ಪುಟ:ಕಥಾಸಂಗ್ರಹ ಸಂಪುಟ ೨.djvu/೪೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


30 ಕಥಾಸಂಗ್ರಹ-೪ ನೆಯ ಭಾಗ ನಿನ್ನ ಜಗದೇಕವೀರತ್ವವೂ ಮಾನವೂ ತಿಳಿದ ಹಾಗೇ ಆಯಿತು. ಹತ್ತು ತಲೆಯ ಹುಳು ವಿನಂತಿರುವ ನಿನ್ನನ್ನು ಕೊಲ್ಲಬೇಕಾದರೆ ನನ್ನ ಸಹಸ್ರಬಾಹುಗಳೂ ಬೇಕೇ ? ನಿಮೇಷ ಕಾಲ ಮಾತ್ರ ನಿಲ್ಲು ಎಂದು ಹೇಳಿ ಸ್ತ್ರೀಯರನ್ನೆಲ್ಲಾ ಪಟ್ಟಣಕ್ಕೆ ಕಳುಹಿಸಿ ಗದಾ ಯುಧವನ್ನು ತಗೆದು ಕೊಂಡು ಹಗಲೂ ರಾತ್ರಿಯ ಮೂರು ದಿನಗಳ ವರೆಗೂ ರಾವ ಣನೊಡನೆ ಕಾದಾಡಲು ಆ ಮೇಲೆ ರಾವಣನು ಬಲಹೀನನಾಗಿ ಕಾರ್ತವೀರ್ಯಾರ್ಜು ನನ ಗದಾಘಾತದಿಂದ ಮೂರ್ಛಿತನಾಗಲು ಅವನನ್ನು ಎತ್ತಿ ತನ್ನ ರಥದ ಮೇಲೆ ಹಾಕಿಕೊಂಡು ಕಾರ್ತವೀರ್ಯಾರ್ಜುನನು ಮಾಹಿಷ್ಕ ತೀನಗರಕ್ಕೆ ಹೊರಟುಹೋದನು. ಆಗ ಪ್ರಹಸ್ತಾದಿ ಪ್ರಧಾನರೆಲ್ಲರೂ ಹೆದರಿ ಭಯಕ೦ಪಿತವಾದ ರಾಕ ಸಸೇನೆಯೊಡನೆ ಓಡಿಬಂದು ಲಂಕಾಪಟ್ಟಣವನ್ನು ಸೇರಿ ನಿಟ್ಟುಸಿರು ಬಿಟ್ಟು ಬದುಕಿದೆವೆಂದು ಹೇಳಿ ಕೊಂಡರು. ಇತ್ತಲಾ ಕಾರ್ತವೀರ್ಯಾರ್ಜುನನು ಮಾಹಿಷ್ಮತೀನಗರಕ್ಕೆ ಹೋಗಿ ಮರ್ಛಾ ಗತನಾಗಿರುವ ದಶಾನನನಿಗೆ ಶೈತ್ಯೋಪಚಾರಗಳನ್ನು ಮಾಡಿಸಿ ಚೇತರಿಸಿಕೊಳ್ಳುವಂತೆ ಮಾಡಿದ ಮೇಲೆ ಅವನ ಕಾಲುಗಳಿಗೆ ಸುವರ್ಣದ ಸಂಕೋಲೆಗಳನ್ನು ಹಾಕಿಸಿ ಕಾರಾ ಗೃಹದಲ್ಲಿ ಡಿಸಿದನು. ಹೀಗೆ ರಾವಣನು ಒ೦ದು ಸಹಸ್ರಸಂವತ್ಸರಗಳ ವರೆಗೂ ಮಾಹಿ ಷ ತೀನಗರದ ಕಾರಾಲಯದಲ್ಲಿರುತ್ತಿರಲು ಈ ವರ್ತಮಾನವನ್ನು ಕೇಳಿದ ಆತನ ಅಜ್ಜ ನಾದ ಪುಲಸ್ಯ ಮುನಿಯು ಮಾಹಿಷ್ಮತೀನಗರಕ್ಕೆ ಬಂದು ಕಾರ್ತವೀರ್ಯಾರ್ಜು