಲ್ಲುಗಳನ್ನೂ ಖಂಡಿಸಿ ಕವಚವನ್ನು ಕತ್ತರಿಸಿ ಮೂದಲಿಸಿ ಸಿಂಹನಾದವನ್ನು ಮಾಡಲು ರಾವಣನು ಗದೆಯನ್ನು ತೆಗೆದು ಕೊಂಡು ಬೀಸಿ ತನ್ನನ್ನು ಹೊಡೆಯುವುದಕ್ಕಾಗಿ ಬರುವುದನ್ನು ಶಚೀಪತಿಯು ತಿಳಿದು ತನ್ನ ವಜ್ರಾಯುಧವನ್ನು ಎತ್ತಿ ಅಪ್ಪಳಿಸಲು ರಾವಣನು ಕೆಳಗೆ ಬಿದ್ದು ಮೂರ್ಛಾಗತನಾಗಿ ಚೇತರಿಸಿಕೊಳ್ಳದೆ ಇದ್ದನು.

  • ಆಗ ರಾವಣಿಯು ಈಶ್ವರದತ್ತವಾದ ತಾಮಸೀ ಎಂಬ ಮಾಯೆಯನ್ನು ಆಶ್ರ ಯಿಸಿ ಇ೦ದ್ರನ ಕಣ್ಣಿಗೆ ಕಾಣಿಸಿಕೊಳ್ಳದೆ ಅಪರಿಮಿತವಾದ ಮಹಾಸ್ತ್ರಗಳನ್ನು ಸುರಿ