ಪುಟ:ಕಥಾಸಂಗ್ರಹ ಸಂಪುಟ ೨.djvu/೪೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

32 ಕಥಾಸಂಗ್ರಹ-೪ ನೆಯ ಭಾಗ ಕಾಣೆನು. ನಾನು ನಿನ್ನಿಂದ ಪರಾಜಿತನಾದೆನು. ಇಂಥ ಶೂರಾಗ್ರೇಸರನಾದ ನಿನ್ನೊ ಡನೆ ಸ್ನೇಹವನ್ನು ಅಪೇಕ್ಷಿಸುವೆನು ಎಂದು ಕೇಳಿಕೊಳ್ಳಲು ವಾಲಿಯು ಅವನನ್ನು ತನ್ನ ಅರಮನೆಗೆ ಕರೆದು ಕೊಂಡು ಹೋಗಿ ಅಗ್ನಿ ಸಾಕ್ಷಿಯಾಗಿ ಸ್ನೇಹವನ್ನು ಮಾಡಿಕೊಂಡು ಒಂದು ತಿಂಗಳ ವರೆಗೂ ತನ್ನ ಮನೆಯಲ್ಲೇ ಇಟ್ಟು ಕೊಂಡಿದ್ದು ಬಹುಮಾನಗಳನ್ನು ಮಾಡಿ ಲಂಕಾಪಟ್ಟಣಕ್ಕೆ ಕಳುಹಿಸಿಕೊಡಲು ರಾವಣನು ಲಂಕೆಗೆ ಬಂದು ಸುಖ ದಿಂದಿದ್ದನು. 2. RAMA'S BIRTH, MARRIAGE, AND BANISHMENT TO THE FOREST ೨ ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ. ಬ್ರಹ್ಮನಿಂದ ವರವನ್ನು ಹೊಂದಿ ಮಹಾಗರ್ವಿತನಾಗಿ ಅಪಮಾನಗಳಿಗೆ ಹೇಸದೆ ಇಂದ್ರಾದಿ ಲೋಕಪಾಲಕರನ್ನೂ ಸ್ವರ್ಗ ಮರ್ತ್ಯ ಪಾತಾಳಗಳೆಂಬ ಲೋಕತ್ರಯ ವನ್ನೂ ಜಯಿಸಿ ಪರಭೀಕರನಾಗಿ ರಾಕ್ಷ ಸಚಕ್ರವರ್ತಿತ್ವವನ್ನು ಹೊಂದಿ ಲಂಕಾನಗರ ದಲ್ಲಿ ವಾಸಮಾಡಿಕೊಂಡಿದ್ದ ರಾವಣನು ಋಷಿಗಳು ಮಾಡುವ ತಪೋಯಜ್ಞಗಳನ್ನು ಕೆಡಿಸುತ್ತಾ ಸುಜನರನ್ನು ಬಾಧಿಸಿ ಬಡಿದಿಡುತ್ತ ಲೋಕಕಂಟಕನಾಗಿರಲು ಇಂದ್ರಾದಿ ಸಕಲ ದೇವತೆಗಳೂ ಅವನ ಬಾಧೆಯನ್ನು ತಡೆಯಲಾರದೆ ಸತ್ಯ ಲೋಕಕ್ಕೆ ಹೋಗಿ ಚತುರ್ಮುಖಬ್ರಹ್ಮನೊಡನೆ ಲೋಕಗಳಿಗೂ ತಮಗೂ ರಾವಣನಿಂದುಂಟಾಗುತ್ತಿರುವ ಮಹಾಹಿಂಸೆಯನ್ನು ಹೇಳಿಕೊಂಡು ಪ್ರಲಾಪಿಸಲು ಆಗ ಬ್ರಹ್ಮನು ದಯೆಯಿ೦ದ ಕೂಡಿದವನಾಗಿ ಆ ದೇವತೆಗಳನ್ನು ಕರೆದುಕೊಂಡು ಹೊರಟು ಇ೦ಗಡಲೆಡೆಗೆ ತಂದು ವಿಷ್ಣುವಿನೊಡನೆ ಕ್ರೂರನಾದ ರಾವಣನ ಉಪದ್ರವವನ್ನೂ ದೌಷ್ಟ್ರವನ್ನೂ ಹೇಳಿಕೊ ಳ್ಳಲು ಆಗ ವಿಷ್ಣುವು - ಎಲೈ ಕಮಲಸಂಭವನೇ ! ನಾನು ಇನ್ನು ಕೆಲದಿನಗಳಿಗೆ ಭೂಲೋಕದಲ್ಲಿ ಅವತರಿಸಿ ಜನಹಿಂಸಕರಾದ ರಾವಣಾದಿ ರಾಕ್ಷಸರನ್ನು ಸಂಹರಿಸು ವೆನು, ಆ ವರೆಗೂ ನೀವೆಲ್ಲರೂ ಬಾಧೆಯನ್ನು ಸಹಿಸಿಕೊಂಡಿರಬೇಕೆಂದು ಅಭಯವಚೆ ನವನ್ನು ಹೇಳಲು ಆಗ ಅವರೆಲ್ಲರೂ ಸಂತುಷ್ಟರಾಗಿ ತಮ್ಮ ತಮ್ಮ ವಾಸಸ್ಥಾನಗಳಿಗೆ ಬಂದು ರಾವಣವಿನಾಶಕಾಲವನ್ನೆ ಸಂಕಲ್ಪಿಸುತ್ತಿದ್ದರು. ಇತ್ಯ ಭೂಲೋಕದಲ್ಲಿ ಅಯೋಧ್ಯಾನಗರಾಧಿಪತಿಯಾದ ದಶರಥರಾಜನು ಬಹಳ ದಿವಸಗಳ ವರೆಗೂ ತನಗೆ ಪುತ್ರಸಂತಾನವಿಲ್ಲದೆ ಹೋದುದರಿಂದ ಬಹಳ ವ್ಯಸನಾ ಕಾಂತನಾಗಿದ್ದು ಕಡೆಗೆ ಋಷಿಗಳ ಉಪದೇಶದಿಂದ ` ಪುತ್ರಕಾಮೇಷ್ಟಿಯಾಗವನ್ನು ಮಾಡಿ ಅದರ ಪರಿಶುದ್ಧವಾದ ಪ್ರಸಾದವನ್ನು ತನ್ನ ಮೂರು ಜನ ಸತಿಯರಿಗೂ ಕೊಡಲು ಆಗ ಮೊದಲೇ ದುಷ್ಟ ಶಿಕಾ ರ್ಥವಾಗಿ ಭೂಲೋಕದಲ್ಲಿ ಅವತರಿಸಬೇಕೆಂದಿದ್ದ ವಿಷ್ಣು ವು ದಶರಥನ ಮೊದಲನೆಯ ಹೆಂಡತಿಯಾದ ಕೌಸಲ್ಲೆಯ ಗರ್ಭದಲ್ಲಿ ಅರ್ಧಾ೦ಶ ದಿಂದ ರಾಮನೆಂದೂ ಎರಡನೆಯ ಹೆಂಡತಿಯಾದ, ಸುಮಿತ್ರೆಯ ಗರ್ಭದಲ್ಲಿ ಪಾದಾಂಶ