ನನಿಂದ ಸತ್ಕೃತನಾಗಿ ಆತನನ್ನು ಅನೇಕ ವಿಧವಾಗಿ ಶ್ಲಾಘಿಸಿ ನೀನು ಇಂದ್ರಾದಿದಿಗೀ ಶರನ್ನು ಜಯಿಸಿದ ದುರುಳನಾದ ಈ ದಶಾನನನನ್ನು ಭಂಗಿಸಿ ದೇವತೆಗಳಿಗೂ ಮುನಿಗ ಳಿಗೂ ಸಂತೋಷವನ್ನುಂಟುಮಾಡಿದೆ. ಇವನ ಗರ್ವವನ್ನು ಮುರಿದು ಈ ರೀತಿಯಾಗಿ ಮಾನಭಂಗ ಮಾಡಿದುದೇ ಸಾಕು. ಇವನು ನನ್ನ ಮೊಮ್ಮಗನಾದುದರಿಂದ ಇವ ನನ್ನು ನನ್ನ ವಶಕ್ಕೆ ಕೊಡಬೇಕೆಂದು ಕೇಳಿಕೊಂಡುದರಿಂದ ಕಾರ್ತವೀರ್ಯಾರ್ಜುನನು ರಾವಣನ ಸಂಕೋಲೆಗಳನ್ನು ಕಡಿಸಿ ಮಂಗಳಸ್ನಾನಾದಿಗಳನ್ನು ಮಾಡಿಸಿ ತನ್ನ ಸಭೆಗೆ ಕರಿಸಿ ಸಂತೋಷದಿಂದ ಆಲಿಂಗಿಸಿಕೊಂಡು ದಿವ್ಯವಸ್ನಾಭರಣಗಳನ್ನು ಕೊಟ್ಟು ಶೂರ ರಾದವರಿಗೆ ಒಂದು ಕಾಲದಲ್ಲಿ ಜಯವೂ ಇನ್ನೊಂದು ಕಾಲದಲ್ಲಿ ಪರಾಜಯವೂ ಉಂಟಾಗುವುದು ಸ್ವಾಭಾವಿಕವು. ಅದು ಕಾರಣ ಇಷ್ಟು ಮಾತ್ರಕ್ಕಾಗಿ ವ್ಯಸನಪಡ ಬಾರದೆಂದು ಸಮಾಧಾನಪಡಿಸಿ ಅವನನ್ನು ಪುಲಸ್ತ್ರರ ವಶಕ್ಕೆ ಕೊಡಲು ಅವರು ಅವ ನನ್ನು ಕರೆದು ಕೊಂಡು ಬಂದು ಲಂಕೆಯಲ್ಲಿ ಬಿಟ್ಟು ಇನ್ನು ಮೇಲಾದರೂ ದುರ್ವಾಪಾರದಿಂದ ನಡೆಯದೆ ವಿನಯಾದಿಗುಣಗಳಿಂದ ಕೂಡಿ ಸುಖವಾಗಿ ಜೀವಿಸಿ ಕೊಂಡಿರೆಂದು ವಿವೇಕವನ್ನು ಬೋಧಿಸಿ ಸ್ವಾಶ್ರಮವನ್ನು ಕುರಿತು ಹೊರಟುಹೋದರು. ಅನಂತರದಲ್ಲಿ ಕೂರನೂ ಮೂರ್ಖನೂ ಆದ ದಶಕಂಧರನು ಕಾರ್ತವೀರ್ಯಾ ರ್ಜುನನಿಂದ ತನಗಾದ ಮಾನಭಂಗವನ್ನು ಮನಸ್ಸಿನಲ್ಲಿ ಗಣಿಸದೆ ಕಿಪ್ರಿಂಧಾಧಿಪತಿ ಯಾದ ವಾಲಿಯೆಂಬ ವಾನರಚಕ್ರವರ್ತಿಯೊಡನೆ ದ್ವಂದ್ವಯುದ್ಧವನ್ನು ಮಾಡಿ ಆತ ನನ್ನು ಜಯಿಸಬೇಕೆಂದು ಒಬ್ಬನೇ ! ಲಂಕೆಯಿಂದ ಹೊರಟು ಅರುಣೋದಯ ಕಾಲದಲ್ಲಿ